ಡಿಫರೆಂಟ್ ಲುಕ್‍ನಲ್ಲಿ ವೆಂಕಿ ಮಾಮ..!

ಟಾಲಿವುಡ್‍ನ ಪ್ರಮುಖ ಹೀರೋಗಳ ಪೈಕಿ ಒಬ್ಬರಾದ ನಟ ವಿಕ್ಟರಿ ವೆಂಕಟೇಶ್ ಇತ್ತೀಚನ ವರ್ಷಗಳಲ್ಲಿ ಫ್ಯಾಮಿಲಿ ಓರಿಯೆಂಟೇಡ್ ಚಿತ್ರಗಳಲ್ಲಿ ನಟಿಸಿ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗಿದ್ದೇ ಹೆಚ್ಚು. ಇತ್ತಿಚಿಗಷ್ಟೇ ರಿಲೀಸ್ ಆದ ವೆಂಕಿ ಮಾಮ ಸಿನಿಮಾ ಬಾಕ್ಸಾಫೀಸ್‍ನಲ್ಲಿ ಹಿಟ್ ಆಗಿತ್ತು.

ಇದೀಗ ನಾರಪ್ಪ ಎಂಬ ಸಿನಿಮಾದಲ್ಲಿ ಡಿಫರೆಂಟ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಪೋಸ್ಟರ್‍ಗಳು ಸಿಕ್ಕಾಪಟ್ಟೆ ಗಮನ ಸೆಳೆಯುತ್ತಿವೆ. ರೆಬೆಲ್ ಲುಕ್‍ನಲ್ಲಿ ವಿಕ್ಟರಿ ವೆಂಕಟೇಶ್ ಪೋಸ್ ನೀಡಿದ್ದಾರೆ.

ಶ್ರೀಕಾಂತ್ ಅಡ್ಡಾಲ ನಿರ್ದೇಶನದ ನಾರಪ್ಪಗೆ ಈಗಾಗಲೇ ಶೂಟಿಂಗ್ ನಡೆಯುತ್ತಿದೆ. ಸುರೇಶ್ ಪ್ರೊಡಕ್ಷನ್ಸ್‍ನಲ್ಲಿ ಸಹೋದರ ಡಿ ಸುರೇಶ್ ಬಾಬು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.

LEAVE A REPLY

Please enter your comment!
Please enter your name here