ಆನ್ಸ್ಕ್ರೀನ್ ಕೆಮಿಸ್ಟಿ ಮೂಲಕ ರೀಲ್ ಪೇರ್ ಎಂದು ಹೆಸರುತಂದುಕೊಂಡಿದ್ದು ಗೀತಾಗೋವಿಂದಂ ಜೋಡಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಜೋಡಿ.. ಎರಡು ಸಿನಿಮಾಗಳಲ್ಲಿ ಸ್ಕ್ರೀನ್ ಹಂಚಿಕೊಂಡ ಇವರಿಬ್ಬರೂ ಲವ್ವಲ್ಲಿ ಇದ್ದಾರೆ ಎಂಬ ಸುದ್ದಿ ಆಗಾಗ ಹರಡುತ್ತಲೇ ಇರುತ್ತದೆ. ಇದನ್ನು ಇವರಿಬ್ಬರೂ ಆಗಾಗ ಖಂಡಿಸಿದ್ದೂ ಆಗಿದೆ.
ವೃತ್ತಿ ಜೀವನದಲ್ಲಿ ತುಂಬಾ ಬ್ಯುಸಿ ಆಗಿರುವ ಇವರಿಬ್ಬರೂ ತುಂಬಾ ದಿನಗಳ ಬಳಿಕ ಜಂಟಿಯಾಗಿ ಕೆಮರಾ ಕಣ್ಣಿಗೆ ಸಿಕ್ಕಿದ್ದಾರೆ. ತಮ್ಮ ತಮ್ಮ ಸಿನಿಮಾಗಳ ಶೂಟಿಂಗ್ ಸಲುವಾಗಿ ಮುಂಬೈನಲ್ಲಿರುವ ರಶ್ಮಿಕಾ-ವಿಜಯ್ ದೇವರಕೊಂಡ ಬುಧವಾರ ರಾತ್ರಿ ನಗರದ ಪ್ರಮುಖ ರೆಸ್ಟೋರೆಂಟ್ಗೆ ತೆರಳಿದ್ದಾರೆ.
ರೆಸ್ಟೋರೆಂಟ್ ಮುಂದೆ ಇಬ್ಬರು ನೀಡಿರುವ ಪೋಸ್ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಇಬ್ಬರು ರಿಯಲ್ ಲೈಫಲ್ಲೂ ಜೋಡಿಯಾಗಲಿ ಎಂದು ಹಾರೈಸಿದ್ದಾರೆ.