ಟ್ರಾಫಿಕ್‌ ನಿಯಮದಲ್ಲಿ ಐತಿಹಾಸಿಕ ನಿರ್ಧಾರ…!

ಟ್ರಾಫಿಕ್‌ ನಿಯಮಗಳನ್ನು ಬ್ರೇಕ್‌ ಮಾಡುವವರಿಗೆ ಇಲ್ಲಿದೆ ಶಾಕಿಂಗ್‌ ಸುದ್ದಿ! ಹೌದು, ಈಗಾಗಲೇ ಟ್ರಾಫಿಕ್‌ ನಿಯಮಗಳನ್ನು ಬ್ರೇಕ್‌ ಮಾಡುವವರಿಗೆ ಕಡಿವಾಣ ಹಾಕಲು ದಂಡ ಹೆಚ್ಚಳ, ಫಾಸ್ಟ್‌ ಟ್ಯಾಗ್‌ ಮುಂತಾದ ಬದಲಾವಣೆಗಳು ಆದ ಬಳಿಕ ಇದೀಗ ಕೇಂದ್ರ ಸಾರಿಗೆ ಇಲಾಖೆ ಮತ್ತೊಂದು ಬಿಸಿ ಮುಟ್ಟಿಸುವ ನಿರ್ಧಾರಕ್ಕೆ ಮುಂದಾಗಿದೆ.

ಕೇಂದ್ರ ಮೋಟಾರು ವಾಹನಗಳ ನಿಯಮ- 1989ರ ನಿಯಮ, 50 ಮತ್ತು 51ರ ಪ್ರಕಾರ ಎಲ್ಲಾ ವಾಹನಗಳು ನೋಂದಣಿ ಫಲಕಗಳನ್ನು ಅಳವಡಿಸಿಕೊಳ್ಳಬೇಕು ಮತ್ತು ಅದರಲ್ಲಿ ನೋಂದಣಿ ಸಂಖ್ಯೆ ಮಾತ್ರ ಇರತಕ್ಕದ್ದು. ಯಾವುದೇ ರೀತಿಯ ಚಿತ್ರ, ವಿವಿಧ ದೇವರಗಳ ಹೆಸರುಗಳನ್ನು, ಸಂಘ ಸಂಸ್ಥೆಗಳ ಹೆಸರು, ಡೈಲಾಗ್‌ ಗಳನ್ನು ಬರೆಸುವುದು ಕಾನೂನಿಗೆ ವಿರುದ್ಧವಾಗಿದೆ.

ವಾಹನ ಸವಾರರು ಇನ್ನಾದರೂ ಎಚ್ಚೆತ್ತು ಇದನ್ನು ಸರಿಪಡಿಸಿಕೊಳ್ಳದಿದ್ದಲ್ಲಿ ಮೋಟಾರು ವಾಹನಗಳ ನಿಯಮದ ಪ್ರಕಾರ ಕ್ರಮ ಕೈಗೊಳ್ಳಲಾಗುವುದು.

LEAVE A REPLY

Please enter your comment!
Please enter your name here