ಟ್ರಂಪ್ ಭಾರತ ಪ್ರವಾಸ.. ದೇಶಕ್ಕೆ ಈ ಲಾಭ ಮಾಡಿಕೊಡ್ತಾರಾ ಮೋದಿ..?

ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಭಾರ ಪ್ರವಾಸದಿಂದ ಯಾರಿಗೆ ಲಾಭ ಆಗುತ್ತೆ..? ಭಾರತಕ್ಕಾ..? ಅಮೆರಿಕಾಗಾ..? ಹಣದ ಹರಿವು ಹರಿಯುವುದು ಎತ್ತ..? ಯಾರಿಗೆ ಹೆಚ್ಚು ಅನುಕೂಲ..?

ಸುಮಾರು 10 ಬಿಲಿಯನ್ ಡಾಲರ್ ಮೊತ್ತದ ರಕ್ಷಣಾ ಒಪ್ಪಂದವನ್ನು ಅಮೆರಿಕಾ ಜೊತೆ ಭಾರತ ಮಾಡಿಕೊಳ್ಳಲಿದೆ. ಅಂದರೆ, ತಮ್ಮಲ್ಲಿನ ರಕ್ಷಣಾ ಸಾಮಗ್ರಿಗಳನ್ನು ಮಾರಾಟ ಮಾಡಲು ಟ್ರಂಪ್ ಈ ಪ್ರವಾಸ ಬಂದಿದ್ದಾರೆ. ಜೊತೆಗೆ ಅಮೆರಿಕಾದ ಚಿಕನ್ ಲೆಗ್‍ಪೀಸ್, ಹೈನೋತ್ಪನ್ನಗಳಿಗೆ ಭಾರತದಲ್ಲಿ ಮಾರುಕಟ್ಟೆ ಕಲ್ಪಿಸುವ ಸಂಬಂಧ ಒಪ್ಪಂದ ಏರ್ಪಡುವ ಸಂಭವ ಇದೆ. ಇದರ ಜೊತೆಗೆ ಇನ್ನಿತರೆ ಒಪ್ಪಂದಗಳು ಏರ್ಪಡುವ ಸಾಧ್ಯತೆಗಳಿವೆ. ಇದರಿಂದ ಲಾಭ ಆಗೋದು ಅಮೆರಿಕಾಗೆ..

ಇನ್ನು ಭಾರತಕ್ಕೆ ಏನು ಲಾಭ ಆಗಬಹುದು..?
ಅಮೆರಿಕಾದೊಂದಿಗೆ ರಕ್ಷಣಾ ಒಪ್ಪಂದದ ಮೂಲಕ ದಕ್ಷಿಣ ಏಷ್ಯಾದ ಬಲಿಷ್ಠ ರಾಷ್ಟ್ರ ಆಗಬಹುದು.. ಆದರೆ,

ಹೆಚ್1ಬಿ ವೀಸಾ, ಜಿಎಸ್‍ಪಿಯಂತಹ ಪ್ರಮುಖ ಸಮಸ್ಯೆಗಳ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷರ ಜೊತೆ ಮಾತನಾಡುತ್ತಾರಾ..? ಈ ಸಮಸ್ಯೆ ಬಗೆಹರಿಸಿ, ಟೆಕ್ಕಿಗಳಿ, ವಾಣಿಜ್ಯ ವ್ಯಾಪಾರಕ್ಕೆ ಅನುಕೂಲ ಮಾಡಿಕೊಡುತ್ತಾರಾ ಎಂಬ ಪ್ರಶ್ನೆ ಎದ್ದಿದೆ.

ಇರಾನ್‍ನಿಂದ ತೈಲ ಖರೀದಿ ಮಾಡಬೇಡಿ ಎಂಬ ಷರತ್ತನ್ನು ಭಾರತದ ಮುಂದೆ ಅಮೆರಿಕಾ ಇಟ್ಟಿದೆ. ಒಮದು ವೇಲೆ, ಇರಾನ್‍ನಿಂದ ತೈಲ ಖರೀದಿ ಮಾಡೋದನ್ನು ನಿಲ್ಲಿಸಿದರೇ, ಅಮೆರಿಕಾ ದೇಶ ಭಾರತಕ್ಕೆ ಆ ತೈಲ ಸರಬರಾಜು ಮಾಡುವ ಭರವಸೆಯನ್ನು ಟ್ರಂಪ್‍ರಿಂದ ಮೋದಿ ಪಡೆಯುತ್ತಾರಾ..? ಎಂಬ ಪ್ರಶ್ನೆಯನ್ನು ಕಾಂಗ್ರೆಸ್ ಎತ್ತಿದೆ.

ಟ್ರಂಪ್ ಅಧಿಕಾರಕ್ಕೆ ಬಂದ ಮೇಲೆ ಉಕ್ಕು ಉದ್ದಿಮೆಗೆ ಭಾರೀ ಪೆಟ್ಟು ಬಿದ್ದಿದೆ. ಅಧಿಕ ಸುಂಕದ ಕಾರಣ ಸ್ಟೀಲ್ ರಫ್ತು ಶೇ.50ರಷ್ಟು ಬಿದ್ದಿದೆ. ಟ್ರಂಪ್ ಬಳಿ ಈ ವಿಚಾರ ಪ್ರಸ್ತಾಪಿಸಿ, ಸ್ಟೀಲ್ ರಫ್ತು ಹೆಚ್ಚಾಗುವಂತೆ ಮಾಡುತ್ತಾರಾ ಎಂಬ ಪ್ರಶ್ನೆ ಎದ್ದಿದೆ.

LEAVE A REPLY

Please enter your comment!
Please enter your name here