ಟೊರಾಂಟೊ ಸಿನಿಮೋತ್ಸವದಲ್ಲಿ ಪ್ರದರ್ಶನ ಕಾಣಲಿರುವ ಶ್ರದ್ಧಾ ಶ್ರೀನಾಥ್ ಅಭಿನಯದ ತೆಲುಗಿನ ‘ಜೆರ್ಸಿ’

ಬೆಂಗಳೂರು: ವಿಶ್ವದೆಲ್ಲೆಡೆ ಕೊರೊನಾ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಈಗಾಗಲೇ ದಿನಾಂಕ ನಿಗದಿ ಮಾಡಿಕೊಂಡು ಸಜ್ಜಾಗಿದ್ದ ಹಲವು ಸಿನಿಮೋತ್ಸವಗಳು ಮುಂದೂಡಲ್ಪಟ್ಟಿವೆ. ಇನ್ನು ಕೆಲವು ಆನ್​ಲೈನ್​ನಲ್ಲಿಯೇ ಫಿಲಂ ಫೆಸ್ಟಿವಲ್ ಮಾಡಿಕೊಂಡಿವೆ.

ಮಾಡಿಕೊಳ್ಳುತ್ತಿವೆ. ಅದೇ ರೀತಿ ಶ್ರದ್ಧಾ ಶ್ರೀನಾಥ್ ಸಹ ಸಿನಿಮೋತ್ಸವಕ್ಕೆ ಹೊರಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅಂದರೆ, ಟಾಲಿವುಡ್​ನಲ್ಲಿ ಕಳೆದ ವರ್ಷ ತೆರೆಕಂಡು, ವ್ಯಾಪಕ ಮೆಚ್ಚುಗೆ ಪಡೆದುಕೊಂಡಿದ್ದ ‘ಜೆರ್ಸಿ’ ಸಿನಿಮಾ ಟೊರಾಂಟೊ ಸಿನಿಮೋತ್ಸವದಲ್ಲಿ ಪ್ರದರ್ಶನ ಕಾಣಲಿದೆ. ಈ ವಿಚಾರ ಚಿತ್ರತಂಡದ ಖುಷಿಗೆ ಕಾರಣವಾಗಿದೆ.

ಇಂಟರ್​ನ್ಯಾಷನಲ್ ಇಂಡಿಯನ್ ಫಿಲಂ ಫೆಸ್ಟಿವಲ್ ಟೊರಾಂಟೊ (ಐಐಎಫ್​ಎಫ್​ಟಿ), ಆಗಸ್ಟ್ 11ರಿಂದ 15ರ ವರೆಗೆ ನಡೆಯಲಿದ್ದು, ಈ ವರ್ಷ ಒಟ್ಟು ಆರು ಭಾರತೀಯ ಸಿನಿಮಾಗಳು ಪ್ರದರ್ಶನ ಆಗಲಿವೆ. ಇದರಲ್ಲಿ ಒಂದು ಡಾಕ್ಯುಮೆಂಟರಿ ಮತ್ತೊಂದು ಕಿರುಚಿತ್ರ ಸೇರಿದ್ದು, ತೆಲುಗಿನ ‘ಜೆರ್ಸಿ’, ತಮಿಳಿನ ‘ಕೈದಿ’, ಹಿಂದಿಯ ‘ಸೂಪರ್ 30’, ಮಲಯಾಳಂನ ‘ಟ್ರಾನ್ಸ್’ ಸಿನಿಮಾಗಳೂ ಸ್ಥಾನ ಪಡೆದಿವೆ.

ನಾನಿ ಮತ್ತು ಶ್ರದ್ಧಾ ಶ್ರೀನಾಥ್ ಮುಖ್ಯಭೂಮಿಕೆ ನಿಭಾಯಿಸಿದ್ದ ‘ಜೆರ್ಸಿ’ ಸಿನಿಮಾವನ್ನು ಗೌತಮ್ ತಿನ್ನನುರಿ ನಿರ್ದೇಶನ ಮಾಡಿದ್ದರು. ಸಿತಾರಾ ಎಂಟರ್ ಟೇನ್​ವೆುಂಟ್ಸ್ ಚಿತ್ರಕ್ಕೆ ಬಂಡವಾಳ ಹೂಡಿತ್ತು. ಗಳಿಕೆ ವಿಚಾರದಲ್ಲೂ ಒಳ್ಳೆಯ ಕಲೆಕ್ಷನ್ ಪಡೆದುಕೊಂಡಿದ್ದ ‘ಜೆರ್ಸಿ’ ಬಾಲಿವುಡ್​ನಲ್ಲಿ ರಿಮೇಕ್ ಆಗುತ್ತಿದ್ದು, ಶಾಹೀದ್ ಕಪೂರ್ ನಾಯಕನಾಗಿ ನಟಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here