ಟಿವಿ ಮುಟ್ಟಿದ್ರೆ ಕೊರೋನಾ ಮಾಯ..! ಇನ್ನೂ ಏನೇನ್ ಕೇಳ್ಬೇಕೋ..?

ಇಡೀ ಜಗತನ್ನು ಕೊರೋನಾ ವ್ಯಾಪಿಸಿರುವುದು ಹಾಗಿರಲಿ.. ಕೊರೋನಾ ಹೆಸರಲ್ಲಿ ಒಂದಿಷ್ಟು ಮಂದಿ, ಅಮಾಯಕ ಜನರಿಗೆ ಮಂಕುಬೂದಿ ಎರಚುತ್ತಿದ್ದಾರೆ. ಸಾವಿರಾರು ರೂಪಾಯಿ ಖರ್ಚು ಮಾಡಿದರೂ, ಈ ಮಾರಕ ಸೋಂಕಿಗೆ ಔಷಧಿ ಕಂಡು ಹಿಡಿಯಲು ಆಗ್ತಿಲ್ಲ ಎಂದು ಎಲ್ಲಾ ವೈದ್ಯಕೀಯ ಸಂಶೋಧಕರು ತಲೆ ತಲೆ ಚಚ್ಚಿಕೊಳ್ಳುತ್ತಿದ್ದಾರೆ.

ಇಂತಹ ಸಂದರ್ಭದಲ್ಲಿ ತಾನು ಕೋರೋನಾ ವಾಸಿ ಮಾಡುತ್ತೇನೆ ಎಂದು ವ್ಯಕ್ತಿಯೊಬ್ಬರು ಘೋಷಿಸಿಕೊಂಡಿದ್ದಾರೆ.

ಕೊರೋನಾ ಸೋಂಕಿತನನ್ನು ಕನಿಷ್ಠ ಪಕ್ಷ ಟಚ್ ಕೂಡ ಮಾಡಲ್ಲ. ಸಾವಿರಾರು ಮೈಲಿ ದೂರದಿಂದಲೇ ತಾನು ಅದ್ಭುತ ಮಾಡುತ್ತೇನೆ ಎಂದು ಅಮೆರಿಕಾದ ಕೆನ್ನೆತ್ ಕೋಪ್‍ಲ್ಯಾಂಡ್ ಎನ್ನುವವರು ಹೇಳಿಕೊಂಡಿದ್ದಾರೆ. ಟಿವಿಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ದೇಣಿಗೆ ಸಂಗ್ರಹಿಸುವ ಕಾರ್ಯದಲ್ಲಿ ನಿರತರಾಗಿರುವ ಈ ಮತಬೋಧಕ, ಟಿವಿ ಸ್ಟೂಡಿಯೋದಿಂದಲೇ ಕೊರೋನಾ ರೋಗಿಗಳನ್ನು ಕಾಪಾಡುತ್ತೇನೆ ಎಂದು ಘೋಷಿಸಿದ್ದಾರೆ.

ಕ್ಯಾಮೆರಾ ಕಡೆ ತನ್ನ ಕೈ ಚಾಚುವ ಕೆನ್ನೆತ್, ನಂತರ ನಿಮ್ಮ ಕೈಗಳನ್ನು ಟಿವಿ ತೆರೆಯನ್ನು ಮುಟ್ಟುವಂತೆ ತಿಳಿಸುತ್ತಾರೆ. ನಂತರ ಥ್ಯಾಂಕ್ಯೂ ಜೀಸಸ್.. ಈತ ನಿಮ್ಮ ವೈದ್ಯಸೇವೆಯನ್ನು ಪಡೆದುಕೊಂಡಿದ್ದಾನೆ ಇನ್ನು ಮೇಲೆ ಅದು ನನ್ನದು. ಇದನ್ನು ನನಗೆ ನೀಡಿದ್ದಕ್ಕೆ ಧನ್ಯವಾದಗಳನ್ನು ಹೇಳುತ್ತಿದ್ದೇನೆ. ಹಾಗೆಯೇ ನಿನ್ನನ್ನು ಮೆಚ್ಚಿಕೊಳ್ಳುತ್ತಿದ್ದೇನೆ ಎನ್ನುತ್ತಾ, ತನ್ನೊಂದಿಗೆ ಇದನ್ನು ಹೇಳಲು ಟಿವಿ ಮುಂದೆ ಇರುವವರನ್ನು ಕೆನ್ನೆತ್ ಕೋರುತ್ತಾರೆ. ಹೀಗೆ ಮಾಡಿದಲ್ಲಿ ಕೋರೋನಾ ವಾಸಿಯಾಗುತ್ತದೆ ಎಂದು ಕೆನ್ನೆತ್ ಹೇಳುತ್ತಾರೆ.

ಸದ್ಯ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಜನರು ಕೆನ್ನೆತ್ ವಿರುದ್ಧ ಕಿಡಿಕಾರುತ್ತಿದ್ದಾರೆ. ಇದು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here