ಟಿವಿ ಆ್ಯಂಕರ್ ಭಯ ಪಡಿಸಲು ದುಷ್ಕರ್ಮಿಗಳ ನಾನಾ ಪ್ರಯತ್ನ

ವನ್ಯಜೀವಿಗಳ ಸಂರಕ್ಷಣೆಗಾಗಿ ಹೋರಾಟ ಮಾಡುತ್ತಿರುವ ಬಿಬಿಸಿ ಟಿವಿ ಆ್ಯಂಕರ್ ಮೇಲೆ ದುಷ್ಕರ್ಮಿಗಳು ದ್ವೇಷ ಸಾಧಿಸುತ್ತಿದ್ದಾರೆ. ಇಂಗ್ಲೆಂಡ್‍ನ ಹ್ಯಾಂಪ್‍ಶೈರ್ ನಿವಾಸಿ ಆಗಿರುವ ಬಿಬಿಸಿಯ ಪ್ರಮುಖ ಆ್ಯಂಕರ್ ಕ್ರಿಶ್ ಪ್ಯಾಕ್‍ಹ್ಯಾಮ್ ಭಯಪಡಿಸಲು, ಅವರ ಮನೆಯ ಗೇಟ್‍ಗೆ ಸತ್ತ ವನ್ಯಜೀವಿಗಳನ್ನು ನೇತುಹಾಕುತ್ತಿದ್ದಾರೆ.

ಮೊದಲು ಎರಡು ಸತ್ತ ಕಾಗೆಗಳನ್ನು ಕ್ರಿಶ್ ಮನೆ ಮುಂದೆ ನೇತು ಹಾಕಿದರು. ಕ್ರಿಶ್ ಕಣ್ಣೀರು ಹಾಕಿದರು. ನಂತರ ಸತ್ತ ನರಿಯೊಂದನ್ನು ಮನೆ ಆವರಣದಲ್ಲಿ ಎಸೆದರು. ಗುರುವಾರ ರಾತ್ರಿ ಬಾಡ್ಜರ್ ಅನ್ನು ಗೇಟ್‍ಗೆ ನೇತುಹಾಕಿದರು.

ನೋವಿನ ವಿಚಾರ ಎಂದರೆ, ಬಾಡ್ಜರ್ ಇತ್ತೀಚಿಗಷ್ಟೇ ತಾಯಿ ಆಗಿತ್ತು. ತಾಯಿ-ಮಗುವನ್ನು ಬೇರೆ ಮಾಡಿದ ಕ್ರೂರಿಗಳ ಮೇಲೆ ಕ್ರಿಶ್ ಆಕ್ರೋಶ ವ್ಯಕ್ತಪಡಿಸುತ್ತಾರೆ. ಇಂಥವುಗಳಿಗೆಲ್ಲಾ ನಾನು ಹೆದರುವ ಪ್ರಶ್ನೆ ಇಲ್ಲ. ನನ್ನ ಹೋರಾಟವನ್ನು ತಡೆಯಲು ಆಗುವುದಿಲ್ಲ. ಯಾಕೆಂದರೆ ನಾನು ಮಾಡುತ್ತಿರುವುದು ಒಳ್ಳೆಯ ಕೆಲಸ ಎಂದು ಕ್ರಿಶ್ ಹೇಳುತ್ತಾರೆ.

 

LEAVE A REPLY

Please enter your comment!
Please enter your name here