ಝೀರೋ ಟ್ರಾಫಿಕ್ ವ್ಯಾಮೋಹಿ ಮಂತ್ರಿಗಳೇ ಇಲ್ನೋಡಿ..

ನಮ್ಮ ರಾಜ್ಯದ ರಾಜಕಾರಣಿಗಳು ಮಂತ್ರಿಗಳಾಗುತ್ತಲೇ ಅದೇನಾಗುತ್ತೋ ಏನೋ..? ಮಂತ್ರಿ ಕಾರು ಹತ್ತುತ್ತಲೇ ಝೀರೋ ಟ್ರಾಫಿಕ್ ವ್ಯಾಮೋಹ ಬಂದುಬಿಡುತ್ತದೆ. ಕೆಲ ಮಂತ್ರಿಗಳು ಎಲ್ಲಾದ್ರು ಹೋಗೋದಿದ್ರೆ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಿಸಿಕೊಂಡೇ ಮನೆ ಬಿಡುತ್ತಾರೆ. ಈ ರಾಜಕಾರಣಿಗಳು ಒಡಿಶಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್‍ರನ್ನು ನೋಡಿ ಕಲಿಯಬೇಕು.

ಸರಿಸುಮಾರು 20 ವರ್ಷಗಳಿಂದ ಒಡಿಶಾ ಮುಖ್ಯಮಂತ್ರಿ ಆಗಿರುವ ನವೀನ್ ಪಟ್ನಾಯಕ್ ತೀರಾನೆ ಸಿಂಪಲ್ ಮನುಷ್ಯ. ಕಳೆದ ಎರಡು ದಶಕಗಳಲ್ಲಿ ನವೀನ್ ಪಟ್ನಾಯಕ್ ವೇಷ ಭೂಷಣದಲ್ಲಿ ಯಾವುದೇ ಬದಲಾವಣೆ ಸಹ ಕಂಡು ಬಂದಿಲ್ಲ. ಪ್ರಜೆಗಳಿಗೆ ಸ್ಪಂದಿಸುವ ರೀತಿಯಲ್ಲಿಯೂ ಯಾವುದೇ ಬದಲಾವಣೆ ಆಗಿಲ್ಲ.

ಮೊನ್ನೆ ಭಾನುವಾರ ಸರ್ಕಾರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮನೆಗೆ ವಾಪಸ್ ಆಗುವಾಗ ಆಂಬ್ಯುಲೆನ್ಸ್ ಸೈರನ್ ಸೌಂಡ್ ಕೇಳಿಸುತ್ತೆ. ಕೂಡಲೇ ಕಾನ್ವಾಯ್ ನಿಲ್ಲಿಸಲು ನವೀನ್ ಪಟ್ನಾಯಕ್ ಸೂಚನೆ ನೀಡುತ್ತಾರೆ. ಆಂಬ್ಯುಲೆನ್ಸ್ ತೆರಳಿದ ಬಳಿಕವೇ ಮುಂದೆ ಹೋಗಿ ಎಂದು ಆದೇಶ ನೀಡುತ್ತಾರೆ.

ಇದು ಸಿಸಿಟಿವಿಯಲ್ಲಿ ಸೆರೆ ಆಗಿದ್ದು, ನೆಟ್ ಲೋಕದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೋ ನೋಡಿ ನವೀನ್ ಪಟ್ನಾಯಕ್ ಅವರ ಮಾನವೀಯ ಗುಣಕ್ಕೆ ಜನತೆ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here