ಜೊಕೋ ಹನಿಟ್ರ್ಯಾಪ್ ಮಾಡು.. 52 ಲಕ್ಷ ಕೊಡ್ತೀವಿ.. ಮಾಡೆಲ್ ಗೆ ಬಿಗ್ ಆಫರ್

ವಿಶ್ವದ ನಂಬರ್ ಒನ್ ಟೆನಿಸ್ ಆಟಗಾರ ನೊವಾಕ್ ಜೋಕೋವಿಕ್ ಪ್ರತಿಷ್ಟೆಗೆ ಮಸಿ ಬಳಿಯುವ ಪ್ರಯತ್ನಗಳು ನಡೆಯುತ್ತಿವೆ. ಸೆರ್ಬಿಯನ್ ಮಾಡೆಲ್ ಮೂಲಕ ಹನಿಟ್ರ್ಯಾಪ್ ಮಾಡಲು ಷಡ್ಯಂತ್ರ ರೂಪಿಸಿದ್ದ ವಿಷಯ ಬಹಿರಂಗವಾಗಿದೆ.

ನಿನ್ನ ಸೌಂದರ್ಯದ ಮೂಲಕ ಜೋಕೋಗೆ ಬಲೆ ಹಾಕು..ಆತನ ಜೊತೆ ಮಂಚದ ಮೇಲೆ ಕಳೆಯುವ ದೃಶ್ಯಗಳನ್ನು ತಂದುಕೊಟ್ಟರೇ 52 ಲಕ್ಷ ನೀಡುತ್ತೇನೆ ಎಂದು ತಮಗೆ ಗೊತ್ತಿರುವ ಪರಿಚಿತರೊಬ್ಬರು ಆಫರ್ ನೀಡಿದ್ದರು ಎಂಬ ಸ್ಫೋಟಕ ವಿಚಾರವನ್ನು ಸೆರ್ಬಿಯಾದ ಮಾಡೆಲ್ ನಟಾಲಿಯಾ ಸೆಕಿಚ್ ಬಯಲು ಮಾಡಿದ್ದಾರೆ.

ಆದರೆ, ಜೋಕೋ ಇಮೇಜ್ ಗೆ ಮಸಿ ಬಳಿಯುವುದು ತಮಗೆ ಇಷ್ಟವಲ್ಲದ ಕೆಲಸ. ಹೀಗಾಗಿ ಈ ಆಫರ್ ತಿರಸ್ಕರಿಸಿದೆ ಎಂದು ನಟಾಲಿಯಾ ತಿಳಿಸಿದ್ದಾರೆ.

ನಟಾಲಿಯಾ ಹೇಳಿಕೆ ಟೆನಿಸ್ ಜಗತ್ತಿನಲ್ಲಿ ಸಂಚಲನ ಸೃಸ್ಟಿಸಿದೆ.

LEAVE A REPLY

Please enter your comment!
Please enter your name here