ಜೈನ್ ಮಿಲನ್ ನಿಂದ ಬಲವರ್ಧನೆ-ಹಿರಿಯ ವಕೀಲ ಎಂ.ಕೆ. ವಿಜಯಕುಮಾರ್

ಉಜಿರೆ: ಜೈನರಲ್ಲಿ ನಾಯಕತ್ವ ಗುಣ ವಂಶ ಪರಂಪರ್ಯದಿಂದ  ರಕ್ತಗತವಾಗಿ ಬಂದಿದ್ದು, ಸರ್ವಧರ್ಮ ಸಮನ್ವಯದೊಂದಿಗೆ ಅಹಿಂಸೆ, ದಯೆ, ವಿನಯ, ಅನುಕಂಪ, ಪರಸ್ಪರ ಪ್ರೀತಿ-ವಿಶ್ವಾಸ ಮೊದಲಾದ ಮಾನವೀಯ ಮೌಲ್ಯಗಳೊಂದಿಗೆ ಆದರ್ಶ, ಸಾತ್ವಿಕ ಜೀವನ ನಡೆಸುತ್ತಾರೆ. ೧೮ ಮಂದಿ ಜೈನ ಅರಸರು ೪೦೦ ವರ್ಷಗಳಲ್ಲಿ ಕರ್ನಾಟಕದ ವಿವಿಧ ಭಾಗಗಳಲ್ಲಿ ದಕ್ಷ ಆಡಳಿತ ನಡೆಸಿ ಧರ್ಮ, ಕಲೆ, ಸಾಹಿತ್ಯ ಕ್ಷೇತ್ರಗಳಲ್ಲಿ ಕಾಯಕಲ್ಪ ನೀಡಿ ಅಮೂಲ್ಯ ಸೇವೆ ನೀಡಿದ್ದಾರೆ ಎಂದು ಕಾರ್ಕಳದ ಹಿರಿಯ ವಕೀಲ ಎಂ.ಕೆ. ವಿಜಯಕುಮಾರ್ ಹೇಳಿದರು.

ಅವರು ಗುರುವಾರ ಉಜಿರೆಯಲ್ಲಿ ಎಸ್.ಡಿ.ಎಂ. ಪದವಿಪೂರ್ವ ಕಾಲೇಜಿನಲ್ಲಿ ರತ್ನತ್ರಯ ಸಭಾ ಭವನದಲ್ಲಿ ಬೆಳ್ತಂಗಡಿ ಭಾರತೀಯ ಜೈನ್ ಮಿಲನ್ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.

ಸಾಮಾಜಿಕ ಸೇವಾ ಕಳಕಳಿ ಹಾಗೂ ಪರಸ್ಪರ ಪ್ರೀತಿ-ವಿಶ್ವಾಸ ಮತ್ತು ಆತ್ಮೀಯತೆಯೊಂದಿಗೆ ಭಾರತೀಯ ಜೈನ್ ಮಿಲನ್ ಇಂದು ರಾಷ್ಟçಮಟ್ಟದಲ್ಲಿ ಸಂಪರ್ಕ ಸೇತುವಾಗಿ ಧರ್ಮಪ್ರಭಾವನೆಯೊಂದಿಗೆ ಜೈನ ಸಮಾಜದ ಸಂಘಟನೆ ಮತ್ತು ಬಲವರ್ಧನೆಗೆ ಉತ್ತಮ ಸೇವೆ ಮಾಡುತ್ತಿದೆ. ನಮ್ಮ ಹಿರಿಯರು ಅನಕ್ಷರಸ್ಥರಾಗಿದ್ದರೂ ಭಜನೆ, ಪ್ರಾರ್ಥನೆ, ಜಪ, ತಪ, ಧ್ಯಾನ, ಸ್ವಾಧ್ಯಾಯದಲ್ಲಿ ಸದಾ ನಿರತರಾಗಿ ವೃತ-ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು. ಗುರು-ಹಿರಿಯರ ಮಾರ್ಗದರ್ಶನದಿಂದ ದರ್ಶನ, ಜ್ಞಾನ ಮತ್ತು ಚಾರಿತ್ರö್ಯವನ್ನು ಮೈಗೂಡಿಸಿಕೊಂಡು ಮನೆಯಲ್ಲಿಯೂ, ಸಮಾಜದಲ್ಲಿಯೂ ಧರ್ಮ ಜಾಗೃತಿಯಾಗುತ್ತಿತ್ತು. ಯುವಜನತೆ ಮತ್ತು ಮಹಿಳೆಯರು ಸ್ವಯಂಸ್ಪೂರ್ತಿಯಿoದ ಜೈನ್ ಮಿಲನ್ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದು ಅವರು ಸಲಹೆ ನೀಡಿದರು. ಹಿರಿಯರ ಸಕಾಲಿಕ ಮಾರ್ಗದರ್ಶನ ದೊರೆತರೆ ಮಾತ್ರ ಶ್ರೋತೃಗಳಿಗೆ “ದರ್ಶನ” ಬರುತ್ತದೆ. ಜೈನ್‌ಮಿಲನ್‌ನಿಂದಾಗಿ ಸಮಾಜದಲ್ಲಿ ಕ್ರಾಂತಿಕಾರಿ ಸುಧಾರಣೆಯಾಗಿದೆ. ಎಲ್ಲರ ಸಹಭಾಗಿತ್ವದಲ್ಲಿ ಪದಗ್ರಹಣ ಸಮಾರಂಭವು ಉತ್ಸವದ ರೀತಿಯಲ್ಲಿ ಉತ್ಸಾಹ, ಸಂಭ್ರಮ-ಸಡಗರದಿAದ ನಡೆದಿರುವುದಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿ ಡಾ. ನವೀನ್ ಕುಮಾರ್ ಜೈನ್, ಅಧ್ಯಕ್ಷರಾಗಿರುವ ಬೆಳ್ತಂಗಡಿ ತಾಲ್ಲೂಕು ಜೈನ್ ಮಿಲನ್ ಘಟಕದ ಎಲ್ಲಾ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.

ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಎಸ್. ಸತೀಶ್ಚಂದ್ರ, ಸಿ.ಇ.ಒ. ಪೂರಣ್ ವರ್ಮ, ಬಂಟ್ವಾಳದ ಬಿ. ಸುದರ್ಶನ ಜೈನ್ ಪ್ರಾಂಶುಪಾಲ ಪ್ರೊ. ದಿನೇಶ್ ಚೌಟ, ಬಜಗೋಳಿಯ ಜಯವರ್ಮ ಹೆಗ್ಡೆ, ಮೂಡಬಿದ್ರೆ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ರಮ್ಯಾ ವಿಕಾಸ್ ಮತ್ತು ಬಿ. ಪ್ರಮೋದ್ ಕುಮಾರ್ ಶುಭಾಶಂಸನೆ ಮಾಡಿದರು.
ಬಿ. ಸೋಮಶೇಖರ ಶೆಟ್ಟಿ ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧನೆ ಮಾಡಿದರು.

ಸಾಧಕರ ಸನ್ಮಾನ: ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡಿದ ಅಜಿತ್ ಕುಮಾರ್, ಬಿ. ಸೋಮಶೇಖರ ಶೆಟ್ಟಿ, ಶಾಂತಿರಾಜ ಜೈನ್, ಬಿ. ಮುನಿರಾಜ ಅಜ್ರಿ, ದೇವಪಾಲ ಅಜ್ರಿ ಮತ್ತು ಉಜಿರೆ ಎಸ್.ಡಿ.ಎಂ. ಸೆಕೆಂಡರಿ ಶಾಲಾ ಮುಖ್ಯೋಪಾಧ್ಯಾಯ ಎನ್. ಪದ್ಮರಾಜ್ ಅವರನ್ನು ಗೌರವಿಸಲಾಯಿತು.
ಕಿಶೋರ್ ಹೆಗ್ಡೆ ಸ್ವಾಗತಿಸಿದರು. ಡಾ. ಸನ್ಮತಿಕುಮಾರ್ ಧನ್ಯವಾದವಿತ್ತರು. ಮಹಾವೀರ ಜೈನ್ ಕಾರ್ಯಕ್ರಮ ನಿರ್ವಹಿಸಿದರು.