ಜೂನ್ 8 ರಿಂದ ಶಾಪಿಂಗ್ ಮಾಲ್ ಗಳಿಗೆ ಅವಕಾಶ

ಮಾರ್ಚ್ ತಿಂಗಳಿನಿಂದ ಬಂದ್ ಆಗಿದ್ದ ಶಾಪಿಂಗ್ ಮಾಲ್‍ಗಳು ಜೂನ್ 8 ರಿಂದ ತೆರೆಯಲಿದೆ. ಈ ಹಿನ್ನಲೆಯಲ್ಲಿ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.

ಶಾಪಿಂಗ್ ಮಾಲ್ ಗಳಲ್ಲಿ  ಪಾಲಿಸಬೇಕಾದ ನಿಯಮಗಳು

– ಮಾಲ್ ಗಳಲ್ಲಿ ಆರೋಗ್ಯ ಇಲಾಖೆ ವಿಧಿಸುವ ಎಲ್ಲ ನಿಯಮಗಳ ಪಾಲನೆ ಕಡ್ಡಾಯ

– ಮಾಲ್‌ಗಳ ಪ್ರವೇಶ ದ್ವಾರಗಳು, ಕ್ಯಾಶ್ ಕೌಂಟರ್ಸ್, ಪದಾರ್ಥಗಳಿರುವ ವಾರ್ಡ್‌ಗಳು, ಪಾರ್ಕಿಂಗ್ ಸ್ಥಳ, ಸಿಬ್ಬಂದಿ, ಗ್ರಾಹಕರು ಮತ್ತು ಸಮಯ ಪಾಲನೆ ವಿಚಾರಗಳಲ್ಲಿ ಎಲ್ಲ ನಿಯಮಗಳ ಪಾಲನೆ ಕಡ್ಡಾಯ

– ಪ್ರವೇಶ ದ್ವಾರಗಳಲ್ಲೇ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್, ಮಾಸ್ಕ್ ಗಳ ವ್ಯವಸ್ಥೆ

– 0.75 ಮೀಟರ್ ಗೆ ಒಬ್ಬ ಗ್ರಾಹಕ ನಿಲ್ಲುವಂತಹ ವ್ಯವಸ್ಥೆ

– ಶೇ.50 ರಷ್ಟು ಸಿಬ್ಬಂದಿಗಳು ಮಾತ್ರ ಒಂದು ಶಿಫ್ಟ್‌ನಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ

– ಶೇ.50 ರಷ್ಟು ವಾಹನಗಳಿಗೆ ಮಾತ್ರ ಪಾರ್ಕಿಂಗ್ ವ್ಯವಸ್ಥೆ

– ವಾಶ್ ರೂಂ ಬಳಕೆಗೂ ಷರತ್ತುಗಳು

– ಮಾಲ್‌ಗಳಲ್ಲಿ ಅವಶ್ಯಕ ವಸ್ತುಗಳ ಮಾರಾಟಕ್ಕೆ ಮಾತ್ರ ಅವಕಾಶ

– ಮಾಲ್‌ಗಳಲ್ಲಿರುವ  ಸೂಪರ್ ಮಾರ್ಕೆಟ್‌, ಮಕ್ಕಳ ಉಡುಪುಗಳು, ಕನ್ನಡಕಗಳು, ವರ್ಕ್ ಫ್ರಂ ಹೋಮ್ ಉದ್ಯೋಗಿಗಳಿಗೆ ಬೇಕಿರುವ ಎಲೆಕ್ಟ್ರಾನಿಕ್ ವಸ್ತುಗಳು, ಕ್ರೀಡಾ ಪರಿಕರಗಳು, ಫೂಟ್‌ವೇರ್‌ಗಳ ಮಾರಾಟಕ್ಕೆ ಅವಕಾಶ

– ಶೇ‌.50 ರಷ್ಟು ಸಿಬ್ಬಂದಿಯೊಂದಿಗೆ ಸ್ಪಾ ಮತ್ತು ಸೆಲೂನ್ ಶಾಪ್‌ಗಳಿಗೆ ಅವಕಾಶ. ಮೊದಲೇ ಅಪಾಯಿಂಟ್‌ಮೆಂಟ್ ಪಡೆದ ಗ್ರಾಹಕರಿಗೆ ಮಾತ್ರ

– ಮಾಲ್ ಗಳು ತೆರೆಯುವ ಸಂಭಾವ್ಯ ಸಮಯ ಬೆಳಗ್ಗೆ 11 ರಿಂದ ರಾತ್ರಿ 9 ರವರೆಗೆ‌ ಮಾತ್ರ

-‌ ಜಿಮ್‌, ಬಾರ್‌, ಸಿನೆಮಾ ಪ್ರದರ್ಶನ ನಡೆಯುವುದಿಲ್ಲ

LEAVE A REPLY

Please enter your comment!
Please enter your name here