ಜೂನ್‌ 1ರಿಂದ 200 ರೈಲುಗಳ ಓಡಾಟ – ಆನ್‌ಲೈನ್‌ನಲ್ಲಿ ಟಿಕೆಟ್‌ ಬುಕ್ಕಿಂಗ್‌ಗೆ ಅವಕಾಶ

ಜೂನ್‌ 1ರಿಂದ ದೇಶದಲ್ಲಿ ರೈಲುಗಳ ಓಡಾಟ ಭಾಗಶಃ ಆರಂಭವಾಗಲಿದ್ದು, 200 ರೈಲುಗಳನ್ನು ಓಡಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ.

ಈ ರೈಲುಗಳು ನಾನ್‌ ಏಸಿ ಸೆಕೆಂಡ್‌ ಕ್ಲಾಸ್‌ ರೈಲುಗಳು ಆಗಿರಲಿವೆ. ದಿನಂಪ್ರತಿ 200 ರೈಲುಗಳು ಸಂಚರಿಸಲಿದ್ದು, ಆನ್‌ಲೈನ್‌ ಮೂಲಕವಷ್ಟೇ ಟಿಕೆಟ್‌ ಬುಕ್ಕಿಂಗ್‌ ಮಾಡಲು ಅವಕಾಶವಿದೆ.

ಶೀಘ್ರವೇ ಈ ರೈಲುಗಳ ವೇಳಾಪಟ್ಟಿ ಲಭ್ಯ ಆಗಲಿದೆ ಎಂದು ರೈಲ್ವೆ ಇಲಾಖೆ ಹೇಳಿದೆ.

ಈಗಾಗ್ಲೇ ದೆಹಲಿಯಿಂದ ದೇಶದ ವಿವಿಧ ನಗರಗಳಿಗೆ ರೈಲ್ವೆ ಇಲಾಖೆ 15 ರೈಲುಗಳನ್ನು ಓಡಿಸುತ್ತಿದೆ. ಈ 15 ರೈಲುಗಳ ಜೊತೆಗೆ ಜೂನ್‌ 1ರಿಂದ ಮತ್ತೆ 200 ರೈಲುಗಳು ಸಂಚರಿಸಲಿವೆ.

ಲಾಕ್‌ಡೌನ್‌ಗೂ ಮೊದಲು ಪ್ರತಿದಿನ 12 ಸಾವಿರ ರೈಲುಗಳು ದೇಶದಲ್ಲಿ ಓಡಾಡ್ತಿದ್ವು.

ಇತ್ತ ಇವತ್ತು ರಾತ್ರಿಯಿಂದಲೇ ರೈಲ್ವೆ ಇಲಾಖೆ ವಲಸೆ ಕಾರ್ಮಿಕರ ಓಡಾಟಕ್ಕಾಗಿಯೇ 200 ಹೆಚ್ಚುವರಿ ರೈಲುಗಳನ್ನು ಓಡಿಸುತ್ತಿದೆ.

LEAVE A REPLY

Please enter your comment!
Please enter your name here