ಜೂನ್‌ 30ರವರೆಗೆ ಲಾಕ್‌ಡೌನ್‌ ವಿಸ್ತರಣೆ – ಜೂನ್‌ 8ರಿಂದ ಇವೆಲ್ಲವನ್ನೂ ತೆರೆಯಲು ಅನುಮತಿ – ಸಂಪೂರ್ಣ ಮಾಹಿತಿ

ಕಂಟೈನ್‌ಮೆಂಟ್‌ಝೋನ್‌ಗಷ್ಟೇ ಇನ್ನೂ ಒಂದು ತಿಂಗಳು ಜೂನ್‌ 30ರವೆರೆಗೆ ಲಾಕ್‌ಡೌನ್‌ ವಿಸ್ತರಿಸಿ ಕೇಂದ್ರ ಗೃಹ ಸಚಿವಾಲಯ ಹೊಸ ಮಾರ್ಗಸೂಚಿ ಹೊರಡಿಸಿದೆ.

ಕಂಟೈನ್‌ನ್ಮೆಂಟ್‌ ಝೋನ್‌ ಬಿಟ್ಟು ಉಳಿದ ಕಡೆಗಳಲ್ಲಿ ಜೂನ್‌ 8ರಿಂದ ಕೇಂದ್ರ ಸರ್ಕಾರ ಇನ್ನಷ್ಟು ರಿಲೀಫ್‌ಗಳನ್ನು ನೀಡಿದೆ. ಅಂದರೆ ಹೊಸ ರಿಲೀಫ್‌ ಜೂನ್‌ 7ರವರೆಗೆ ಸಿಗಲ್ಲ.

ಲಾಕ್‌ಡೌನ್‌ ಸಡಿಲಿಕೆಯನ್ನು ಕೇಂದ್ರ ಸರ್ಕಾರ 3 ಹಂತಗಳಲ್ಲಿ ವಿಂಗಡಿಸಿದೆ.

ಮೊದಲನೇ ಹಂತ: ಜೂನ್‌ 8ರಿಂದ ಇವೆಲ್ಲದ್ದಕ್ಕೂ ರಿಲೀಫ್‌:

ಕಂಟೈನ್‌ಮೆಂಟ್‌ ಝೋನ್‌ಬಿಟ್ಟು ಉಳಿದ ಕಡೆಗಳಲ್ಲಿ ದೇವಸ್ಥಾನ, ಮಸೀದಿ, ಚರ್ಚ್‌ಗಳನ್ನು ತೆರೆಯಲು ಅವಕಾಶ ನೀಡಲಾಗಿದೆ.

ಹೋಟೆಲ್‌, ರೆಸ್ಟೋರೆಂಟ್‌, ಶಾಪಿಂಗ್‌ ಮಾಲ್‌ಗಳನ್ನು ತೆರೆಯಬಹುದು. ಆತಿಥ್ಯ ಸೇವೆಯಲ್ಲಿರುವ ಇತರೆ ಸೇವೆಗಳನ್ನು ಉದಾಹರಣೆಗೆ ಲಾಡ್ಜ್‌, ಹೋಂ ಸ್ಟೇ, ರೆಸಾರ್ಟ್‌ಗಳನ್ನು ತೆರೆಯಲು ಅನುಮತಿ ಸಿಕ್ಕಿದೆ. ‌

ಜೂನ್‌ 1ರಿಂದ ರಾತ್ರಿ ಕರ್ಫ್ಯೂ ಸಡಿಲಿಕೆ:

ಜೂನ್‌ 1ರಿಂದ ರಾತ್ರಿ ಕರ್ಫ್ಯೂ ಸಡಿಲಿಕೆಯನ್ನು ಮಾಡಲಾಗಿದೆ. ರಾತ್ರಿ ಕರ್ಪ್ಯೂವನ್ನು ರಾತ್ರಿ 9 ಗಂಟೆಯಿಂದ ನಸುಕಿನ ಜಾವ 5 ಗಂಟೆಗೆ ಸೀಮಿತಗೊಳಿಸಲಾಗಿದೆ.

ರಾತ್ರಿ 9 ಗಂಟೆವರೆಗೆ ತೆರೆಯಲು ಅವಕಾಶ:

ರಾತ್ರಿ ಕರ್ಫ್ಯೂ ಸಡಿಲಿಕೆ ಹಿನ್ನೆಲೆಯಲ್ಲಿ ಅಂಗಡಿ ಮಳಿಗೆಗಳು, ಮದ್ಯದಂಗಡಿ, ಹೂವು-ಹಣ್ಣು-ತರಕಾರಿ ಮಾರುಕಟ್ಟೆ, ಮಾಲ್‌, ಹೋಟೆಲ್‌ಗಳನ್ನು ರಾತ್ರಿ 9 ಗಂಟೆಯವರೆಗೆ ತೆರೆಯಬಹುದಾಗಿದೆ.

ಜೂನ್‌ನಲ್ಲಿ ಶಾಲಾ-ಕಾಲೇಜು ತೆರೆಯಲ್ಲ:

ಜೂನ್‌ನಲ್ಲಿ ಶಾಲಾ ಕಾಲೇಜುಗಳು, ಟ್ರೈನಿಂಗ್‌ ಸೆಂಟರ್‌ಗಳು, ಕೋಚಿಂಗ್‌ ಸೆಂಟರ್‌ಗಳು ಬಂದ್ ಆಗಿರಲಿವೆ. ‌ಶೈಕ್ಷಣಿಕ ಮತ್ತು ತರಬೇತಿ ಸಂಸ್ಥೆಗಳನ್ನು ತೆರೆಯುವ ಬಗ್ಗೆ ರಾಜ್ಯಗಳ ಜೊತೆಗೆ ಸಮಾಲೋಚಿಸಿ ಜುಲೈ ತಿಂಗಳಲ್ಲಿ ನಿರ್ಧಾರ ಮಾಡಲಾಗುತ್ತದೆ.

ಥಿಯೇಟರ್‌, ಜಿಮ್‌ ಓಪನ್‌ ಇಲ್ಲ:

ಸದ್ಯಕ್ಕೆ ಸಿನಿಮಾ ಥಿಯೇಟರ್‌, ಜಿಮ್‌, ಫಿಟ್ನೇಸ್‌ ಸೆಂಟರ್‌ಗಳು, ಸ್ವಿಮ್ಮಿಂಗ್‌ ಪೂಲ್‌, ಮನರಂಜನಾ ಪಾರ್ಕ್‌ಗಳು, ಬಾರ್‌ಗಳನ್ನು ತೆರೆಯುವ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧಾರ ಮಾಡಲಾಗುವುದು.

ವಿಮಾನ, ರೈಲು ಸಂಚಾರ:

ಅಂತರಾಷ್ಟ್ರೀಯ ವಿಮಾನಗಳ ಹಾರಾಟ ಬಗ್ಗೆಯೂ ಸ್ಥಿತಿಯನ್ನು ನೋಡಿ ನಿರ್ಧಾರ ಕೈಗೊಳ್ಳಲಾಗುತ್ತದೆ. ದೇಶೀಯ ವಿಮಾನಗಳ ಹಾರಾಟ ಮತ್ತು ರೈಲುಗಳ ಓಡಾಟ ಈಗಿರುವ ರೀತಿಯಲ್ಲೇ ಮುಂದುವರಿಯಲಿದೆ.

ಮದುವೆಗೆ ನಿರ್ಬಂಧ:

ಮದುವೆಗಳಲ್ಲಿ ಕೇವಲ 50ಮಂದಿಯಷ್ಟೇ ಪಾಲ್ಗೊಳ್ಳಬಹುದು ಮತ್ತು ಅಂತ್ಯ ಸಂಸ್ಕಾರದಲ್ಲಿ ಕೇವಲ 20ಮಂದಿಯಷ್ಟೇ ಭಾಗವಹಿಸಬಹುದು ಎಂಬ ಆದೇಶ ಮುಂದುವರಿಯಲಿದೆ.

ಮೆಟ್ರೋ ರೈಲು:

ಮೆಟ್ರೋ ರೈಲು ಓಡಾಟದ ಬಗ್ಗೆಯೂ ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ.

ಅಂತರ್‌ರಾಜ್ಯ ಓಡಾಟಕ್ಕೆ ಪಾಸ್‌ ಬೇಕಿಲ್ಲ:

ಅಂತರ್‌ರಾಜ್ಯ ಮತ್ತು ರಾಜ್ಯದೊಳಗಡೆ ಜನರ ಓಡಾಟಕ್ಕೆ ನಿರ್ಬಂಧ ಇಲ್ಲ. ರಾಜ್ಯ ಸರ್ಕಾರಗಳಿಂದ ಪೂರ್ವಾನುಮತಿ ಅಗತ್ಯವಿಲ್ಲ. ಆದರೆ ಒಂದು ವೇಳೆ ಯಾವುದಾದರೂ ರಾಜ್ಯ ಬೇರೆ ರಾಜ್ಯಗಳ ಓಡಾಟಕ್ಕೆ ನಿರ್ಬಂಧ ಹೇರಬೇಕೆಂದು ಬಯಸಿದ್ದಲ್ಲಿ ಆಗ ಸಾರ್ವಜನಿಕ ಪ್ರಕಟಣೆಯನ್ನು ಹೊರಡಿಸುವುದು ಕಡ್ಡಾಯ.

LEAVE A REPLY

Please enter your comment!
Please enter your name here