ಜೂನ್‌ 14ರಂದು ಪದಗ್ರಹಣ ಕಾರ್ಯಕ್ರಮಕ್ಕೆ ಅನುಮತಿ ನೀಡಿ – ಸಿಎಂ ಬಿಎಸ್‌ವೈಗೆ ಡಿಕೆಶಿವಕುಮಾರ್‌ ಪತ್ರ

ಜೂನ್‌ 14ರಂದು ಕೆಪಿಸಿಸಿ ಅಧ್ಯಕ್ಷನಾಗಿ ಪದಗ್ರಹಣ ಕಾರ್ಯಕ್ರಮ ಆಯೋಜಿಸುವುದಕ್ಕೆ ಅನುಮತಿ ನೀಡುವಂತೆ ಕೋರಿ ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಸಿಎಂ ಯಡಿಯೂರಪ್ಪಗೆ ಪತ್ರ ಬರೆದಿದ್ದಾರೆ.

ಈ ಮೊದಲು ಮೇ 31ರಂದು ಪದಗ್ರಹಣ ಕಾರ್ಯಕ್ರಮ ನಿಗದಿ ಆಗಿತ್ತು. ಆದರೆ ಲಾಕ್‌ಡೌನ್‌ ವಿಸ್ತರಣೆ ಆದ ಕಾರಣ ಆ ಕಾರ್ಯಕ್ರಮವನ್ನು ಜೂನ್‌ 7ಕ್ಕೆ ಮುಂದೂಡಲಾಯಿತು.

ಆದರೆ ಲಾಕ್‌ಡೌನ್‌ನ್ನು ಮತ್ತೆ ವಿಸ್ತರಣೆ ಮಾಡಿದ್ದರಿಂದ ಜೂನ್‌ 7ರ ಕಾರ್ಯಕ್ರಮವನ್ನೂ ಮುಂದೂಡಲಾಯಿತು.

ಜೂನ್‌ 14ರಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ 150 ಮಂದಿ ಕಾಂಗ್ರೆಸ್‌ ನಾಯಕರ ಸಮ್ಮುಖದಲ್ಲಿ ಔಪಾಚಾರಿಕವಾಗಿ ಅಧಿಕಾರ ಸ್ವೀಕರಿಸಲಿದ್ದೇನೆ. ಈ ಕಾರ್ಯಕ್ರಮ ರಾಜ್ಯಾದ್ಯಂತ ನೇರ ಪ್ರಸಾರವಾಗಲಿದೆ.

ಗ್ರಾಮ ಪಂಚಾಯತಿ, ನಗರಸಭೆ, ವಾರ್ಡ್‌, ಬ್ಲಾಕ್‌ ಕಾಂಗ್ರೆಸ್‌ ಮತ್ತು ಜಿಲ್ಲಾ ಕಾಂಗ್ರೆಸ್‌ ಸಮಿತಿ ಕಚೇರಿಗಳಲ್ಲಿ ಪಕ್ಷದ ಸ್ಥಳೀಯ ನಾಯಕರು ಮತ್ತು ಕಾರ್ಯಕರ್ತರು ಸೇರಲಿದ್ದು, ಪದಗ್ರಹಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಲಾಕ್‌ಡೌನ್‌ ಮಾರ್ಗಸೂಚಿಗೆ ಬದ್ಧರಾಗಿ ಈ ಕಾರ್ಯಕ್ರಮ ನಡೆಸಲಿದ್ದು ಅನುಮತಿ ನೀಡುವಂತೆ ಸಿಎಂ ಯಡಿಯೂರಪ್ಪಗೆ ಕೋರಿದ್ದಾರೆ.

LEAVE A REPLY

Please enter your comment!
Please enter your name here