ಜೂನ್‌ 1ರಿಂದ ದೇವಸ್ಥಾನಗಳು ತೆರೆಯಲಿವೆ – ನಾಳೆಯಿಂದ ಆನ್‌ಲೈನ್‌ ಮೂಲಕ ಸೇವೆಗಳ ಬುಕ್ಕಿಂಗ್‌

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮುಚ್ಚಲ್ಪಟ್ಟಿದ ರಾಜ್ಯದ ಎಲ್ಲಾ ದೇವಸ್ಥಾನಗಳು ಜೂನ್‌ 1ರಿಂದ ತೆರಯಲಿವೆ. ಜೂನ್‌ 1ರಿಂದ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಬರುವ 51 ದೇವಸ್ಥಾನಗಳಲ್ಲಿ ಪೂಜೆಗೆ ನಾಳೆಯಿಂದ ಆನ್‌ಲೈನ್‌ ಸೇವಾ ಬುಕ್ಕಿಂಗ್‌ ಆರಂಭವಾಗಲಿದೆ.

ಬೆಂಗಳೂರಲ್ಲಿ ಮಾತಾಡಿದ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಜೂನ್‌ 1ರಿಂದ ದೇವಸ್ಥಾನಗಳಲ್ಲಿ ಭಕ್ತರ ಸಾಮಾಜಿಕ ಅಂತರ, ಮಾಸ್ಕ್‌ ಕಡ್ಡಾಯ ಒಳಗೊಂಡಂತೆ ಕೊರೋನಾ ತಡೆಗೆ ಅನುಸರಿಸಬೇಕಾಗಿರುವ ಕ್ರಮಗಳ ಬಗ್ಗೆ ಅಗತ್ಯ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗುತ್ತದೆ ಎಂದರು.

ಸಿಎಂ ಯಡಿಯೂರಪ್ಪರಿಂದ ಚಾಲನೆ:

ದೇವಾಲಯಗಳಿಗೆ ಭಕ್ತರು ಆನ್‌ಲೈನ್‌ ಮೂಲಕ ನೀಡಬಹುದಾದ ಇ-ಕಾಣಿಕೆ ಮತ್ತು ಸೇವೆಗಳ ಆನ್‌ಲೈನ್‌ ಬುಕ್ಕಿಂಗ್‌ಗೆ ಸಿಎಂ ಯಡಿಯೂರಪ್ಪ ಚಾಲನೆ ನೀಡಿದರು. ಮುಜರಾಯಿ ಇಲಾಖೆ ಶುರು ಮಾಡಿರುವ ಆನ್‌ಲೈನ್‌ ಸೇವೆಗೆ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಚಾಲನೆ ನೀಡಿದರು.

LEAVE A REPLY

Please enter your comment!
Please enter your name here