ಜೂನ್‌-ಜುಲೈನಲ್ಲಿ ಕೊರೋನಾ ಕೇಸ್‌ ಅತೀ ಹೆಚ್ಚಾಗಬಹುದು – ಏಮ್ಸ್‌ ವೈದ್ಯರ ಅಂದಾಜು

ಒಂದ್ಕಡೆ ಲಾಕ್‌ಡೌನ್‌ನಿಂದಾಗಿ ಕೊರೋನಾ ವೈರಸ್‌ ಕಮ್ಮಿ ಆಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಹೇಳುತ್ತಿದ್ದರೆ, ಅತ್ತ ಕೇಂದ್ರ ಸರ್ಕಾರವೇ ಕೊರೋನಾ ಸಂಬಂಧ ನೇಮಿಸಿರುವ ತಜ್ಞರ ಸಮಿತಿಯಲ್ಲಿ ಸದಸ್ಯರಾಗಿರುವ ಏಮ್ಸ್‌ ನಿರ್ದೇಶಕರು ಮಾತ್ರ ಭಾರತದ ಪಾಲಿಗೆ ಆಘಾತಕಾರಿ ಸುದ್ದಿಯನ್ನು ನೀಡಿದ್ದಾರೆ.

ಜೂನ್‌-ಜುಲೈ ವೇಳೆಗೆ ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಅತ್ಯಧಿಕ ಪ್ರಮಾಣಕ್ಕೆ ಏರಲಿದೆ ಎಂದು ಏಮ್ಸ್‌ ನಿರ್ದೇಶಕ ಡಾ.ರಂದೀಪ್‌ ಗುಲೇರಿಯಾ ಹೇಳಿದ್ದಾರೆ.

ಇಂಗ್ಲೀಷ್‌ ಖಾಸಗಿ ಸುದ್ದಿವಾಹಿನಿಗಳಿಗೆ ನೀಡಿದ ಸಂದರ್ಶನದಲ್ಲಿ ಮಾತಾಡಿದ ಅವರು, ಸದ್ಯಕ್ಕಿರುವ ಅಂಕಿಅಂಶಗಳ ಆಧಾರದ ಮೇಲೆ ಜೂನ್‌-ಜುಲೈನಲ್ಲಿ ಕೊರೋನಾ ಕೇಸ್‌ನ ಸಂಖ್ಯೆ ಏರಬಹುದು. ಇದಕ್ಕೆ ನಾವು ಕೊರೋನಾ ಪರೀಕ್ಷೆ ಹೆಚ್ಚಳ ಮಾಡುತ್ತಿರುವುದೂ ಕಾರಣ ಇರಬಹುದು ಎಂದು ಗುಲೇರಿಯಾ ಹೇಳಿದ್ದಾರೆ.

ಮುಂದಿನ ನಾಲ್ಕರಿಂದ ಆರು ವಾರ ಅಂದರೆ ಒಂದರಿಂದ ಒಂದೂವರೆ ತಿಂಗಳು ನಿರ್ಣಾಯಕ. ಯಾಕೆಂದರೆ ಕೊನೆವರೆಗೂ ಲಾಕ್‌ಡೌನ್ ಇರಲು ಸಾಧ್ಯವಿಲ್ಲ. ನಮ್ಮ ಗಮನ ಏನಿದ್ದರೂ ಈಗ ಹೆಚ್ಚು ಕೇಸ್‌ಗಳು ವರದಿ ಆಗುತ್ತಿರುವ ಹಾಟ್‌ಸ್ಪಾಟ್‌ಗಳನ್ನ ಪತ್ತೆ ಹಚ್ಚಿ ಅವುಗಳನ್ನು ಗ್ರೀನ್‌ಝೋನ್‌ ಆಗಿ ಪರಿವರ್ತಿಸುವುದರ ಮೇಲೆ ಇರಬೇಕು ಎಂದು ಬುಧವಾರ ಡಾ.ಗುಲೇರಿಯಾ ಹೇಳಿದ್ದರು.

LEAVE A REPLY

Please enter your comment!
Please enter your name here