ಜು.11: ಮಂಗಳೂರು-ಯಶವಂತಪುರ ವಿಸ್ಟಾಡೋಮ್‌ ಬೋಗಿ ರೈಲು ಸಂಚಾರ ಆರಂಭ

ಮಂಗಳೂರು : ಮಂಗಳೂರು-ಯಶವಂತಪುರ ನಡುವೆ ಸಂಚರಿಸುವ ವಿಶೇಷ ರೈಲಿಗೆ ಉದ್ದೇಶಿತ ಗಾಜಿನ ಛಾವಣಿಯನ್ನು ಹೊಂದಿರುವ ಆಕರ್ಷಕ ವಿಸ್ಟಾಡೋಮ್‌ ಬೋಗಿಗಳ ಸೇರ್ಪಡೆ ನಡೆದಿದ್ದು, ರೈಲ್ವೇ ಇಲಾಖೆ ಈ ಕುರಿತ ಚಿತ್ರಗಳನ್ನು ಬಿಡುಗಡೆ ಮಾಡಿದೆ.

ಜು.11ರಿಂದ ಈ ರೈಲು ಸಂಚಾರ ಆರಂಭವಾಗಲಿದ್ದು, ವಿಸ್ಟಾಡೋಮ್‌ ಬೋಗಿಗೆ ಬುಕ್ಕಿಂಗ್‌ ಜು. 7ರಿಂದ ಪ್ರಾರಂಭಗೊಂಡಿದೆ. ಈ ಬೋಗಿಯ ಮೂಲಕ ಸಂಚರಿಸುವಾಗ ಹಗಲು ಹೊತ್ತಿನಲ್ಲಿ ಪ್ರಕೃತಿ ಸೌಂದರ್ಯವನ್ನು ಸವಿಯಬಹುದು.

ಮಂಗಳೂರು- ಕೊಯಮತ್ತೂರು ಮಧ್ಯೆ ಇಂಟರ್‌ಸಿಟಿ ಎಕ್ಸ್‌ ಪ್ರಸ್‌ ರೈಲು ಮತ್ತೆ ಪ್ರಾರಂಭಿಸಲಾಗುತ್ತಿದೆ. ನಂ.06189 ಮಂಗಳೂರು ಸೆಂಟ್ರಲ್‌ ಕೊಯಮತ್ತೂರು ಡೈಲಿ ಸೂಪರ್‌ ಫಾಸ್ಟ್‌ ವಿಶೇಷ ರೈಲು ಜು.24ರಿಂದ ಮಂಗಳೂರು ಸೆಂಟ್ರಲ್‌ನಿಂದ 11.05ಕ್ಕೆ ಹೊರಟು ಕೊಯಮತ್ತೂರಿಗೆ ಸಂಜೆ 6.30ಕ್ಕೆ ತಲಪಲಿದೆ.

ನಂ.06190 ಕೊಯಮತ್ತೂರು ಮಂಗಳೂರು ಸೆಂಟ್ರಲ್‌ ವಿಶೇಷ ರೈಲು ಜು. 25ರಿಂದ ಕೊಯಮತ್ತೂರಿಂದ ಬೆಳಗ್ಗೆ 6.05ಕ್ಕೆ ಹೊರಟು ಮಂಗಳೂರು ಸೆಂಟ್ರಲ್‌ಗೆ ಅಪರಾಹ್ನ 1.15ಕ್ಕೆ ತಲಪಲಿದೆ.

LEAVE A REPLY

Please enter your comment!
Please enter your name here