ಜೀವಕ್ಕೆ ಆದ್ಯತೆ ಕೊಟ್ಟ ಪ್ರಧಾನಿ.. ಮೇ.3ರವರೆಗೂ ಲಾಕ್‍ಡೌನ್ ವಿಸ್ತರಣೆ

ಜೀವ ಮತ್ತು ಜೀವನ.. ಈ ಎರಡರ ಪೈಕಿ ಜೀವಕ್ಕೆ ಆದ್ಯತೆ ನೀಡಿದ್ದಾರೆ ಪ್ರಧಾನಮಂತ್ರಿ ನರೇಂದ್ರ ಮೋದಿ. ಎಲ್ಲರ ನಿರೀಕ್ಷೆಗಳನ್ನು ತಲೆಕೆಳಗು ಮಾಡಿದ ಪ್ರಧಾನಿ ಮೋದಿ, ಕೊರೋನಾ ತಡೆಗೆ ಮತ್ತಷ್ಟು ಒತ್ತು ನೀಡಿ, ಮೇ 3ರವರೆಗೂ ಲಾಕ್‍ಡೌನ್ ವಿಸ್ತರಣೆ ಮಾಡಿದ್ದಾರೆ. ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ದೇಶದಲ್ಲಿ ಕೊರೋನಾ ನಿಯಂತ್ರಿಸುವ ಸಲುವಾಗಿ ಮತ್ತಷ್ಟು ಕಠಿಣ ನಿರ್ಣಯಗಳನ್ನು ಕೈಗೊಳ್ಳುವುದು ಅನಿವಾಯವಾಗಿದೆ. 21 ದಿನಗಳ ಲಾಕ್‍ಡೌನ್‍ನಿಂದ ದೇಶಕ್ಕೆ ಆರೋಗ್ಯದ ದೃಷ್ಟಿಯಿಂದ ಲಾಭ ಆಗಿದೆ. ಆದರೆ, ಇದೇ ವೇಳೆ, ದೇಶಕ್ಕೆ ಆರ್ಥಿಕವಾಗಿ ಬಹಳ ನಷ್ಟ ಆಗಿದೆ. ಇದು ಸ್ವಾಭಾವಿಕ ಕೂಡ. ಒಂದನ್ನು ಪಡೆಯಬೇಕು ಅಂದರೆ ಮತ್ತೊಂದು ಕಳೆದುಕೊಳ್ಳಬೇಕಿದೆ. ಈ ಕ್ಷಣದಲ್ಲಿ ಜೀವಗಳೇ ಮುಖ್ಯ ಹೀಗಾಗಿ, ಮೂರು ವಾರಗಳ ಕಾಲ ಲಾಕ್‍ಡೌನ್ ವಿಸ್ತರಿಸಲಾಗುತ್ತಿದೆ ಎಂದು ತಿಳಿಸಿದರು.

 • ಈ 21 ದಿನ ಲಾಕ್‍ಡೌನ್ ಪಾಲಿಸಿದಂತೆ ಮುಂದೆಯೂ ಲಾಕ್‍ಡೌನ್ ನಿಯಮಗಳನ್ನು ಪಾಲಿಸಬೇಕು. ಹೊಸ ಪ್ರದೇಶಗಳನ್ನು ಹಾಟ್ ಸ್ಪಾಟ್ ಆಗದಂತೆ ನೋಡಿಕೊಳ್ಳಬೇಕಿದೆ. ಒಂದು ಸಾವು ನಮ್ಮ ಚಿಂತೆಯನ್ನು ದ್ವಿಗುಣಗೊಳಿಸುತ್ತದೆ. ಹೀಗಾಗಿ ಕಠಿಣ ಕ್ರಮಗಳು ಅನಿವಾರ್ಯ.
 • ಏಪ್ರಿಲ್ 20ರವರೆಗೂ ದೇಶದ ಎಲ್ಲೆಡೆ ಈಗಿರುವಂತೆಯೇ ಕಠಿಣ ಲಾಕ್‍ಡೌನ್ ಜಾರಿಯಲ್ಲಿರುತ್ತದೆ. ದೇಶದಲ್ಲಿ ಹಾಟ್ ಸ್ಪಾಟ್‍ಗಳ ಸಂಖ್ಯೆ ಹೆಚ್ಚಾಗದಿದ್ದರೆ, ಆಗ ಲಾಕ್‍ಡೌನ್‍ನಿಂದ ಕೆಲವು ವಿನಾಯಿತಿಗಳು ಸಿಗಲಿವೆ. ಅದು ಷರತ್ತುಗಳೊಂದಿಗೆ ಕೂಡಿರಲಿವೆ. ಮತ್ತೆ ಕೋರೋನಾ ಹೆಚ್ಚಾದಲ್ಲಿ, ನಿಯಮಗಳನ್ನು ಮತ್ತೆ ಬಿಗಿ ಮಾಡಲಾಗುತ್ತದೆ.
 • ಮೋದಿ ಸಪ್ತಪದಿ ಸೂತ್ರ: 1. ಪ್ರತಿ ಕುಟುಂಬ, ಪ್ರತಿ ವ್ಯಕ್ತಿಕ ಸಾಮಾಜಿಕ ಅಂತರ ಪಾಲಿಸಬೇಕು, ಲಾಕ್‍ಡೌನ್ ನಿಯಮ ಉಲ್ಲಂಘಿಸಬಾರದು
  2. ಮನೆಯಲ್ಲಿ ತಯಾರು ಮಾಡಿದ ಮಾಸ್ಕ್ ಧರಿಸಿ
  3. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ, ಬಿಸಿ ನೀರು ಕುಡಿಯಿರಿ
  4. ಆರೋಗ್ಯ ಸೇತು ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.. ಇತರರಿಗೂ ಹೇಳಿ.
  5. ಬಡ ಕುಟುಂಬಗಳಿಗೆ ನೆರವಾಗಿ
  6. ಕೆಲಸದಿಂದ ಯಾರನ್ನು ತೆಗೆಯಬೇಡಿ/ ವಜಾ ಮಾಡಬೇಡಿ
  7. ವೈದ್ಯರು, ನರ್ಸ್, ಪೌರಕಾರ್ಮಿಕರು, ಪೊಲೀಸರ ಜೊತೆ ಗೌರವದಿಂದ ನಡೆದುಕೊಳ್ಳಿ
 • ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಮೂಲಕ ಬಡವರ ಅಗತ್ಯಗಳನ್ನು ಪೂರೈಸುವ ಕೆಲಸವನ್ನು ರಾಜ್ಯ ಸರ್ಕಾರಗಳು ಮಾಡಬೇಕು.
 • ರೈತರಿಗೆ ಸಾಧ್ಯವಾದಷ್ಟು ಲಾಕ್‍ಡೌನ್‍ನಿಂದ ಕಷ್ಟಗಳನ್ನು ತಪ್ಪಿಸುವ ಕೆಲಸ ನಡೆದಿದೆ. ರೈತರ ಹಿತ ಕಾಪಾಡಲು ಹಲವು ಕ್ರಮಗಳನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜಂಟಿಯಾಗಿ ಮಾಡುತ್ತಿವೆ.
 • ಲಾಕ್‍ಡೌನ್‍ನಿಂದ ಪ್ರಜೆಗಳು ಸಾಕಷ್ಟು ಕಷ್ಟ ನಷ್ಟಗಳನ್ನು ಕಂಡಿದ್ದಾರೆ. ಆದರೆ, ಇದು ದೇಶದ ಪ್ರಯೋಜನ ದೃಷ್ಟಿಯಿಂದ ಜನ ಇವನ್ನು ಸಹಿಸಿಕೊಳ್ಳುವುದು ಅನಿವಾರ್ಯ. ಎಲ್ಲರೂ ಸಂಯಮದಿಂದ ಇರಬೇಕು. ದೇಶಕ್ಕಾಗಿ ಎಲ್ಲರೂ ಸೈನಿಕರಂತೆ ಕಷ್ಟ ಪಡುತ್ತಿದ್ದೀರಿ. ನಿಮಗೆಲ್ಲಾ ಧನ್ಯವಾದ.
 • ಇಂದು ಬಾಬಾ ಸಾಹೇಬ್ ಜಯಂತಿ. ದೇಶದ ಸಂವಿಧಾನದಲ್ಲಿ ವೀ ದ ಪೀಪಲ್ ಎಂದಿದೆ. ದೇಶದ ಜನತೆ ಕೊರೋನಾ ವಿರುದ್ಧದ ಹೋರಾಟದ ವೇಲೆ ಇದನ್ನು ನಿಜ ಮಾಡಿದ್ದಾರೆ. ದೇಶವನ್ನು ಕೊರೋನಾದಿಂದ ಪಾರು ಮಾಡಲು ನಾವು ತೋರುವ ಐಕ್ಯಮತವೇ ನಾವು ಅಂಬೇಡ್ಕರ್‍ಗೆ ತೋರಿಸುವ ನಿಜವಾದ ಗೌರವ.
 • ಎಲ್ಲಿದ್ದವರು ಅಲ್ಲಿಯೇ ಇರಿ.. ಕೊರೋನಾದಿಂದ ಪಾರಾಗಿ

LEAVE A REPLY

Please enter your comment!
Please enter your name here