ಜಾರ್ಖಂಡ್‌ ವಿಧಾನಸಭಾ ಚುನಾವಣಾ ಸಮೀಕ್ಷೆ – ಅಧಿಕಾರಕ್ಕೆ ಬಿಜೆಪಿಯೋ ಕಾಂಗ್ರೆಸ್ಸೋ..?

ಗುಡ್ಡಗಾಡು ರಾಜ್ಯ ಜಾರ್ಖಂಡ್‌ನಲ್ಲಿ ವಿಧಾನಸಭಾ ಚುನಾವಣೆ ಮುಕ್ತಾಯ ಆಗಿದ್ದು, ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದಿವೆ. ಆ ಎರಡೂ ಸಮೀಕ್ಷೆಗಳು ಏನು ಹೇಳುತ್ತಿವೆ ನೋಡೋಣ.

ಇಂಡಿಯಾ ಟುಡೇ-ಆಕ್ಸಿಸ್‌ ಮೈ ಇಂಡಿಯಾ ಸಮೀಕ್ಷೆ ಪ್ರಕಾರ

ಬಿಜೆಪಿ – 22-32

ಕಾಂಗ್ರೆಸ್‌+ಜೆಎಎಂ+ಆರ್‌ಜೆಡಿ ಮೈತ್ರಿಕೂಟ – 38-50

ಜೆವಿಎಂ – 2-4

ಎಜೆಎಸ್‌ಯು – 3-5

ಇತರರು – 4-7

ಬಹುಮತಕ್ಕೆ ಅಗತ್ಯ – 41

ಸಿ ವೋಟರ್‌ ಸಮೀಕ್ಷೆ ಪ್ರಕಾರ:

ಬಿಜೆಪಿ – 32

ಕಾಂಗ್ರೆಸ್‌+ಜೆಎಎಂ+ಆರ್‌ಜೆಡಿ ಮೈತ್ರಿಕೂಟ – 35

ಜೆವಿಎಂ – 03

ಎಜೆಎಸ್‌ಯು – 05

ಇತರರು – 06

ಬಹುಮತಕ್ಕೆ ಅಗತ್ಯ – 41

ಕಾಶಿಶ್ ನ್ಯೂಸ್ ಸಮೀಕ್ಷೆ ಪ್ರಕಾರ:

ಬಿಜೆಪಿ -25-30

ಕಾಂಗ್ರೆಸ್‌+ಜೆಎಎಂ+ಆರ್‌ಜೆಡಿ ಮೈತ್ರಿಕೂಟ – 37-49

ಎಜೆಎಸ್‌ಯು – 02-04

ಇತರರು – 03

ಬಹುಮತಕ್ಕೆ ಅಗತ್ಯ – 41

ಇಂಡಿಯಾ ಟುಡೇ ಸಮೀಕ್ಷೆಯ ಪ್ರಕಾರ ಪ್ರಚಂಡ ಬಹುಮತದೊಂದಿಗೆ ಕಾಂಗ್ರೆಸ್‌ ಮೈತ್ರಿಕೂಟ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ. ಆದರೆ ಸಿ ವೋಟರ್‌ ಸಮೀಕ್ಷೆ ಪ್ರಕಾರ ಯಾರಿಗೂ ಬಹುಮತ ಸಿಗದೇ ಅತಂತ್ರ ವಿಧಾನಸಭೆ ಏರ್ಪಡಬಹುದು. ಆದರೆ ಸಿ ವೋಟರ್‌ ಸಮೀಕ್ಷೆ ಪ್ರಕಾರ ಬಿಜೆಪಿಗಿಂತ ಕಾಂಗ್ರೆಸ್‌ ಕೂಟಕ್ಕೆ ಅಧಿಕ ಸೀಟು ಸಿಗಲಿದೆ.

ಡಿಸೆಂಬರ್‌ 23ರಂದು ಮತ ಎಣಿಕೆ ನಡೆಯಲಿದೆ.

ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಇಂಡಿಯಾ ಟುಡೇ ಹೇಳಿದ್ದ ಚುನಾವಣೋತ್ತರ ಸಮೀಕ್ಷೆಯಷ್ಟೇ ನಿಜ ಆಗಿತ್ತು, ಕರ್ನಾಟಕ ವಿಧಾನಸಭಾ ಉಪ ಚುನಾವಣೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಸಿ ವೋಟರ್‌ ಸಮೀಕ್ಷೆ ನಿಜ ಆಗಿತ್ತು.

ಸದ್ಯ ಜಾರ್ಖಂಡ್‌ನಲ್ಲಿ ಬಿಜೆಪಿ ಸರ್ಕಾರವೇ ಅಸ್ತಿತ್ವದಲ್ಲಿದೆ. ನಾಗರಿಕತ್ವ ಪೌರತ್ವ ಕಾಯ್ದೆ ಮತ್ತು  ಅಯೋಧ್ಯೆ ತೀರ್ಪಿನ ಬಳಿಕ ನಡೆಯುತ್ತಿರುವ ಮೊದಲ ವಿಧಾನಸಭಾ ಚುನಾವಣೆ ಇದಾಗಿದೆ. ಬಿಜೆಪಿ ಈ ಎರಡೂ ವಿಷಯಗಳನ್ನು ಚುನಾವಣೆಯಲ್ಲಿ ವ್ಯಾಪಕವಾಘಿ ಬಳಸಿಕೊಂಡಿತ್ತು.

LEAVE A REPLY

Please enter your comment!
Please enter your name here