ಜಾಮಿಯಾ ವಿವಿ ಬಳಿ ರಾಮ್‌ಭಕ್ತ್‌ ಶರ್ಮಾನಿಂದ ಶೂಟೌಟ್‌ – ಅಮಿತ್‌ ಶಾ ಹೇಳಿದ್ದೇನು..?

ಜಾಮಿಯಾ ವಿವಿ ಬಳಿ ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟಿಸ್ತಿದ್ದವರ ಮೇಲೆ ಗುಂಡಿನ ದಾಳಿಯ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಪ್ರತಿಕ್ರಿಯಿಸಿದ್ದಾರೆ.

ಶೂಟೌಟ್‌ ಬಗ್ಗೆ ದೆಹಲಿ ಪೊಲೀಸ್‌ ಆಯುಕ್ತರ ಜೊತೆಗೆ ಚರ್ಚಿಸಿದ್ದೇನೆ. ಆರೋಪಿ ವಿರುದ್ಧ ಅತ್ಯಂತ ಕಠಿಣ ಕ್ರಮಕೈಗೊಳ್ಳುವಂತೆ ಸೂಚಿಸಿದ್ದೇನೆ. ಕೇಂದ್ರ ಸರ್ಕಾರ ಇಂತಹ ಘಟನೆಗಳನ್ನು ಎಂದಿಗೂ ಸಹಿಸಲ್ಲ ಮತ್ತು ಆರೋಪಿಯನ್ನು ಸುಮ್ಮನೆ ಬಿಡುವುದಿಲ್ಲ

ಎಂದು ಅಮಿತ್‌ ಶಾ ಟ್ವೀಟಿಸಿದ್ದಾರೆ.

ಕೇಂದ್ರಾಡಳಿತ ಪ್ರದೇಶವಾಗಿರುವ ದೆಹಲಿಯ ಪೊಲೀಸ್‌, ಕಾನೂನು ಸುವ್ಯವಸ್ಥೆ ಕೇಂದ್ರ ಗೃಹ ಸಚಿವಾಲಯದ ಆಧೀನದಲ್ಲಿ ಬರುತ್ತದೆ. ದೆಹಲಿಯ ಪೊಲೀಸ್‌ ಆಯುಕ್ತರು ಕೇಂದ್ರ ಗೃಹ ಸಚಿವಾಲಯಕ್ಕೆ ಉತ್ತರಿಸಬೇಕಾಗುತ್ತದೆ.

LEAVE A REPLY

Please enter your comment!
Please enter your name here