ಹೀಗೆ ಮಾತನಾಡಿದ್ರೆ ಹುಚ್ಚು ಸಂತೆಯಲ್ಲಿ ನಾಯಿಗೆ ಹೊಡೆದಂಗೆ ಹೊಡಿಯುತ್ತಾ ಎಂದು ಮಧುಗಿರಿ ಕ್ಷೇತ್ರದ ಮಾಜಿ ಶಾಸಕ ಕೆ.ಎನ್.ರಾಜಣ್ಣ ವಿರುದ್ಧ ಸಂಸದ ಪ್ರಜ್ವಲ್ ರೇವಣ್ಣ ಕಿಡಿಕಾರಿದ್ದಾರೆ.
ಪ್ರಸ್ತುತ ದೇವೇಗೌಡರನ್ನು ಇಬ್ಬರ ಮೇಲೆ ಹಾಕಿಕೊಂಡು ಹೋಗ್ತಿದ್ದಾರೆ. ಹತ್ತಿರದಲ್ಲಿದೆ ನಾಲ್ಕು ಜನರ ಮೇಲೆ ಹೋಗ್ತಾರೆ ಎಂದು ಮಾಧುಗಿರಿ ಮಾಜಿ ಶಾಸಕ ಕೆ.ಎನ್.ರಾಜಣ್ಣ ಹೇಳಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಂಸದ ಪ್ರಜ್ವಲ್ ರೇವಣ್ಣ ಅವರು, ಮೊದಲನೇಯದಾಗಿ ಜನಪ್ರತಿನಿಧಿಯಾಗಲು ಲಾಯಕ್ಕಿಲ್ಲ ಅಂತ ಮಧುಗಿರಿ ಜನ ಇವರನ್ನ ಮನೆಗೆ ಕಳುಹಿಸಿದ್ದಾರೆ. ಲೆಕ್ಕಿಕ್ಕಿಲ್ಲದವರ ಬಗ್ಗೆ ನಾನು ಏಕೆ ಪ್ರತಿಕ್ರಿಯೆ ಕೊಡಬೇಕು.
ದೊಡ್ಡ ದಂಧೆಕೋರ ಅವನು, ದೇವೇಗೌಡರ ಕಾಲಿನ ಧೂಳಿಗೂ ಸಮಾನ ಅಲ್ಲ ಅವನು. ನೀಚ ಬಾಯಲ್ಲಿ ನೀಚ ಪದ ಬಂದಿದೆ, ದೇವರು ಉತ್ತರ ಕೊಡ್ತಾರೆ. ಅವನು ಜನಪ್ರತಿನಿಧಿಯಲ್ಲ, ಸೋತು ಮನೆಯಲ್ಲಿ ಕೂತುಕೊಂಡಿದ್ದಾರೆ. ಹೀಗೆ ಮಾತನಾಡಿದ್ರೆ ಹುಚ್ಚು ಸಂತೆಯಲ್ಲಿ ನಾಯಿಗೆ ಹೊಡೆದಂಗೆ ಹೊಡಿಯುತ್ತಾರೆಂದು ಎಂದು ರೇವಣ್ಣ ಅವರು ವಾಗ್ದಾಳಿ ನಡೆಸಿದ್ದಾರೆ.