ಜನರಲ್ಲಿ ಭಯ ಹುಟ್ಟಿಸಿದ 500 ರೂ. ನೋಟು..!

ದುಡ್ಡು ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ.. ಎಲ್ಲಿ ದುಡ್ಡು ಬಿದ್ದಿದ್ರೂ ಅದರ ಮೇಲೆ ಕಣ್ಣು ಬಿದ್ದಿರುತ್ತೆ.. ಆದರೆ, ಉತ್ತರಪ್ರದೇಶದ ಲಖನೌದಲ್ಲಿ 500 ರೂಪಾಯಿಗಳ ಎರಡು ನೋಟುಗಳು ದಾರಿಯಲ್ಲಿ ಬಿದ್ದಿದ್ವು. ಜನ ಅದನ್ನು ಎತ್ತಿಕೊಳ್ಳೋ ಬದಲು, ಅದನ್ನು ನೋಡಿ ಮಾರು ದೂರ ಸರಿದು ನಿಲ್ತಿದ್ರು. ಕಾರಣ ಕೊರೋನಾ ಭಯ.

ಯಾರೋ ಬೇಕು ಅಂತಾ ನೋಟುಗಳನ್ನು ಎಸೆದಿದ್ದಾರೆ. ಕೊರೋನಾ ಸೋಂಕು ಹರಡಿಸಲು ಮುಂದಾಗಿದ್ದಾರೆ ಎಂದು ಜನ ಭಯ ಪಟ್ಟು, 500 ರೂ. ನೋಟುಗಳಿಂದ ದೂರ ಸರಿದ್ರು. ಕೊನೆಗೆ ಪೊಲೀಸರು ಬಂದು ಆ ನೋಟುಗಳನ್ನು ವಶಪಡಿಸಿಕೊಂಡ್ರು. ಎಲ್ಲರನ್ನು ದೂರ ಕಳಿಸಿ, ವೈದ್ಯರೊಡನೆ ಸಮಾಲೋಚನೆಯನ್ನು ಪೊಲೀಸರು ಮಾಡಿದ್ರು. ವೈದ್ಯರು ಕೂಡ ಯಾವುದಕ್ಕೂ 24 ಗಂಟೆ ಅದನ್ನು ಯಾರು ಮುಟ್ಟಬೇಡಿ ಎಂದು ಸೂಚಿಸಿದ್ರು.

ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ, ನೋಟುಗಳ ವಿಡಿಯೋ ಒಂದು ವೈರಲ್ ಆಗಿತ್ತು. ಅದನ್ನು ಇದಕ್ಕೆ ಹೋಲಿಸಿಕೊಂಡು ಜನ ಭಯ ಬಿದ್ದಿದ್ದಾರೆ.

LEAVE A REPLY

Please enter your comment!
Please enter your name here