ಜನರನ್ನು ಮನೆಯಲ್ಲಿ ಕೂರಿಸಿ ಬಡ್ಡಿ ಸಮೇತ ಶಾಕ್‌ ಕೊಟ್ಟ ಮೋದಿ..!

ಕೊರೋನಾ ಮಹಾಮಾರಿಯಿಂದ ಬಚಾವ್‌ ಆಗಲು ಭಾರತೀಯರೆಲ್ಲರೂ ಮನೆಯಲ್ಲಿ ಕೂತಿರಬೇಕಾದರೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಆಘಾತವೊಂದನ್ನು ನೀಡಿದೆ. ದುಡಿಮೆ ಇಲ್ಲದೇ ಜನಸಾಮಾನ್ಯರು ಕಂಗಾಲಾಗಿರುವ ಹೊತ್ತಲ್ಲೇ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರವನ್ನು ಗಣನೀಯ ಇಳಿಸಿದೆ.

1, 2 ಮತ್ತು 3 ವರ್ಷ ಅವಧಿಯ ಸಣ್ಣ ಉಳಿತಾಯ ಯೋಜನೆಯ ಬಡ್ಡಿ ದರವನ್ನು ಈಗಿರುವ ಶೇಕಡಾ 6.9ರಿಂದ ಶೇಕಡಾ 5.5ಕ್ಕೆ ಅಂದರೆ ಶೇಕಡಾ 1.4ರಷ್ಟು ಕಡಿತಗೊಳಿಸಿದೆ.

5 ವರ್ಷಗಳ ಸಣ್ಣ ಉಳಿತಾಯ ಯೋಜನೆ ಬಡ್ಡಿ ದರ –  ಶೇಕಡಾ 7.7ರಿಂದ ಶೇಕಡಾ 6.7ಕ್ಕೆ ಇಳಿಕೆ – ಶೇಕಡಾ 1ರಷ್ಟು ಕಡಿತ

5 ವರ್ಷಗಳ ಆರ್‌ಡಿ ಮೇಲಿನ ಬಡ್ಡಿ ದರ – ಶೇಕಡಾ 7.2 ರಿಂದ ಶೇಕಡಾ 5.8ಕ್ಕೆ ಇಳಿಕೆ – ಶೇಕಡಾ 1.4ರಷ್ಟು ಕಡಿತ

ಹಿರಿಯ ನಾಗರಿಕರ ಉಳಿತಾಯ ಯೋಜನೆ – ಶೇಕಡಾ 8.6ರಿಂದ ಶೇಕಡಾ 7.4 – ಶೇಕಡಾ 1.2ರಷ್ಟು ಇಳಿಕೆ

ಮಾಸಿಕ ಆದಾಯ ಖಾತೆ – ಶೇಕಡಾ 7.6ರಿಂದ ಶೇಕಡಾ 6.6ಕ್ಕೆ ಇಳಿಕೆ – ಶೇಕಡಾ 1ರಷ್ಟು ಕಡಿತ

ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ – ಶೇಕಡಾ 7.9 ರಿಂದ ಶೇಕಡಾ 6.8 ಇಳಿಕೆ – ಶೇಕಡಾ 1.1ರಷ್ಟು ಕಡಿತ

ಪಿಪಿಎಫ್‌ – ಶೇಕಡಾ 7.9ರಿಂದ ಶೇಕಡಾ 7.1ಕ್ಕೆ ಇಳಿಕೆ – ಶೇಕಡಾ 0.8ರಷ್ಟು ಇಳಿಕೆ

ಕಿಸಾನ್‌ ವಿಕಾಸ್‌ ಪತ್ರ – ಶೇಕಡಾ 7.6ರಿಂದ ಶೇಕಡಾ 6.9ಕ್ಕೆ ಇಳಿಕೆ – ಶೇಕಡಾ 0.7ರಷ್ಟು ಇಳಿಕೆ (ಮೆಚ್ಯೂರಿಟಿ ಅವಧಿ ಈಗಿರುವ 113 ತಿಂಗಳ ಬದಲು 124 ತಿಂಗಳಿಗೆ ಅಂದರೆ 11 ತಿಂಗಳು ಹೆಚ್ಚಳ)

ಸುಕನ್ಯಾ ಸಮೃದ್ಧಿ ಯೋಜನೆ – ಶೇಕಡಾ 8.4ರಿಂದ ಶೇಕಡಾ 7.6ಕ್ಕೆ ಇಳಿಕೆ – ಶೇಕಡಾ 0.8ರಷ್ಟು ಇಳಿಕೆ

ಮಾರ್ಪಾಡು ಮಾಡಲಾಗಿರುವ ಹೊಸ ಬಡ್ಡಿ ನಾಳೆಯಿಂದಲೇ ಜಾರಿಗೆ ಬರಲಿದೆ.

LEAVE A REPLY

Please enter your comment!
Please enter your name here