ಜಗತ್ತನ್ನೇ ಬೆಚ್ಚಿಬೀಳಿಸಿದ ಕರೋನಾ ವೈರಸ್..

ಚೀನಾದಲ್ಲಿ ಹೊಸದಾಗಿ ಹುಟ್ಟಿಕೊಂಡ ಕರೋನಾ ವೈರಸ್ ಜಗತ್ತಿಗೆ ಪ್ರಾಣಾಂತಕವಾಗಿ ಮಾರ್ಪಡುವ ಸಾಧ್ಯತೆಗಳು ನಿಚ್ಚಳವಾಗಿ ಕಂಡುಬರುತ್ತಿವೆ. ಶ್ವಾಸವ್ಯವಸ್ಥೆ ಮೇಲೆ ಅಟ್ಯಾಕ್ ಮಾಡುವ ಕರೋನಾ ಸೂಕ್ಷ್ಮಾಣು ಜೀವಿ ಈಗಾಗಲೇ ನಾಲ್ವರನ್ನು ಬಲಿ ಪಡೆದಿದೆ. 30ಕ್ಕೂ ಹೆಚ್ಚು ಮಂದಿಗೆ ವೈರಸ್ ಅಟಕಾಯಿಸಿಕೊಂಡಿದೆ. 900ಕ್ಕೂ ಹೆಚ್ಚು ಮಂದಿಯನ್ನು ವೈರಸ್ ಅಟ್ಯಾಕ್ ಆಗಿರುವ ಶಂಕೆ ಮೇಲೆ ಅಬ್ಸರ್ವೇಷನ್‍ನಲ್ಲಿ ಇರಿಸಲಾಗಿದೆ. ಅಷ್ಟಕ್ಕೂ ಈ ವೈಎಸ್ ಏನು..? ಹೇಗೆ ವ್ಯಾಪಿಸುತ್ತದೆ ಅನ್ನುವುದನ್ನು ನೋಡೋಣ.

ಕರೋನಾ ಎಂದರೇ..?
ಕಳೆದ ಡಿಸೆಂಬರ್‍ನಲ್ಲಿ ಚೀನಾದ ಉಹಾನ್ ನಗರದ ಸನುದ್ರದ ಆಹಾರ ಪದಾರ್ಥಗಳ ಮಾರುಕಟ್ಟೆಯಲ್ಲಿ ಈ ಅಪಾಯಕಾರಿ ವೈರಸ್ ಮೊದಲಿಗೆ ಕಾಣಿಸಿಕೊಂಡಿತು ಎಂದು ಗುರುತಿಸಲಾಗಿದೆ. ವೈರಸ್ ಸೋಕಿದ ಇಬ್ಬರು ಉಹಾನ್‍ನಲ್ಲಿ ಮೃತಪಟ್ಟಿದ್ದರು. ಈ ಇಬ್ಬರ ಸ್ಯಾಂಪಲ್‍ಗಳನ್ನು ಲಂಡನ್‍ಗೆ ಕಳುಹಿಸಿ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗಿತ್ತು. ಇದು ಕರೋನಾ ವೈರಸ್ ಎಂದು ಲಂಡನ್ ತಜ್ಞರು ಗುರುತಿಸಿದರು. ಲ್ಯಾಟಿನ್‍ನಲ್ಲಿ ಕರೋನಾ ಎಂದರೇ ಕಿರೀಟ ಎಂದರ್ಥ. ಈ ಸೂಕ್ಷ್ಮಾಣು ಜೀವಿಯನ್ನು ಮೈಕ್ರೋಸ್ಕೋಪ್‍ನಲ್ಲಿ ನೋಡಿದಾಗ, ರಾಜರು ಧರಿಸ್ತಿದ್ದ ಕಿರೀಟದ ಆಕೃತಿಯಲ್ಲಿ ಕಂಡುಬಂದಿದೆ. ಹೀಗಾಗಿ ಇದಕ್ಕೆ ಕರೋನಾ ಎಂದು ಹೆಸರಿಡಲಾಗಿದೆ.

ಕರೋನಾ ವೈರಸ್ ಲಕ್ಷಣಗಳೇನು..?
* ಜೀವಿಗಳ ಮೂಲಕ ಮನುಷ್ಯರಿಗೆ ಕರೋನಾ ವೈರಸ್ ಸೋಂಕು
* ಮೊದಲು ಶೀತ ಕಂಡುಬರುತ್ತದೆ
* ಜ್ವರ, ಕೆಮ್ಮು, ಎದೆ ನೋವು ಕಾಣಿಸಿಕೊಳ್ಳುತ್ತದೆ
* ಉಸಿರಾಟದ ತೊಂದರೆ ತೀವ್ರವಾಗುತ್ತದೆ
* ಕೊನೆಗೆ ಇದು ನ್ಯೂಮೋನಿಯಾಗೆ ತಿರುಗುತ್ತದೆ
* ಪ್ರಾಣ ಹಾನಿ ಸಂಭವಿಸುವ ಸಾಧ್ಯತೆ ಹೆಚ್ಚು
* ಚಳಿಗಾಲದಲ್ಲಿ ಸೋಂಕಿನ ತೀವ್ರತೆ, ವ್ಯಾಪ್ತಿ ಹೆಚ್ಚು
* ಮನುಷ್ಯರಿಂದ ಮನುಷ್ಯರಿಗೆ ಹರಡುವ ಸಾಧ್ಯತೆ ಕಡಿಮೆ

ಎಲ್ಲೆಲ್ಲಿ ವೈರಸ್ ಪ್ರಭಾವ..?
* ಚೀನಾ
* ಜಪಾನ್
* ದಕ್ಷಿಣ ಕೋರಿಯಾ
* ಉತ್ತರ ಕೋರಿಯಾ
* ಥೈಲ್ಯಾಂಡ್
ಈ ದೇಶಗಳಲ್ಲಿ ವೈರಸ್ ಕಂಡು ಬಂದಿದೆ. ವೈರಸ್ ಭೀತಿಯಿಂದ ಉತ್ತರ ಕೋರಿಯಾ ತನ್ನ ದೇಶದ ಗಡಿಯನ್ನು ಸಂಪೂರ್ಣವಾಗಿ ಮುಚ್ಚಿಬಿಟ್ಟಿದೆ.

ಎಚ್ಚೆತ್ತ ಭಾರತ..
ಕರೋನಾ ವೈರಸ್ ತೀವ್ರತೆ ಅರಿತ ಭಾರತ ಸರ್ಕಾರ, ಚೀನಾದಿಂದ ಬಂದಿಳಿಯುವ ಪ್ರಯಾಣಿಕರ ಆರೋಗ್ಯ ಪರೀಕ್ಷಿಸಲು ದೆಹಲಿಯ ಇಂದಿರಾ ಗಾಂಧಿ ಏರ್‍ಪೋರ್ಟ್‍ನಲ್ಲಿ ಥರ್ಮಲ್ ಸ್ಕ್ರೀನಿಂಗ್ ಟೆಸ್ಟ್ ಮಾಡುತ್ತಿದೆ. ಅಮೆರಿಕಾ ಸೇರಿ ಹಲವು ದೇಶಗಳು, ಚೀನಾಗೆ ಪ್ರವಾಸ ಹೋಗಬೇಡಿ ಎಂದು ತನ್ನ ಪ್ರಜೆಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿವೆ.

LEAVE A REPLY

Please enter your comment!
Please enter your name here