ಚೋಟಿ ಚೇತನಾಳಿಂದ ಕರೋನಾ ಜಾಗೃತಿ…

ಕೊರೊನಾ ವೈರಸ್‌ ಕುರಿತು ಜಾಗೃತಿ ಮೂಡಿಸಲು ಅನೇಕ ರೀತಿಯ ಪ್ರಯತ್ನಗಳು ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ಮೈಸೂರು ಮೂಲದ ಅನಿಮೇಷನ್‌ ಸಂಸ್ಥೆಯೊಂದು ಮುಂದಾಗಿದೆ.

ಒಂದೂವರೆ ನಿಮಿಷದ “ಚೋಟಿ ಚೇತನಾ” ಅನಿಮೇಷನ್‌ ಚಿತ್ರ ಸಿದ್ದಪಡಿಸಿ ಈಗಾಗಲೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕಚೇರಿಗೆ ತಲುಪಿಸಲಾಗಿದೆ.

ಕೋರೋನಾವೈರಸ್‌ ನಿಗ್ರಹಿಸಲು ಹೋರಾಡುತ್ತಿರುವ ‌ವೈದ್ಯರು,ದಾದಿಯರು,ಪೋಲೀಸರು,ಪೌರಕಾರ್ಮಿಕರು ಮುಂತಾದ ಕೊರೊನಾ ವಾರಿಯರ್ಸ್ ಸೇವೆಯನ್ನು ಸ್ಮರಿಸುವ ಪುಟ್ಟ ಬಾಲಕಿ ʼಮೋದಿ ಅಂಕಲ್ʼ ಹೇಳಿದ್ದನ್ನು ಪಾಲಿಸಿ, ನಾಗರೀಕರೆಲ್ಲರೂ ಮನೆಯಲ್ಲಿಯೇ ಇರಿ ಎಂದು ಮನಮುಟ್ಟುವಂತೆ ಸಲಹೆ ನೀಡಿರುವ ವೀಡಿಯೋ ಇದಾಗಿದೆ.‌

ಇಂತಹ ಒಂದು ಸೃಜನಾತ್ಮಕ ಅನಿಮೇಷನ್‌ ಸೃಷ್ಟಿಸಿರುವವರು ಎಸ್. ಎ ಶ್ರೀಕಾಂತ್‌ ನೇತೃತ್ವದ ʼಓಂ ಅನಿಮೇಷನ್‌ ತಂಡʼ. ಅಂದ ಹಾಗೆ ಈ ಚಿತ್ರ ಮಂಗಳೂರು ಮತ್ತು ಮೈಸೂರಿನ ಸ್ಟುಡಿಯೋದಲ್ಲಿ ನಿರ್ಮಾಣವಾಗಿದೆ. ಹಿಂದಿ ಅವತರಣಿಕೆಯ ಒಟ್ಟು 6 ಅನಿಮೇಷನ್‌ ತುಣುಕುಗಳು ಇದ್ದು, ಇನ್ನೂ 5 ತುಣುಕಗಳ ಸಿದ್ದತೆ ಅಂತಿಮ ಹಂತದಲ್ಲಿದೆ.

ವೀಡಿಯೋ ವೀಕ್ಷಿಸಲು ಈ ಲಿಂಕ್‌ ಕ್ಲಿಕ್‌ ಮಾಡಿ-

 

LEAVE A REPLY

Please enter your comment!
Please enter your name here