ಚಿರತೆ ಮರಿಯೊಂದಿಗೆ ಕಾದಾಟಕ್ಕೆ ಇಳಿದ ಹಲ್ಲಿ, ಮುಂದೆ ನಡೆದದ್ದೇನು?

ಚಿರತೆ ಜೊತೆ ಕಾದಾಟಕ್ಕೆ ಇಳಿದರೆ ಸಾಮಾನ್ಯದವರಿಗೆ ಬದುಕುಳಿಯಲು ಸಾಧ್ಯವೇ? ಖಂಡಿತಾ ಇಲ್ಲ. ಅಂತದ್ದರಲ್ಲಿ ಚಿರತೆ ಮರಿಯೊಂದಿಗೆ ಕಾದಾಟಕ್ಕೆ ಇಳಿದ ಹಲ್ಲಿ ಸ್ಥಿತಿ ಹೇಗಾಗಿರಬೇಡ? ಹೌದು ಇಂತದ್ದೊಂದು ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಭಾರತೀಯ ಅರಣ್ಯ ಸೇವಾ ಅಧಿಕಾರಿ ಪ್ರವೀಣ್ ಕಸ್ವಾನ್ ಪ್ರಕಟಿಸಿರುವ 29 ಸೆಕೆಂಡ್ ಗಳ ವೀಡಿಯೋದಲ್ಲಿ ಮಾನಿಟರ್ ಹಲ್ಲಿ ಎಂಬ ಒಂದು ಜಾತಿಯ ಹಲ್ಲಿ ( ತನ್ನ ಹಿಂಗಾಲುಗಳ ಮೇಲೆ ನಿಂತು ಶತ್ರುಗಳ ಬರುವಿಕೆಯನ್ನು ತಿಳಿದುಕೊಳ್ಳುವ ಕಾರಣಕ್ಕಾಗಿ ಇವುಗಳಿಗೆ ಮಾನಿಟರ್ ಹಲ್ಲಿ ಎಂದು ಕರೆಯುತ್ತಾರೆ) ತನ್ನ ಮೇಲೆ ಆಕ್ರಮಣಕ್ಕೆ ಬಂದ ಚಿರತೆ ಮರಿಯೊಂದಿಗೆ ಕಾದಾಟಕ್ಕೆ ನಿಂತಿದ್ದು ರೆಕಾರ್ಡ್ ಆಗಿದೆ.

ಮೊದಲು ಚಿರೆತ ಮರಿ ಹಲ್ಲಿಯ ಮೇಲೆ ಆಕ್ರಮಣಕ್ಕೆ ಬಂದಾಗ ಮಾನಿಟರ್ ಹಲ್ಲಿ ತನ್ನ ಬಾಲದ ಸಹಾಯದಿಂದ ಮೂರು- ನಾಲ್ಕು ಬಾರಿ ಚಿರತೆಗೆ ಮಣ್ಣುಮುಕ್ಕಿಸಲು ನೋಡಿದೆ, ಆದರೆ ಚಿರತೆ ಮರಿಯ ಶಕ್ತಿ ಮತ್ತು ಬುದ್ದಿವಂತಿಕೆಯ ಮುಂದೆ ಸೋತ ಹಲ್ಲಿ ಚಿರತೆಗೆ ಬಲಿಯಾಗಿದೆ.

ತನ್ನ ಮೇಲೆ ಆಕ್ರಮಣ ಮಾಡುತ್ತಿದ್ದ ಹಲ್ಲಿಯ ಬಗ್ಗೆ ಇನ್ನಷ್ಟು ಕೋಪಗೊಂಡ ಚಿರತೆ ಮರಿ ತನ್ನ ಬುದ್ದಿವಂತಿಕೆಯಿಂದ ಹಲ್ಲಿಯ ಕುತ್ತಿಗೆಗೆ ಬಾಯಿ ಹಾಕಿ ಹಿಡಿದುಕೊಂಡಿದೆ, ಹಲ್ಲಿ ಮೊದಲು ಸ್ವಲ್ಪ ಕೊಸರಾಡಿ ತಪ್ಪಿಸಿಕೊಳ್ಳಲು ಯತ್ನಿಸಿದರೂ ಕೂಡಾ ಚಿರತೆಯ ಕಪಿಮುಷ್ಟಿಯಿಂದ ತಪ್ಪಿಸಿಕೊಳ್ಳಲು ವಿಫಲವಾಗಿದೆ.

ಕೇವಲ 29 ಸೆಕೆಂಡ್ ಗಳ ಈ ವೀಡಿಯೋ ಪ್ರಕಟಗೊಂಡ ಕೆಲವೇ ಗಂಟೆಗಳಲ್ಲಿ 28,000 ಕ್ಕೂ ಹೆಚ್ಚು ಮಂದಿ ಇದನ್ನು ವೀಕ್ಷಿಸಿದ್ದಾರೆ ಹಾಗೂ 3000 ಲೈಕ್ ಗಳನ್ನು ಪಡೆದಿದೆ ಹಾಗೂ 450 ಕ್ಕೂ ಹೆಚ್ಚು ಬಾರಿ ರೀ ಟ್ವೀಟ್ ಮಾಡಲಾಗಿದೆ.

LEAVE A REPLY

Please enter your comment!
Please enter your name here