ಚಿನ್ನ ಮರೆತುಬಿಡು ಚಿನ್ನಾ.. ಬಂಗಾರದ ಬೆಲೆ ಭಗಭಗ

ಮಧ್ಯಪ್ರಾಚ್ಯದಲ್ಲಿ ಕವಿದಿರುವ ಯುದ್ಧದ ಕಾರ್ಮೋಡದಿಂದ ದೇಶದಲ್ಲಿ ಬಂಗಾರದ ಬೆಲೆ ಭಗಭಗ ಎನ್ನಲು ಶುರು ಮಾಡಿದೆ. ಸತತವಾಗಿ 2ನೇ ದಿನವೂ ಚಿನ್ನದ ಬೆಲೆಯಲ್ಲಿ ಭಾರೀ ಹೆಚ್ಚಳವಾಗಿದೆ. ದೆಹಲಿಯಲ್ಲಿ ಇಂದೊಂದೆ ದಿನ 720 ರೂಪಾಯಿ ಹೆಚ್ಚಳವಾದ ಕಾರಣ 10 ಗ್ರಾಂ ಅಪರಂಜಿ ಬಂಗಾರದ ಬೆಲೆ 41,730 ರೂಪಾಯಿಗೆ ತಲುಪಿತು. ಬಂಗಾರದ ಈ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟದ್ದಾಗಿದೆ. ಬೆಳ್ಳಿ ಬೆಲೆ ಜಿಗಿತ ಕಂಡಿದೆ. ಕೆಜಿ ಬೆಳ್ಳಿಗೆ ಇವತ್ತೊಂದೇ ದಿನ 1,105 ರೂಪಾಯಿ ಹೆಚ್ಚಾಗಿದ್ದು, 50 ಸಾವಿರದ ಸನಿಹದಲ್ಲಿದೆ. ಇಂದಿನ ಬೆಳ್ಳಿ ಬೆಲೆ ಒಂದು ಕೆಜಿಗೆ 49,430 ರೂ.

ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಹೀಗೆ ಮುಂದುವರೆದರೇ ಬಂಗಾರದ ಬೆಲೆ 45 ಸಾವಿರ ರೂಪಾಯಿ ದಾಟುವುದು ನಿಶ್ಚಿತ ಎಂದು ಮಾರುಕಟ್ಟೆ ತಜ್ಞರು ಹೇಳುತ್ತಿದ್ದಾರೆ. ಕಳೆದ ಮೂರು ತಿಂಗಳಲ್ಲಿ ಚಿನ್ನದ ಬೆಲೆ 1800 ರೂಪಾಯಿ ಹೆಚ್ಚಾಗಿರುವುದು ಇಲ್ಲಿ ಗಮನಿಸಬೇಕಾದ ಅಂಶ.

ಚಿನ್ನದ ಬೆಲೆ ಈ ಪರಿ ಏರಲು ಕಾರಣವೇನು..?
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಏರಿಕೆ ಕಂಡಿದೆ. ಕಮಾಡಿಟಿ ಎಕ್ಸ್‍ಜೇಂಜ್‍ಗಳಲ್ಲಿ ಒಂದು ಔನ್ಸ್ ಬಂಗಾರದ ಬೆಲೆ 2.3ರಷ್ಟು ಹೆಚ್ಚಾಗಿದೆ. ಡಾಲರ್ ಎದುರು ಕುಸಿಯುತ್ತಿರುವ ರೂಪಾಯಿ ಮೌಲ್ಯ, ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಚಿನ್ನದ ಮೇಲೆ ಹೂಡಿಕೆ ಸುರಕ್ಷಿತ ಎಂದು ಹೂಡಿಕೆದಾರರು ಭಾವಿಸಿದ ಕಾರಣ ಚಿನ್ನ ಮತ್ತು ಬೆಳ್ಳಿ ಮೇಲೆ ಹೂಡಿಕೆಯ ಸುರಿಮಳೆಯಾಗಿದೆ. ಪರಿಣಾಮ ಚಿನ್ನದ ಬೆಲೆಯಲ್ಲಿ ಸಾರ್ವಕಾಲಿಕ ಏರಿಕೆಯಾಗಿದೆ ಎಂದು ಮಾರುಕಟ್ಟೆ ಪರಿಣಿತರು ಹೇಳುತ್ತಿದ್ದಾರೆ.

ಇದನ್ನು ಓದಿ

ದುಬಾರಿ 2020.. 45ಸಾವಿರ ಆಗುತ್ತೆ ಚಿನ್ನದ ಬೆಲೆ..!

LEAVE A REPLY

Please enter your comment!
Please enter your name here