ಚಿನ್ನದ ಬೆಲೆ ಎಷ್ಟಾಯ್ತು ಗೊತ್ತಾ..? ಶಾಕ್..ಶಾಕ್.. ಶಾಕ್..!

ಬಂಗಾರ ಪ್ರಿಯರಿಗೆ ಹೊಸವರ್ಷ ಶಾಕಿಂಗ್ ನ್ಯೂಸ್. ಹೌದು ಚಿನ್ನದ ಬೆಲೆ ಆಕಾಶಕ್ಕೆ ನೆಗೆದಿದೆ. ಇದೇ ಮೊದಲ ಬಾರಿಗೆ 10 ಗ್ರಾಂ ಚಿನ್ನದ ಬೆಲೆ 40 ಸಾವಿರ ರೂಪಾಯಿ ಗಡಿದಾಟಿದೆ.

ಬೆಂಗಳೂರಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 40 ಸಾವಿರದ ನಾಲ್ಕು ನೂರ ಐವತ್ತು ರೂಪಾಯಿ ಆಗಿದೆ. ಡಿಸೆಂಬರ್ 26ರಂದು ಚಿನ್ನದ ಬೆಲೆ 39,990 ರುಪಾಯಿ ಇತ್ತು. ಡಿಸೆಂಬರ್ 27ರಂದು 40,200 ರೂಪಾಯಿ ಆಯಿತು. ಡಿಸೆಂಬರ್ 28ರಂದು 40, 320 ರೂಪಾಯಿಗೆ ಏರಿತು. ನಿನ್ನೆ 130 ರೂಪಾಯಿ ಇಳಿಕೆ ಕಂಡಿದ್ದ ಬಂಗಾರದ ದರ ಇವತ್ತು 40,450 ರೂಪಾಯಿಗೆ ಬಂದು ನಿಂತಿದೆ.

ಕಳೆದ ವರ್ಷ ಇದೇ ದಿನ ಅಂದರೆ ಡಿಸೆಂಬರ್ 31ರಂದು 10 ಗ್ರಾಂ ಶುದ್ಧ ಚಿನ್ನದ ಬೆಲೆ 32,680 ರೂಪಾಯಿ ಆಗಿತ್ತು. ಅಂದರೆ ಕಳೆದ ಒಂದು ವರ್ಷದಲ್ಲಿ ಬರೋಬ್ಬರಿ ಎಂಟು ಸಾವಿರ ರೂಪಾಯಿಯಷ್ಟು ಏರಿಕೆ ಕಂಡಿದೆ.

ಚಿನ್ನದ ಮೇಲೆ ಜಿಎಸ್ಟಿ ಹೆಚ್ಚಳವಾಗುವ ಬಗ್ಗೆಯೂ ಇತ್ತೀಚೆಗೆ ವರದಿಯಾಗಿತ್ತು. ಆದರೆ ತೆರಿಗೆ ಹೆಚ್ಚಳದ ಸಾಧ್ಯತೆಯನ್ನು ಕೇಂದ್ರ ಸರಕಾರ ತಳ್ಳಿ ಹಾಕಿದೆ. ಫೆಬ್ರವರಿ ಒಂದರಂದು ಕೇಂದ್ರ ಹಣಕಾಸು  ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದು ಚಿನ್ನದ ಮೇಲಿನ ಹೊರೆ ಜನಸಾಮಾನ್ಯರಿಗೆ ಜಾಸ್ತಿಯಾಗುತ್ತಾ ಎಂಬ ಅನುಮಾನಗಳಿಗೆ ಉತ್ತರ ಸಿಗಲಿದೆ ‌.

LEAVE A REPLY

Please enter your comment!
Please enter your name here