ಗ್ರೀನ್‌ಝೋನ್‌ ಜಿಲ್ಲೆಗಳಿಗೆ ಸ್ಪೆಷಲ್‌ ರಿಲೀಫ್‌ – ಏನಿರುತ್ತೆ..?

ರೆಡ್‌ ಮತ್ತು ಆರೆಂಜ್‌ಝೋನ್‌ಗಿಂತಲೂ ಅಧಿಕವಾಗಿ ಕೇಂದ್ರ ಸರ್ಕಾರ ಗ್ರೀನ್‌ಝೋನ್‌ಗೆ ವಿನಾಯ್ತಿ ನೀಡಿದೆ.

ಎಲ್ಲಾ ಝೋನ್‌ಗಳಲ್ಲಿ ನಿಷೇಧಿಸಲಾಗಿರುವ ಚಟುವಟಿಕೆಗಳನ್ನು ಹೊರತುಪಡಿಸಿ ಉಳಿದೆಲ್ಲ ಚಟುವಟಿಕೆಗಳಿಗೆ ಹಸಿರು ವಲಯದಲ್ಲಿ ಅನುಮತಿ ನೀಡಲಾಗಿದೆ.

೧) ಶೇಕಡಾ ೫೦ರಷ್ಟು ಬಸ್‌ಗಳು ಓಡಾಬಹುದು. ಬಸ್‌ಗಳಲ್ಲಿ ಅತ್ಯಧಿಕ ಶೇಕಡಾ ೫೦ರಷ್ಟೇ ಪ್ರಯಾಣಿಕರಿರಬೇಕು.

೨) ಮದ್ಯ ಮಾರಾಟಕ್ಕೆ ಅವಕಾಶ

೩) ಟ್ಯಾಕ್ಸಿ ಮತ್ತು ಕ್ಯಾಬ್‌ ಓಡಾಡಬಹುದು – ಓರ್ವ ಡ್ರೈವರ್‌ ಮತ್ತು ಇಬ್ಬರು ಪ್ರಯಾಣಿಕರು (ಒಟ್ಟು ಮೂರು ಜನ)

೪) ಜಿಲ್ಲೆಗಳ ನಡುವೆ, ಜಿಲ್ಲೆಗಳ ಒಳಗೆ ಜನ ಓಡಾಡಬಹುದು

೫) ವಿಶೇಷ ಆರ್ಥಿಕ ವಲಯ, ಇಂಡಸ್ಟ್ರೀಯಲ್‌ ಎಸ್ಟೇಟ್‌, ಇಂಡಸ್ಟ್ರೀಯಲ್‌ ಟೌನ್‌, ಇಂಡಸ್ಟ್ರೀಯಲ್‌ ಟೌನ್‌ಶಿಪ್‌ಗಳಲ್ಲಿ ಬರುವ ಕೈಗಾರಿಕೆಗಳು, ಉತ್ಪಾದಲ ಘಟಕಗಳು, ಕಚ್ಚಾ ವಸ್ತು ಉತ್ಪಾದಕ ಘಟಕಗಳು, ಐಟಿ ಮತ್ತು ಹಾರ್ಡ್‌ವೇರ್‌ (ಈ ವ್ಯಾಪ್ತಿಯಲ್ಲಿ ಬಹುತೇಕ ಎಲ್ಲಾ ಕೈಗಾರಿಕೆಗಳು ಬರುತ್ತವೆ).

೬) ಎಲ್ಲಾ ರೀತಿಯ ನಿರ್ಮಾಣ ಕಾಮಗಾರಿಗಳು (ಕಟ್ಟಡ, ರಸ್ತೆ ಒಳಗೊಂಡು)

೭) ಗ್ರಾಮೀಣ ಭಾಗದಲ್ಲಿ ಎಲ್ಲಾ ರೀತಿಯ ಕೈಗಾರಿಕೆಗಳು

೮) ಅಗತ್ಯ ಮತ್ತು ಅವಶ್ಯಕವಲ್ಲದ ಅಂಗಡಿಗಳು, ಮಾರ್ಕೆಟ್‌ಗಳನ್ನು ತೆರೆಯಲು ಅನುಮತಿ

೯) ಗ್ರಾಮೀಣ ಭಾಗದಲ್ಲಿ ಮಾಲ್‌ಗಳನ್ನು ಹೊರತುಪಡಿಸಿ ಎಲ್ಲ ರೀತಿಯ ಅಂಗಡಿಗಳನ್ನು ತೆರೆಯಬಹುದಾಗಿದೆ.

೧೦) ಇ-ಕಾರ್ಮಸ್‌ಗಳಿಗೆ (ಅಮೆಜಾನ್‌, ಫ್ಲಿಪ್‌ಕಾರ್ಟ್‌ ಇತ್ಯಾದಿ) ಕೇವಲ ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಲಾಗಿದೆ

೧೧) ಖಾಸಗಿ ಕಚೇರಿಗಳಿಗೆ ಗರಿಷ್ಠ ಶೇಕಡಾ ೩೩ರಷ್ಟು ನೌಕರರೊಂದಿಗೆ ತೆರೆಯಲು ಅವಕಾಶ ನೀಡಲಾಗಿದೆ. ಉಳಿದವರು ಮನೆಯಿಂದಲೇ ಕೆಲಸ ಮಾಡಬೇಕು.

೧೨) ಉಳಿದಂತೆ ಎಲ್ಲಾ ರೀತಿಯ ಅಗತ್ಯಸೇವೆಗಳು – ಕೃಷಿ, ಸರ್ಕಾರಿ ಕಚೇರಿಗಳು (ಶೇಕಡಾ ೩೩ರಷ್ಟು ನೌಕರರು ಮಾತ್ರ), ಬ್ಯಾಂಕ್‌, ಅಂಚೆ ಕಚೇರಿ, ಜಲ ಮಂಡಳಿ, ಎಸ್ಕಾಂಗಳು, ಕೋರಿಯರ್‌ ಸೇವೆ, ಕೇಬಲ್‌, ಇಂಟರ್‌ನೆಟ್‌, ಎಪಿಎಂಸಿ, ಮಾಂಸ ಮಾರಾಟ, ಮೀನುಗಾರಿಕೆ, ಹೈನುಗಾರಿಕೆ, ರಸಗೊಬ್ಬರ ಮತ್ತು ಬಿತ್ತನೆ ಬೀಜ ಮಾರುವ ಅಂಗಡಿಗಳು

೧೩) ಅಗತ್ಯ ಸೇವೆ ವಾಹನಗಳ ಓಡಾಟ (ಈ ಹಿಂದಿನ ನಿಯಮವೇ ಮುಂದುವರಿಯುತ್ತೆ – ನಿರ್ಬಂಧ ಇಲ್ಲ)

೧೪) ಹೋಟೆಲ್‌ಗಳು ತೆರೆಯಬಹುದು- ಪಾರ್ಸೆಲ್‌ಗಷ್ಟೇ ಅವಕಾಶ

೧೫) ಸಲೂನ್‌, ಸ್ಪಾ ತೆರೆಯಬಹುದು.

೧೬) ಸಿಮೆಂಟ್‌, ಕಬ್ಬಿಣದಂಗಡಿ, ಮರಳುಗಾರಿಕೆ, ಕ್ರಷರ್‌, ಜಲ್ಲಿ ಸಾಗಾಟಕ್ಕೆ ಅವಕಾಶ‌

ಇದನ್ನೂ ಓದಿ.

ಮತ್ತೆ ಎರಡು ವಾರ ಕರ್ನಾಟಕದಲ್ಲಿ ಇವೆಲ್ಲ ಇರಲ್ಲ..! – ಇಲ್ಲಿದೆ ಸಂಪೂರ್ಣ ಲಿಸ್ಟ್‌

LEAVE A REPLY

Please enter your comment!
Please enter your name here