ಗೋಹತ್ಯೆ ಮಾಡಿದ್ರೆ 10 ವರ್ಷ ಜೈಲು ಫಿಕ್ಸ್

ಇನ್ಮೇಲೆ ಗೋಹತ್ಯೆ ಮಾಡಿದರೇ ಹತ್ತು ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಅಷ್ಟೇ ಅಲ್ಲ ಐದು ಲಕ್ಷ ದಂಡ ಕೂಡ ಕಟ್ಟ ಬೇಕಾಗುತ್ತದೆ.

ಗೋವಿಗೆ ಹಿಂಸೆ ನೀಡಿ ಗಾಯಗೊಳಿಸಿದರೇ ಏಳು ವರ್ಷ ಜೈಲು, ಮೂರು ಲಕ್ಷ ದಂಡ ಕಟ್ಟಬೇಕಾಗುತ್ತದೆ.

ಗೋಹತ್ಯೆ ನಿಷೇಧ ಕಾಯ್ದೆ-1955ಗೆ ತಿದ್ದುಪಡಿ ಉತ್ತರ ಪ್ರದೇಶ ಸರ್ಕಾರ ಇತ್ತೀಚಿಗೆ ಹೊರಡಿಸಿದ್ದ ಸುಗ್ರಿವಾಜ್ಞೆಗೆ ಯೋಗಿ ಆದಿತ್ಯ ನಾಥ್ ಸಂಪುಟ ಅನುಮೋದನೆ ನೀಡಿದೆ.

ಗೊಹತ್ಯೆ ನಿಷೇಧ ಕಾಯ್ದೆ-1955ಯನ್ನು 1958, 1961, 1979, 2002ರಲ್ಲಿ ತಿದ್ದುಪಡಿ ಮಾಡಲಾಗಿತ್ತು. 1964, 1979ರಲ್ಲಿ ನಿಯಮಗಳ ತಿದ್ದುಪಡಿ ಮಾಡಲಾಗಿತ್ತು. ಹೊಸ ಆರ್ಡಿನೆನ್ಸ್ ಪ್ರಕಾರ ಗೋವುಗಳ ಅಕ್ರಮ ಸಾಗಣೆ ಮಾಡಿದರೇ ವಾಹನ ಮಾಲೀಕ, ಆಪರೇಟರ್ ಎಲ್ಲರೂ ಹೊಣೆಗಾರರಾಗುತ್ತಾರೆ. ಗೋವುಗಳಿಗೆ ನೀರು, ಆಹಾರ ಸಕಾಲಕ್ಕೆ ನೀಡದಿದ್ದರೂ ಅಪರಾಧ ಆಗುತ್ತದೆ.

ದೇಶದ ಆರ್ಥಿಕ ವ್ಯವಸ್ಥೆಗೆ ಆಧಾರವಾಗಿರುವ ಕೃಷಿ ರಂಗದಲ್ಲಿ ಗೋವುಗಳ ಪಾತ್ರ ನಿರ್ಣಾಯಕವಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರ ಅಭಿಪ್ರಾಯ ಪಟ್ಟಿದೆ. ಗೋವುಗಳ ಹೊಣೆ ನಮ್ಮದು ಎಂದಿದೆ

LEAVE A REPLY

Please enter your comment!
Please enter your name here