ಗೃಹ ಸಾಲದ ಮೇಲೆ ಸಬ್ಸಿಡಿ – ಯಾರಿಗೆಲ್ಲ ಈ ಲಾಭ, ಸಾಲದಿಂದ ಎಷ್ಟು ಉಳಿತಾಯ..? ಸಂಪೂರ್ಣ ಮಾಹಿತಿ

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಇವತ್ತು ಘೋಷಣೆ ಮಾಡಿದ ಆರ್ಥಿಕ ಪ್ಯಾಕೇಜ್‌ಗಳ ಪೈಕಿ ಪ್ರಮುಖವಾದದ್ದು 70 ಸಾವಿರ ಕೋಟಿ ರೂಪಾಯಿ ಮೊತ್ತದ ಗೃಹ ಸಾಲ ಸಬ್ಸಿಡಿ ವಿಸ್ತರಣೆ. ಸಿಎಲ್‌ಎಸ್‌ಎಸ್‌ – ಸಾಲ ಸಂಯೋಜಿತ ಸಬ್ಸಿಡಿ ಯೋಜನೆ

ಹಾಗಾದರೆ ಇವತ್ತು ನೀಡಲಾಗಿರುವ ಗೃಹ ಸಾಲ ಸಬ್ಸಿಡಿ ವಿಸ್ತರಣೆಯ ಲಾಭವನ್ನು ಯಾರೆಲ್ಲ ಪಡೆದುಕೊಳ್ಳಬಹುದು..? ಎಷ್ಟು ಲಾಭ ಸಿಗಲಿದೆ ಎನ್ನುವ ವಿವರವಾದ ಮಾಹಿತಿಯನ್ನು ನಾವು ನೀಡುತ್ತೇವೆ.

ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಧ್ಯಮ ವರ್ಗಕ್ಕೆ ಗೃಹ ಸಾಲ ಸಬ್ಸಿಡಿ ವಿಸ್ತರಣೆಯ ಘೋಷಣೆಯನ್ನು ಮಾಡಿದ್ದಾರೆ.

ಆದಾಯ ಮಿತಿ:

ಕೇಂದ್ರ ಸರ್ಕಾರದ ಇವತ್ತಿನ ಘೋಷಣೆಯ ಪ್ರಕಾರ ಗೃಹ ಸಾಲ ಸಬ್ಸಿಡಿಯ ಲಾಭವನ್ನು ಪಡೆದುಕೊಳ್ಳಲು ವಿಧಿಸಲಾಗಿರುವ ಆದಾಯ ಮಿತಿ 6 ಲಕ್ಷ ರೂಪಾಯಿ 18 ಲಕ್ಷ ರೂಪಾಯಿವರೆಗೆ ವಾರ್ಷಿಕ ಆದಾಯ ಪಡೆಯುವ ಕುಟುಂಬಗಳು.

ಎಲ್ಲಿವರೆಗೆ ಲಾಭ..?

ಈ ವರ್ಷದ ಮಾರ್ಚ್‌ಗೆ ಮುಗಿದಿದ್ದ ಗೃಹ ಸಾಲ ಸಬ್ಸಿಡಿ ಯೋಜನೆಯನ್ನು ಮುಂದಿನ ವರ್ಷ ಅಂದರೆ 2021ರ ಮಾರ್ಚ್‌ 31ರವರೆಗೂ ವಿಸ್ತರಿಸಿದ್ದಾರೆ.

ಸಬ್ಸಿಡಿ ಎಷ್ಟು ಸಿಗಲಿದೆ..?

ಕುಟುಂಬವೊಂದರ ಆದಾಯ, ಮನೆಯ ಕಾರ್ಪೆಟ್‌ ಏರಿಯಾ (ಅಂದರೆ ಮನೆಯೊಳಗಿನ ಏರಿಯಾ – ಗೋಡೆಗಳನ್ನು ಬಿಟ್ಟು) ಆಧಾರದಲ್ಲಿ ಗೃಹ ಸಾಲ ಸಬ್ಸಿಡಿ ಸಿಗುತ್ತದೆ.

ಕೇಂದ್ರ ಸರ್ಕಾರದ ಮಾಹಿತಿಯ ಪ್ರಕಾರವೇ:

1) 3 ಲಕ್ಷ ರೂಪಾಯಿವರೆಗೆ ವಾರ್ಷಿಕ ಆದಾಯ ಹೊಂದಿರುವ ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬ ಮತ್ತು ವಾರ್ಷಿಕ 3-6 ಲಕ್ಷ ರೂಪಾಯಿ ಆದಾಯ ಇರುವ ಕುಟುಂಬಕ್ಕೆ ಸಿಗುವ ಗೃಹ ಸಾಲದ ಮೇಲಿನ ಸಬ್ಸಿಡಿ ಮೊತ್ತ:

 • ಗೃಹ ಸಾಲದ ಮೇಲಿನ ಬಡ್ಡಿ ಸಹಾಯಧನ ಶೇಕಡಾ 6.5%
 • ಸಾಲದ ಗರಿಷ್ಠ ಅವಧಿ – 20 ವರ್ಷ
 • ಗರಿಷ್ಠ ಗೃಹ ಸಾಲದ ಮೊತ್ತ – 6,00,000/-
 • ಸಾಲದ ಮೇಲಿನ ಬಡ್ಡಿ ಸಬ್ಸಿಡಿಯಿಂದ ಆಗಲಿರುವ ಉಳಿತಾಯ – 2,67,280/
 • ಮಾಸಿಕವಾಗಿ ಕುಟುಂಬವೊಂದು ಸಾಲದ ಕಂತಿನಲ್ಲಿ ಮಾಡಬಹುದಾದ ಉಳಿತಾಯ – 2,500/

ಆದರೆ ವಾರ್ಷಿಕ 3-6 ಲಕ್ಷ ರೂಪಾಯಿ ಆದಾಯ ಇರುವ ಕುಟುಂಬಕ್ಕೆ ಮನೆಯ ಕಾರ್ಪೆಟ್‌ ಏರಿಯಾದ ಸುತ್ತಳತೆ 60 ಚದರ ಮೀಟರ್‌.

2) 6 ರಿಂದ 12 ಲಕ್ಷ ರೂಪಾಯಿವರೆಗೆ ಆದಾಯ ಇರುವ ಕುಟುಂಬಗಳಿಗೆ ಸಿಗುವ ಗೃಹ ಸಾಲದ ಮೇಲಿನ ಸಬ್ಸಿಡಿ ಮೊತ್ತ:

 • ಗೃಹ ಸಾಲದ ಮೇಲಿನ ಬಡ್ಡಿ ಸಹಾಯಧನ ಶೇಕಡಾ 4.0%
 • ಸಾಲದ ಗರಿಷ್ಠ ಅವಧಿ – 20 ವರ್ಷ
 • ಗರಿಷ್ಠ ಗೃಹ ಸಾಲದ ಮೊತ್ತ – 9,00,000/
 • ಸಾಲದ ಮೇಲಿನ ಬಡ್ಡಿ ಸಬ್ಸಿಡಿಯಿಂದ ಆಗಲಿರುವ ಉಳಿತಾಯ – 2,35,068/-
 • ಮಾಸಿಕವಾಗಿ ಕುಟುಂಬವೊಂದು ಸಾಲದ ಕಂತಿನಲ್ಲಿ ಮಾಡಬಹುದಾದ ಉಳಿತಾಯ – 2,500/

3) 12 ರಿಂದ 18 ಲಕ್ಷ ರೂಪಾಯಿವರೆಗೆ ಆದಾಯ ಇರುವ ಕುಟುಂಬಗಳಿಗೆ ಸಿಗುವ ಗೃಹ ಸಾಲದ ಮೇಲಿನ ಸಬ್ಸಿಡಿ ಮೊತ್ತ:

 • ಗೃಹ ಸಾಲದ ಮೇಲಿನ ಬಡ್ಡಿ ಸಹಾಯಧನ ಶೇಕಡಾ 3.0%
 • ಸಾಲದ ಗರಿಷ್ಠ ಅವಧಿ – 20 ವರ್ಷ
 • ಗರಿಷ್ಠ ಗೃಹ ಸಾಲದ ಮೊತ್ತ – 12,00,000/-
 • ಸಾಲದ ಮೇಲಿನ ಬಡ್ಡಿ ಸಬ್ಸಿಡಿಯಿಂದ ಆಗಲಿರುವ ಉಳಿತಾಯ – 2,35,068/-
 • ಮಾಸಿಕವಾಗಿ ಕುಟುಂಬವೊಂದು ಸಾಲದ ಕಂತಿನಲ್ಲಿ ಮಾಡಬಹುದಾದ ಉಳಿತಾಯ – 2,500/

ಇವತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಘೋಷಿಸಿರುವ ಪ್ರಕಾರ 6ರಿಂದ 12 ಲಕ್ಷ ರೂಪಾಯಿವರೆಗಿನ ಆದಾಯವುಳ್ಳವರಿಗೆ ಗೃಹ ಸಾಲದ ಮೇಲೆ ಸಬ್ಸಿಡಿ ಸಿಗಲಿದೆ.

ಆದರೆ:

ಆದರೆ ಗೃಹ ಸಾಲದ ಮೇಲಿನ ಸಬ್ಸಿಡಿ ಲಾಭ ಸಿಗುವುದು ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿಯಲ್ಲಿ ಮನೆ ಕಟ್ಟುವವರಿಗೆ ಮಾತ್ರ. ಅದೂ ನಗರಪ್ರದೇಶಗಳಲ್ಲಿ. ಉಳಿದ ಗೃಹ ಸಾಲಗಳಿಗೆ ಇದರ ಲಾಭ ಸಿಗಲ್ಲ.

LEAVE A REPLY

Please enter your comment!
Please enter your name here