ಗೂಗಲ್‌ ಪ್ಲೇ ಸ್ಟೋರ್‌ನಿಂದ ಔಟಾದ ʼರಿಮೂವ್ ಚೀನಾ ಆ್ಯಪ್ʼ…!

ಮೊಬೈಲ್‌ನಲ್ಲಿ  ಇನ್‌ಸ್ಟಾಲ್ ಆಗಿರುವ ಚೀನಾ ಆ್ಯಪ್ ಗಳನ್ನು ಡಿಲೀಟ್ ಮಾಡಲೆಂದೇ ವಿನ್ಯಾಸಗೊಂಡು ಭಾರೀ ಜನಪ್ರಿಯಗಳಿಸಿದ್ದ ʼರಿಮೂವ್ ಚೀನಾ ಆ್ಯಪ್ʼ ನ್ನು ಗೂಗಲ್ ತನ್ನ ಪ್ಲೇಸ್ಟೋರ್ ನಿಂದ ತೆಗೆದುಹಾಕಿದೆ.

ಬಳಕೆದಾರರನ್ನು ತಪ್ಪುದಾರಿಗೆಳೆಯುವುದು ಹಾಗೂ ಇತರ ಆ್ಯಪ್ ಗಳನ್ನು ನಿಷ್ಕ್ರಿಯಗೊಳಿಸುವಂತೆ ಮಾಡುವುದರ ಮೂಲಕ ಗೂಗಲ್‌ನ ನೀತಿ ನಿಯಮಗಳ ಉಲ್ಲಂಘನೆ ಮಾಡಿದೆ. ಈ ಕಾರಣದಿಂದ ʼರಿಮೂವ್ ಚೀನಾ ಆ್ಯಪ್ʼನ್ನು ತೆಗೆದುಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಆ್ಯಪ್ ಅನ್ನು ಅಭಿವೃದ್ಧಿಪಡಿಸಿರುವ ಕಂಪನಿ ‌ʼಒನ್‌ ಟಚ್ ಆ್ಯಪ್ ಲ್ಯಾಬ್ಸ್‌ʼ ಈ ಕುರಿತು ಪ್ರತಿಕ್ರಿಯೆ ನೀಡಿಲ್ಲ, ಆದರೆ ತನ್ನನ್ನು ಬೆಂಬಲಿಸಿದ ಗ್ರಾಹಕರಿಗೆ ಧನ್ಯವಾದ ತಿಳಿದಿರುವ ಕಂಪನಿ ಪ್ಲೇಸ್ಟೋರ್‌ನಿಂದ ತೆಗೆದು ಹಾಕಿರುವುದನ್ನು ತನ್ನ ವೆಬ್‌ಸೈಟ್‌ನಲ್ಲಿ ಖಚಿತಪಡಿಸಿದೆ.

ಜೈಪುರ ಮೂಲಕ ಒನ್ ಟಚ್ ಆ್ಯಪ್ ಅಭಿವೃದ್ಧಿಪಡಿಸಿದ್ದ ʼರಿಮೂವ್ ಚೀನಾ ಆ್ಯಪ್’ನ್ನು 50 ಲಕ್ಷ ಜನರು ಡೌನ್ ಲೋಡ್ ಮಾಡಿಕೊಂಡಿದ್ದರು. ‘ಟಿಕ್ ಟಾಕ್’ನ ಸ್ವದೇಶಿ ಆವೃತ್ತಿ ಎಂದು ಬಿಂಬಿತವಾಗಿದ್ದ ‘ಮಿತ್ರೋಂ ಆ್ಯಪ್’ನ್ನು ಪ್ಲೇಸ್ಟೋರ್’ನಿಂದ ಗೂಗಲ್ ಈಗಾಗಲೇ ತೆಗೆದಿದೆ.

LEAVE A REPLY

Please enter your comment!
Please enter your name here