ಗಾಳಿ ಸುದ್ದಿಗಳಿಗೆ ತೆರೆ ಎಳೆದ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸತತ 23 ದಿನಗಳ ಬಳಿಕ ಜನರ ಕಣ್ಣೆದುರು ಬಂದು ಅವರ ಕುರಿತು ಎದ್ದಿದ್ದ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

 ಫರ್ಟಿಲೈಜರ್ ಕಾರ್ಖಾನೆಯೊಂದರ ಸಮಾರಂಭದಲ್ಲಿ ಅವರು ಕಾಣಿಸಿಕೊಂಡಿದ್ದಾರೆ ಎಂದು ಕೆಸಿಎನ್‌ಎ ವರದಿ ಮಾಡಿದೆ.

ರಾಜಧಾನಿ ಪ್ಯೋಂಗ್ಯಾಂಗ್ ಸಮೀಪವಿರುವ ಸಾನ್‌ಚೂನ್‌ನಲ್ಲಿರುವ ಕಾರ್ಯಕ್ರಮದಲ್ಲಿ ಕಿಮ್ ಶುಕ್ರವಾರ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಅವರ ಸಹೋದರಿ ಕಿಮ್‌ ಯೋ ಜಾಂಗ್‌ ಸೇರಿದಂತೆ ಸರ್ಕಾರದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಪಿಟ್ಸ್ ಬರ್ಗ್ ನಲ್ಲಿ ಏಪ್ರಿಲ್ 11 ರಂದು ನಡೆದಿದ್ದ ಆಡಳಿತಾರೂಢ ಕಾರ್ಮಿಕ ಪಕ್ಷದ ಪೊಲಿಟ್ ಬ್ಯುರೊ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಕಿಮ್ ಕೊನೆಯ ಬಾರಿಗೆ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದ್ದ ಅವರು ಸುಮಾರು 3 ವಾರಗಳ ಕಾಲ ಅವರು ಯಾರ ಕಣ್ಣಿಗೂ ಬಿದ್ದಿರಲಿಲ್ಲ.

ಶಸ್ತ್ರ ಚಿಕಿತ್ಸೆಯ ನಂತರ ಕಿಮ್ ಜಾಂಗ್ ಉನ್ ತೀವ್ರ ಅಪಾಯದ ಸ್ಥಿತಿಯಲ್ಲಿದ್ದಾರೆ ಎಂಬುದು ಗುಪ್ತಚರ ಮಾಹಿತಿಯಿಂದ ತಿಳಿದುಬಂದ ವಿಚಾರವಾಗಿತ್ತು. ಸಿಎನ್ ಎನ್ ಕಳೆದ ವಾರ ವರದಿ ಭಿತ್ತರಿಸಿದ ಬಳಿಕ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡವು. ಕಿಮ್‌ ಅವರು ಆರೋಗ್ಯವಾಗಿದ್ದಾರೆಂದು ಉತ್ತರ ಕೊರಿಯಾ ಸರ್ಕಾರ ಹೇಳಿತ್ತು.

LEAVE A REPLY

Please enter your comment!
Please enter your name here