ಗಾಂಧಿ ಹುತಾತ್ಮನಾದ ದಿನದಂದೇ ದೆಹಲಿಯಲ್ಲಿ ಗುಂಡಿನ ದಾಳಿ – ಯಾರು ಈ ರಾಮ್‌ಭಕ್ತ್‌ ಶರ್ಮಾ..?

ರಾಮ್‌ಭಕ್ತ್‌ ಗೋಪಾಲ್‌ ಶರ್ಮಾ. ಉತ್ತರಪ್ರದೇಶ ಮೂಲದ ಈತ ಜಾಮಿಯಾ ವಿವಿ ಎದುರು ನಡೆಯುತ್ತಿರುವ ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ್ದಾನೆ. ಅಂದಹಾಗೆ ಈತನ ಕೃತ್ಯ ಪೂರ್ವಯೋಜಿತ ಕೃತ್ಯ ಎನ್ನುವುದು ಮೇಲ್ನೋಟಕ್ಕೆ ಸಾಬೀತಾಗುತ್ತದೆ. ಈತನ ಫೇಸ್‌ಬುಕ್‌ ಅಕೌಂಟ್‌ನ್ನು ಫೇಸ್‌ಬುಕ್‌ ಸಂಸ್ಥೆಯೇ ಬ್ಲಾಕ್‌ ಮಾಡಿದೆ.

ಶೂಟೌಟ್‌ನ ಲೈವ್‌ ವೀಡಿಯೋ ಮಾಡಿದ್ದ ರಾಮ್‌ಭಕ್ತ್‌ ಗೋಪಾಲ್‌ ಶರ್ಮಾ ಅದಕ್ಕೂ ಮೊದಲು ತನ್ನ ಫೇಸ್‌ಬುಕ್‌ ಖಾತೆಯಲ್ಲಿ ಕೆಲವೊಂದಿಷ್ಟು ಪೋಸ್ಟ್‌ಗಳನ್ನು ಹಾಕಿಕೊಂಡಿದ್ದ. ಆ ಪೋಸ್ಟ್‌ಗಳ ವಿವರ ಇಲ್ಲಿದೆ.

ನನ್ನ ಹೆಸರು ರಾಮ್‌ಭಕ್ತ್‌ ಗೋಪಾಲ್‌ ಶರ್ಮಾ. ಬಯೋದಲ್ಲಿ ಸದ್ಯಕ್ಕೆ ಇಷ್ಟು ಸಾಕು. ಬಾಕಿದ್ದನ್ನು ಸರಿಯಾದ ಸಮಯದಲ್ಲಿ ಹೇಳುವೇ, ಜೈಶ್ರೀರಾಮ್‌ ಎಂದು ಪ್ರೊಫೈಲ್‌ ಸ್ಟೇಟಸ್‌ನಲ್ಲಿ ಬರೆದುಕೊಂಡಿದ್ದಾನೆ.

ಈತನ ಪ್ರೊಫೈಲ್‌ ಫೋಟೋದಲ್ಲಿ ಕತ್ತಿಗೆ ಮುತ್ತಿಡುತ್ತಿರುವ ಫೋಟೋ ಇದ್ದರೆ, ದಿನೇಶ್‌ ಶರ್ಮಾ ಜೊತೆಗೂ ಫೋಟೋ ತೆಗೆಸಿಕೊಂಡಿದ್ದಾನೆ. ಈ ದಿನೇಶ್‌ ಶರ್ಮಾನ ವಿರುದ್ಧ ಧರ್ಮದ ಬಗ್ಗೆ ಮೆಮೆ ಮಾಡಿದ್ದ ವ್ಯಕ್ತಿಗೆ ಥಳಿಸಿದ ಪ್ರಕರಣವಿದ್ದು, ದಿನೇಶ್‌ ಬಿಜೆಪಿ ಸಂಸದ ಗಿರಿರಾಜ್‌ಸಿಂಗ್‌ ಜೊತೆಗಿರುವ ಫೋಟೋ ತೆಗೆಸಿಕೊಂಡಿದ್ದಾನೆ.

ಶಾಹೀನ್‌ ಭಾಗ್‌ ಖೇಲ್‌ ಖತಂ ಎಂದು ಶೂಟೌಟ್‌ಗೂ ಕೆಲವೇ ಹೊತ್ತು ಬರೆದುಕೊಂಡಿದ್ದಾನೆ. ಶಾಹೀನ್‌ ಭಾಗ್‌ನಲ್ಲಿ ಪೌರತ್ವ ಕಾಯ್ದೆಯನ್ನು ವಿರೋಧಿಸಿ ಹಲವು ದಿನಗಳಿಂದ ನಿರಂತರ ಪ್ರತಿಭಟನೆ ನಡೆಯುತ್ತಿದ್ದು, ದೆಹಲಿಯಲ್ಲಿ ಬಿಜೆಪಿಗೆ ಗೃಹ ಸಚಿವ ಅಮಿತ್‌ ಶಾರಿಂದ ಹಿಡಿದು ಅದೇ ಪ್ರಮುಖ ಚುನಾವಣಾ ವಿಷ್ಯವಾಗಿದೆ.

ಇಲ್ಲಿ ಯಾವ ಹಿಂದೂ ಮಾಧ್ಯಮವೂ ಇಲ್ಲ ಎಂದು ಬರೆದುಕೊಂಡಿದ್ದಾನೆ. ನಾನು ಸತ್ತರೆ ನನ್ನ ಅಂತಿಮಯಾತ್ರೆಯನ್ನು ಮಾಡಿ, ಜೈಶ್ರೀರಾಮ್‌ ಘೋಷಣೆಯೊಂದಿಗೆ ಮೆರವಣಿಗೆ ಮಾಡಿ ಎಂದು ಸ್ಟೇಟಸ್‌ ಹಾಕಿದ್ದಾನೆ.

ಚಂದನ್‌ ಭಾಯ್‌ ಈ ಪ್ರತೀಕಾರ ನಿಮಗೋಸ್ಕರ ಎನ್ನುವ ಪೋಸ್ಟ್‌ಗೂ ಮೊದಲು ನನಗೆ ಫೋನ್‌ ಮಾಡ್ಬೇಡಿ ಅಂತನೂ ಬರೆದುಕೊಂಡಿದ್ದಾನೆ. ನಾನು ಇಲ್ಲಿ ಒಬ್ಬಂಟಿ ಹಿಂದು ಎನ್ನುವ ಬರಹವನ್ನು ಪೋಸ್ಟ್‌ ಮಾಡುವುದಕ್ಕೂ ಮೊದಲು ಜಾಮಿಯಾ ವಿವಿ ಬಳಿ ನಡೆಯುತ್ತಿದ್ದ ಪ್ರತಿಭಟನೆಯ ವೀಡಿಯೋವನ್ನು ಲೈವ್‌ ಮಾಡಿದ್ದಾನೆ.

ನನ್ನ ಮನೆಯ ಬಗ್ಗೆ ಕಾಳಜಿವಹಿಸಿ, ಆಜಾದಿ ನಾನು ಬರುತ್ತಿದ್ದೇನೆ ಎಂದೂ ಬರೆದುಕೊಂಡಿದ್ದಾನೆ.

 

LEAVE A REPLY

Please enter your comment!
Please enter your name here