ಗಣರಾಜ್ಯದ ಪರೇಡ್‌ ಗೆ ಈ ರಾಜ್ಯದ ಸ್ಥಬ್ದಚಿತ್ರ ಇಲ್ವಂತೆ..!

71 ನೇ ಗಣರಾಜ್ಯೋತ್ಸವ ಪರೇಡ್ ನಲ್ಲಿ ಪಾಲ್ಗೊಳ್ಳಲು ಸ್ಥಬ್ದಚಿತ್ರಗಳನ್ನು ಅಂತಿಮಗೊಳಿಸಿರುವ ಪಟ್ಟಿಯಲ್ಲಿ ಪಶ್ಚಿಮ ಬಂಗಾಳದ ಹೆಸರಿಲ್ಲ ಎಂದು ತಿಳಿದುಬಂದಿದೆ. ಇದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಕೇಂದ್ರ ಸರ್ಕಾರದ ನಡುವಿನ ಕಿತ್ತಾಟ ಹೆಚ್ಚುವಂತೆ ಮಾಡಿದೆ.

ಈ ಬಾರಿಯ ಪರೇಡ್ ಗೆ ಒಟ್ಟು 56 ಸ್ಥಬ್ದಚಿತ್ರಗಳು ಸಲ್ಲಿಕೆಯಾಗಿದ್ದು , ಅದರಲ್ಲಿ ಅಂತಿಮವಾಗಿ 16 ರಾಜ್ಯ / ಕೇಂದ್ರಾಡಳಿತ ಪ್ರದೇಶಗಳ ಮತ್ತು 6 ಸಚಿವಾಲಯಗಳ ಸ್ಥಬ್ದಚಿತ್ರಗಳನ್ನು ಆಯ್ಕೆಮಾಡಲಾಗಿದೆ.

ತಜ್ಞರ ಸಮಿತಿಯು ಇದನ್ನು ಎರಡು ಸುತ್ತಿನ ಸಭೆಯಲ್ಲಿ ಪರಿಶೀಲಿಸಿದ ನಂತರ ಪಶ್ಚಿಮ ಬಂಗಾಳ ಸರ್ಕಾರದ ಪ್ರಸ್ತಾವನೆಯನ್ನು ತಿರಸ್ಕರಿಸಲಾಗಿದೆ ಎಂದು ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here