ಖ್ಯಾತ ನಿರ್ದೇಶಕ ಶಂಕರ್ ಅವರಿಗೆ ತೀವ್ರ ಗಾಯ..!

ಅಭಿಜಾತ ಕಲಾವಿದ ಕಮಲ್ ಹಾಸನ್ ನಟನೆಯ ಇಂಡಿಯನ್-2 ಸಿನಿಮಾ ಶೂಟಿಂಗ್ ಸ್ಥಳದಲ್ಲಿ ಭಾರೀ ಅನಾಹುತ ಸಂಭವಿಸಿದೆ. ಬೃಹತ್ ಕ್ರೇನ್ ಬಾಕ್ಸ್ ಕುಸಿದುಬಿದ್ದು ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಖ್ಯಾತ ನಿರ್ದೇಶಕ ಶಂಕರ್ ಸೇರಿದಂತೆ 10 ಮಂದಿಗೆ ತೀವ್ರ ಗಾಯಗಳಾಗಿವೆ. ಶಂಕರ್ ಅವರ ಕಾಲಿಗೆ ತೀವ್ರ ಸ್ವರೂಪದ ಪೆಟ್ಟಾಗಿದೆ.

ನಿರ್ದೇಶಕ ಶಂಕರ್ ಅವರ ಆಪ್ತ ಸಹಾಯಕ ಮಧು, ಇಂಡಿಯನ್-2 ಸಿನಿಮಾದ ಸಹಾಯಕ ನಿರ್ದೇಶಕ ಕೃಷ್ಣ, ಕೆಟರಿಂಗ್ ಡಿಪಾರ್ಟ್‍ಮೆಂಟ್‍ಗೆ ಸೇರಿದ ಚಂದ್ರನ್ ಮೃತಪಟ್ಟಿದ್ದಾರೆ.

 

ಚೆನ್ನೈ ಹೊರವಲಯದಲ್ಲಿರುವ ಇವಿಪಿ ಸ್ಟುಡಿಯೋದಲ್ಲಿ ಭಾರೀ ಕ್ರೇನ್‍ಗಳ ನೆರವಿನಿಂದ ಪ್ರತ್ಯೇಕ ಸೆಟ್ ಹಾಕುವಾಗ ರಾತ್ರಿ 9.30ರ ಸುಮಾರಿಗೆ ಈ ಅನಾಹುತ ಸಂಭವಿಸಿದೆ. 150 ಅಡಿ ಎತ್ತರದ ಕ್ರೇನ್‍ನಿಮದ ಕಾರ್ಮಿಕರು ನಿಂತುಕೊಳ್ಳುವ ಕಬ್ಬಿಣ ಬಾಕ್ಸ್ ದಿಡೀರ್ ಎಂದು ನಿರ್ದೇಶಕರಿದ್ದ ಟೆಂಟ್ ಮೇಲೆ ಕುಸಿದುಬಿದ್ದಿದೆ. ಟೆಂಟ್‍ನಲ್ಲಿ ನಿರ್ದೇಶಕ ಶಂಕರ್ ತನ್ನ ಸಹಾಯಕರೊಂದಿಗೆ ಮಾನಿಟರ್‍ನಲ್ಲಿ ರಷಸ್ ನೋಡುತ್ತಿದ್ದರು. ಇದ್ದರು ಸ್ಥಳದಲ್ಲೇ ಸಾವನ್ನಪ್ಪಿದರೆ, ಒಬ್ಬರು ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ.

ಅನಾಹುತ ಸಂಭವಿಸಿದ ವೇಳೆ ನಟ ಕಮಲ್ ಹಾಸನ್ ಕೂಡ ಸೆಟ್‍ನಲ್ಲೇ ಇದ್ದರು ಎಂದು ತಿಳಿದುಬಂದಿದೆ. ಅವಘಡದ ಬಗ್ಗೆ ಟ್ವಿಟ್ಟರ್‍ನಲ್ಲಿ ಸ್ಪಂದಿಸಿರುವ ನಟ ಕಮಲ್ ಹಾಸನ್, ಸೆಟ್ಸ್ ನಲ್ಲಿ ನಡೆದ ಅನಾಹುತ ಆಘಾತ ಉಂಟು ಮಾಡಿದೆ. ಮೂವರು ಸಹಾಯಕರನ್ನು ಕಳೆದುಕೊಂಡಿದ್ದು ನೋವು ತಂದಿದೆ.ನನ್ನ ನೋವಿಗಿಂತಲೂ ಅವರನ್ನು ಕಳೆದುಕೊಂಡ ಕುಟುಂಬದ ನೋವು ಹೆಚ್ಚಿದೆ. ಸಂತಾಪಗಳು ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here