ಖ್ಯಾತ ನಟ ವಿಜಯ್ ಸೇತುಪತಿ ಮೇಲೆ ಬೆಂಗಳೂರು ಏರ್ಪೋರ್ಟ್ ನಲ್ಲಿ ದಾಳಿ

ಬೆಂಗಳೂರು ಏರ್ಪೋರ್ಟ್ ನಲ್ಲಿ ಕಳೆದ ರಾತ್ರಿ
ಖ್ಯಾತ ನಟ ವಿಜಯ್ ಸೇತುಪತಿ ಮತ್ತು ಆಪ್ತ  ಸಹಾಯಕನ ಮೇಲೆ ಸಹ ನಟನೊಬ್ಬ ದಾಳಿಗೆ ಯತ್ನಿಸಿದ ಘಟನೆ ನಡೆದಿದೆ.

ಬೆಂಗಳೂರಿನ ಇನ್ನೋವೆಟಿವ್ ಫಿಲ್ಮ್ ಸಿಟಿಯಲ್ಲಿ ನಿಗದಿಯಾಗಿದ್ದ ಶೂಟಿಂಗ್  ನಲ್ಲಿ ಪಾಲ್ಗೊಳ್ಳಲು ಚೆನ್ನೈನಿಂದ ವಿಮಾನದಲ್ಲಿ ಬೆಂಗಳೂರಿಗೆ ಬರುವ ವೇಳೆ, ಈ ಘಟನೆ ನಡೆದಿದೆ.

ಮದ್ಯದ  ಅಮಲಿನಲ್ಲಿ ಸಹ  ನಟ ಮಹಾ ಗಾಂಧಿ  ಎಂಬಾತ, ವಿಜಯ್ ಸೇತುಪತಿ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಇದನ್ನು ಕೇಳಿಸಿಕೊಂಡಿದ್ದ ವಿಜಯ್ ಸೇತುಪತಿ ಆಪ್ತ ಸಹಾಯಕ ಬುದ್ಧಿ ಹೇಳಿದ್ದರು. ಇಷ್ಟಕ್ಕೆ ಗರಂ ಆಗಿದ್ದ ಮಹಾ ಗಾಂಧಿ, ಏರ್ಪೋರ್ಟ್ ನಿಂದ  ಹೊರಗೆ  ಬರುವ  ಸಂದರ್ಭದಲ್ಲಿ  ಸೇತುಪತಿ ಮತ್ತು ಅವರ ಆಪ್ತ ಸಹಾಯಕನ ಮೇಲೆ ಹಿಂದಿನಿಂದ ದಾಳಿಗೆ ಯತ್ನಿಸಿದ್ದಾರೆ. ಕೂಡಲೇ  ಇತರರು ಬಿಡಿಸಿದ್ದಾರೆ.

ಘಟನೆಯಿಂದ ವಿಚಾಲಿತರಾಗಿದ್ದ ವಿಜಯ್ ಸೇತುಪತಿ, ಏರ್ಪೋರ್ಟ್ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು  ವಿಚಾರಣೆ ನಡೆಸಿದ  ಸಂದರ್ಭದಲ್ಲಿ, ಅಮಲಿನಲ್ಲಿ  ತಪ್ಪಾಗಿದೆ ಎಂದು ಮಹಾಗಾಂಧಿ  ಕ್ಷಮೆ ಕೇಳಿದ್ದಾರೆ. ನಂತರ  ಈ ಪ್ರಕರಣವನ್ನು ವಿಜಯ್ ಸೇತುಪತಿ ಇಲ್ಲಿಗೆ ಕೈಬಿಟ್ಟಿದ್ದಾರೆ.

LEAVE A REPLY

Please enter your comment!
Please enter your name here