ಖ್ಯಾತ ನಟಿ ಶ್ರೀಯಾ ಬಗ್ಗೆ ಚೀಪ್ ಕಾಮೆಂಟ್.. ಗಂಡನ ರಿಪ್ಲೈ ಹೇಗಿತ್ತು ಗೊತ್ತಾ..?

ದಕ್ಷಿಣ ಭಾರತದ ಖ್ಯಾತ ನಟಿ ಶ್ರೀಯಾ ಶರನ್ ದೇಹಾಕೃತಿ ಬಗ್ಗೆ ನೆಟ್ಟಿಗನೋರ್ವ ಚೀಪ್ ಕಾಮೆಂಟ್ ಮಾಡಿದ್ದಾರೆ. ನಟಿ ಶ್ರೀಯಾ ತನ್ನ ಪತಿ ಆಂಡ್ರ್ಯೂ ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಗಾಗಿ ಲೈವ್ ಬಂದಾಗ, ನೆಟ್ಟಿಗನೋರ್ವ ತುಂಬಾ ಚೀಪಾಗಿ ಕಾಮೆಂಟ್ ಮಾಡಿದ್ದಾನೆ.

ಇದನ್ನು ನಟಿ ಶ್ರೀಯಾ ಸೀರಿಯಸ್ ಆಗಿ ತೆಗೆದುಕೊಂಡಿಲ್ಲ. ಆದರೆ ಪಕ್ಕದಲ್ಲೇ ಇದ್ದ ಶ್ರೀಯಾ ಪತಿ, ನಿಮ್ಮ ಮಾತನ್ನು ನಾನು ಒಪ್ಪುತ್ತೇನೆ. ಆಕೆ ಮೇಲೆ ಇಂತಹ ಕಾಮೆಂಟ್‍ಗಳನ್ನು ಹೆಚ್ಚು ಮಾಡಿ.. ಪ್ಲೀಸ್ ಎಂದು ಫನ್ನಿಯಾಗಿ ತಿರುಗೇಟು ಕೊಟ್ಟಿದ್ದಾರೆ. ಈ ಮಾತನ್ನು ಆಂಡ್ರ್ಯೂ ಹೇಳುತ್ತಲೇ ನಟಿ ಶ್ರೀಯಾ ನಗುತ್ತಾ ಒಂದೇಟು ಕೊಟ್ಟಿದ್ದಾರೆ. ಈ ವಿಡಿಯೋ ಸದ್ಯಕ್ಕೆ ಸಿಕ್ಕಾಪಟ್ಟೆ ವೈರಲ್ ಆಗಿದೆ.

ರಷ್ಯಾದ ಕ್ರೀಡಾಪಟುವನ್ನು ಮದುವೆ ಆಗಿರುವ ನಟಿ ಶ್ರೀಯಾ, ಸದ್ಯ ಕೊರೋನಾ ಪೀಡಿತ ದೇಶ ಸ್ಪೇನ್‍ನಲ್ಲಿದ್ದಾರೆ. ಇತ್ತೀಚಿಗಷ್ಟೇ ಶ್ರೀಯಾ ಪತಿಗೆ ಕೊರೋನಾ ಲಕ್ಷಣಗಳು ಕಂಡುಬಂದಿದ್ದವು.

LEAVE A REPLY

Please enter your comment!
Please enter your name here