ಪಡ್ಡೆಗಳ ಮನಸ್ಸಲ್ಲಿ ಈಗಲೂ ಕಿಚ್ಚು ಹಚ್ಚುವ ಬಾಲಿವುಡ್ನ ಖ್ಯಾತ ನಟಿ ಕತ್ರಿನಾ ಕೈಫ್ ಮದುವೆ ಆಗಿದೆ.
ಬಾಲಿವುಡ್ನ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್, ಜಯಾ ಬಚ್ಚನ್, ಕನ್ನಡದ ಖ್ಯಾತ ನಟ ಶಿವರಾಜ್ ಕುಮಾರ್, ತೆಲುಗಿನ ಖ್ಯಾತ ನಟ ನಾಗಾರ್ಜು, ಮತ್ತು ಕಾಲಿವುಡ್ನ ಹಿರಿಯ ನಟ ಪ್ರಭು ಈ ಮದುವೆಯಲ್ಲಿ ಪಾಲ್ಗೊಂಡಿದ್ದರು.
ಸೀನ್ ಇಷ್ಟೊತ್ತಿಗೆ ನಿಮಗೆ ಅರ್ಥ ಆಗಿದೆ ಅಂದ್ಕೋತಿವಿ. ಇದು ರೀಲ್ ಮದುವೆ ರೀ.. ಆಭರಣ ಮಳಿಗೆಯ ಜಾಹೀರಾತಿನ ದೃಶ್ಯಕ್ಕೆಂದು ಕತ್ರಿನಾ ಕೈಫ್ ವಧು ಅವತಾರ ಎತ್ತಿದ್ಲು. ಅಮಿತಾಬ್ ದಂಪತಿ, ಕತ್ರಿನಾ ತಂದೆ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡರು.
ಆಭರಣ ಕಂಪನಿಯ ಬ್ರ್ಯಾಂಡ್ ಅಂಬಾಸಿಡರ್ಗಳಾದ ಸೌತ್ ಸಿನಿ ಇಂಡಸ್ಟ್ರಿಯ ಮೂವರು ಖ್ಯಾತ ನಟರು ಈ ರೀಲ್ ಮದುವೆಯಲ್ಲಿ ಅತಿಥಿಗಳಾಗಿ ಕಾಣಿಸಿಕೊಂಡರು.
ಈ ದೃಶ್ಯಗಳನ್ನು ಅಮಿತಾಬ್ ಬಚ್ಚನ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮೂವರು ಲೆಜೆಂಡರಿ ನಟರ ಕುಡಿಗಳ ಜೊತೆ ಸೇರಿದ್ದು ಖುಷಿ ತಂದಿದೆ ಎಂದು ಹೇಳಿಕೊಂಡಿದ್ದಾರೆ.
ವರನಟ ರಾಜಕುಮಾರ್, ನಟ ಸಾಮ್ರಾಟ್ ಅಕ್ಕಿನೇನಿ ನಾಗಾರ್ಜುನ ಮತ್ತು ಶಿವಾಜಿ ಗಣೇಶನ್ರನ್ನು ಬಿಗ್ಬಿ ಸ್ಮರಿಸಿದ್ದಾರೆ.