ಕ್ವಾರಂಟೈನ್‌ ನಿಯಮ ಉಲ್ಲಂಘಿಸಿದ ಕೇಂದ್ರ ಸಚಿವ ಸದಾನಂದಗೌಡ – ಮಂತ್ರಿಗಳನ್ನ ಕ್ವಾರಂಟೈನ್‌ ಮಾಡಬಾರದಾ..?

ಇವತ್ತಿನಿಂದ ದೇಶಾದ್ಯಂತ ವಿಮಾನ ಹಾರಾಟ ಆರಂಭವಾಗಿದ್ದು, ದೆಹಲಿಯಿಂದ ಬೆಂಗಳೂರಿಗೂ ವಿಮಾನಗಳು ಬಂದಿಳಿಯುತ್ತಿವೆ. ಹೀಗೆ ಬಂದಿಳಿದವರು ಕಡ್ಡಾಯವಾಗಿ ಕ್ವಾರಂಟೈನ್‌ಗೆ ಒಳಪಡಬೇಕು.

ಆದರೆ ದೆಹಲಿಯಿಂದ ಬಂದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದಗೌಡ ಕ್ವಾರಂಟೈನ್‌ ನಿಯಮವನ್ನೇ ಉಲ್ಲಂಘಿಸಿದ್ದಾರೆ.

ಪ್ರಾಕ್ಟಿಕಲಿ ಅಗತ್ಯ ಸೇವೆಯಲ್ಲಿ ಬರೋರಿಗೆ ಇಡೀ ದೇಶದಲ್ಲಿ ಹೋಗಲು ಅವಕಾಶ ಇದೆ. ನಾನು ಎರಡು ಇಲಾಖೆ ಜವಾಬ್ದಾರಿ ಹೊಂದಿದ್ದೇನೆ. ಫಾರ್ಮಸಿ ಮತ್ತು ಗೊಬ್ಬರ ಇಲಾಖೆ ನಿರ್ವಹಿಸಲು ನಾನು ಪ್ರವಾಸ ಮಾಡಬೇಕಾಗುತ್ತದೆ. ದಿನನಿತ್ಯ ನಾವು ನಮ್ಮ ಕಚೇರಿಗೆ ಹಲವರನ್ನು ಕರೆದು ಚರ್ಚೆ ಮಾಡಬೇಕಾಗುತ್ತದೆ. ಕೇರಳದ ಜವಾಬ್ದಾರಿ ಕೂಡಾ ನನಗೆ ಇದೆ. ಔಷಧಿ ಪೊರೈಕೆ ಸಲುವಾಗಿ ನಾನು ಕೆಲಸ ನಿರ್ವಹಿಸುತ್ತಿದ್ದೇನೆ. ನಾನು ಕಳೆದ 60 ದಿನಗಳಿಂದ ದೆಹಲಿಯಲ್ಲೇ ಇದ್ದೆ. ನಾನು ಇಂದು ಕರ್ನಾಟಕದಲ್ಲಿ ಸಭೆ ನಡೆಸಲು ಬಂದಿದ್ದೇನೆ. ಯಾವುದೇ ಆತಂಕ ಇಟ್ಟುಕೊಂಡು ನಾನು ರಾಜ್ಯಕ್ಕೆ ಬಂದಿಲ್ಲ. ರಾಜ್ಯಕ್ಕೆ ಬರುವ ಮುನ್ನ ನೋಡಲ್‌ ಅಧಿಕಾರಿಯ ಜೊತೆ ಮಾತಾಡಿಕೊಂಡು ಬಂದಿದ್ದೇನೆ. ಸಭೆ ನಡೆಸುವ ಉದ್ದೇಶದಿಂದ ನಾನು ಬಂದಿದ್ದೇನೆ, ನಿಯಮಗಳನ್ನು ಉಲ್ಲಂಘನೆ ಮಾಡಿಲ್ಲ ಎಂದು ಕೇಂದ್ರ ಸಚಿವ ಸದಾನಂದಗೌಡ ಹೇಳಿದ್ದಾರೆ.

ಆದರೆ ವಿಮಾನ ಮತ್ತು ರೈಲು ಮತ್ತು ರಸ್ತೆ ಮಾರ್ಗದ ಮೂಲಕ ರಾಜ್ಯಗಳ ನಡುವೆ ಓಡಾಟಕ್ಕೆ ಅನುಮತಿ ಕೊಟ್ಟಿರುವ ಕೇಂದ್ರ ಸರ್ಕಾರ ಹೊರರಾಜ್ಯಗಳಿಂದ ಬಂದಿರುವ ಜನರನ್ನು ಎಷ್ಟು ದಿನ ಕ್ವಾರಂಟೈನ್‌ಗೆ ಒಳಪಡಿಸಬೇಕು ಎಂಬ ನಿಯಮಗಳನ್ನು ರೂಪಿಸುವ ಅಧಿಕಾರವನ್ನು ರಾಜ್ಯಗಳಿಗೆ ಬಿಟ್ಟು ಕೊಟ್ಟಿದೆ.

ಈ ಹಿನ್ನೆಲೆ ಕರ್ನಾಟಕ ಸರ್ಕಾರವೇ ಹೊರರಾಜ್ಯದಿಂದ ಬಂದವರಿಗಾಗಿ ಕ್ವಾರಂಟೈನ್‌ ನಿಯಮಗಳನ್ನು ರೂಪಿಸಿದೆ. ಆ ನಿಯಮಗಳು ಹೀಗಿವೆ.

  1. ಅತೀ ಹೆಚ್ಚು ಕೇಸ್‌ ಕಂಡು ಬಂದಿರುವ ಮಹಾರಾಷ್ಟ್ರ, ಗುಜರಾತ್‌, ದೆಹಲಿ, ತಮಿಳುನಾಡು, ರಾಜಸ್ಥಾನ ಮಧ್ಯಪ್ರದೇಶದಿಂದ ಬರುವ ಪ್ರಯಾಣಿಕರು ಕಡ್ಡಾಯವಾಗಿ 7 ದಿನಗಳ ಸರ್ಕಾರಿ ಕ್ವಾರಂಟೈನ್‌ಗೆ ಒಳಪಡುವುದು ಅನಿವಾರ್ಯ. ಸರ್ಕಾರಿ ಕ್ವಾರಂಟೈನ್‌ ಬಳಿಕ ಮತ್ತೆ 7 ದಿನಗಳ ಹೋಂ ಕ್ವಾರಂಟೈನ್‌ಗೂ ಒಳಪಡಬೇಕು. ಸರ್ಕಾರಿ ಕ್ವಾರಂಟೈನ್‌ನ ವೆಚ್ಚವನ್ನು ಬರುವವರೇ ಭರಿಸಬೇಕು.
  2. ಕಡಿಮೆ ಕೊರೋನಾ ಕೇಸ್‌ ಇರುವ ರಾಜ್ಯಗಳಿಂದ ಬರುವವರಿಗೆ 14 ದಿನಗಳ ಹೋಂ ಕ್ವಾರಂಟೈನ್‌ ಕಡ್ಡಾಯ.
  3. ವೈದ್ಯಕೀಯ ವೃತಿಪರರು, ನರ್ಸ್‌ಗಳು, ಅರೆ ವೈದ್ಯಕೀಯ ಸಿಬ್ಬಂದಿ ಮತ್ತು ಅಂಬ್ಯುಲೆನ್ಸ್‌ ಸಿಬ್ಬಂದಿಗೂ 14 ದಿನಗಳ ಹೋಂ ಕ್ವಾರಂಟೈನ್‌ ಕಡ್ಡಾಯಗೊಳಿಸಿದೆ.

LEAVE A REPLY

Please enter your comment!
Please enter your name here