ಕ್ರಿಕೆಟ್‍ನಲ್ಲಿಯೂ ಹಿಂದಿ ಹೇರಿಕೆ ಯತ್ನ.. ಕನ್ನಡಿಗರ ತೀವ್ರ ವಿರೋಧ

ದೇಶಾದ್ಯಂತ ಹಿಂದಿ ಹೇರಿಕೆಗೆ ಪ್ರಯತ್ನಗಳು ನಡೆಯುತ್ತಲೇ ಇವೆ. ಕರ್ನಾಟದಲ್ಲಿಯೂ ಹಿಂದಿ ಭಾಷೆ ಹೇರಿಕೆಗೆ ಪ್ರಯತ್ನ ನಡೆದಿತ್ತು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾದ ಕಾರಣ, ಸದ್ಯಕ್ಕೆ ಹಿಂದಿ ಹೇರಿಕೆ ನಿಲ್ಲಿಸಲಾಗಿದೆ.

ಮೊನ್ನೆಯಷ್ಟೇ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಕನ್ನಡದ ಪದಗಳು ಕೇಳಿಬಂದು ಕನ್ನಡಿಗರ ಮನಸ್ಸುಗಳು ಹಿರಿಹಿರಿ ಹಿಗ್ಗಿದ್ದವು. ಆದರೆ, ಈ ಖುಷಿಯನ್ನು ರಣಜಿ ಪಂದ್ಯದ ವೇಳೆ ಕಿತ್ತುಕೊಳ್ಳಲು ನೋಡಲಾಗಿದೆ. ಕ್ರಿಕೆಟ್‍ನಲ್ಲಿ ಹಿಂದಿ ಹೇರಿಕೆ ಪ್ರಯತ್ನಗಳು ನಡೆಯುತ್ತಿದೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕರ್ನಾಟಕ, ಬರೋಡಾ ಪಂದ್ಯದ ವೇಳೆ ವೀಕ್ಷಕ ವಿವರಣೆಗಾರರು ಹಿಂದಿಗೆ ಜೈ ಎಂದಿದ್ದಾರೆ. ಅಷ್ಟೇ ಅಲ್ಲ, ಪ್ರತಿಯೊಬ್ಬ ಭಾರತೀಯನೂ ಹಿಂದಿ ಕಲಿಯಬೇಕು. ಹಿಂದಿ ನಮ್ಮ ಮಾತೃಭಾಷೆ. ಇದಕ್ಕಿಂತ ದೊಡ್ಡ ಭಾಷೆ ಮತ್ತೊಂದಿಲ್ಲ ಎಂದಿದ್ದಾರೆ.

ಇದಕ್ಕೆ ಸಮ್ಮತಿ ಸೂಚಿಸುತ್ತಾ ಪ್ರತಿಕ್ರಿಯೆ ನೀಡಿದ ಮತ್ತೊಬ್ಬ ವೀಕ್ಷಕ ವಿವರಣೆಕಾರ, ಹೌದೌದು, ಕೆಲ ಕ್ರಿಕೆಟಿಗರು ಇನ್ನೂ ಹಿಂದಿಯಲ್ಲಿ ಮಾತನಾಡಬೇಕಾ ಎಂದು ಸಿಟ್ಟಿನಿಂದ ಮಾತನಾಡೋದನ್ನು ನೋಡಿದ್ದೇನೆ. ನೀವು ಭಾರತದಲ್ಲಿ ವಾಸ ಇದ್ದೀರಿ ಎಂದ ಮೇಲೆ ಹಿಂದಿಯನ್ನು ಖಂಡಿತ ಮಾತನಾಡಲೇಬೇಕು ಎಂದಿದ್ದಾರೆ.

ಈ ಸಂಭಾಷಣೆಯ ವೀಡಿಯೋ ಈಗ ವೈರಲ್ ಆಗಿದ್ದು, ಕನ್ನಡಿಗರಿಂದ ವ್ಯಾಪಕ ಆಕ್ರೋಶಕ್ಕೆ ಗುರಿ ಆಗಿದೆ. ನೀವೇನು ವೀಕ್ಷಕ ವಿವರಣೆ ಕೊಡ್ತಿದ್ದೀರೋ.? ಅಥವಾ ಹಿಂದಿ ಪ್ರಚಾರ ಮಾಡುತ್ತಿದ್ದಿರೋ..?

ವೀಕ್ಷಕ ವಿವರಣೆಗಾರರು ಮಾನಸಿಕ ಸ್ಥಿಮಿತತೆ ಕಳೆದುಕೊಂಡಂತೆ ಕಾಣುತ್ತಿದ್ದಾರೆ. ಪ್ರತಿಯೊಬ್ಬ ಭಾರತೀಯನು ಹಿಂದಿ ಕಲಿಯಲೇಬೇಕಾದ ಅನಿವಾರ್ಯತೆ ಏನು ಇಲ್ಲ.

ಹಿಂದಿ ರಾಷ್ಟ್ರಭಾಷೆಯೇ ಅಲ್ಲ.. ನಾನು ಕನ್ನಡಿಗ.. ನನ್ನ ಮಾತೃಭಾಷೆ ಕನ್ನಡ.. ನಾನು ಹಿಂದಿ ಕಲಿಯಲ್ಲ.. ಹೀಗೆ ಹಲವು ರೀತಿಯಲ್ಲಿ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

LEAVE A REPLY

Please enter your comment!
Please enter your name here