೨೬ ವರ್ಷದ ಟೀಂ ಇಂಡಿಯಾದ ಆಟಗಾರ ಹಾರ್ದಿಕ್ ಪಾಂಡ್ಯ ಹೊಸ ವರ್ಷದ ಮೊದಲ ದಿನವೇ ವೈವಾಹಿಕ ಜೀವನ ಆರಂಭಕ್ಕೆ ಮುನ್ನುಡಿ ಬರೆದಿದ್ದಾರೆ. ೨೭ ವರ್ಷದ ಸರ್ಬಿಯ ಮೂಲದ ನಟಿ ನಟಶಾ ಸ್ಟ್ಯಾನ್ಕೋವಿಕ್ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು ಉಂಗುರ ಬದಲಾಯಿಸಿಕೊಂಡಿದ್ದಾರೆ.
ನಾನು ನಿನ್ನವನು, ನೀನು ನನ್ನವಳು ಇಡೀ ಹಿಂದೂಸ್ತಾನ್ಗೆ ಗೊತ್ತಿದೆ ಎಂದು ನಿಶ್ವಿತಾರ್ಥದ ವೀಡಿಯೋ ಮತ್ತು ಫೋಟೋಗಳನ್ನು ಹಾರ್ದಿಕ್ ಪಾಂಡ್ಯಾ ಹಂಚಿಕೊಂಡಿದ್ದಾರೆ. ಜಲರಾಶಿಯ ಮಧ್ಯೆ ತಮ್ಮ ವೈವಾಹಿಕ ಜೀವನದ ಕಡೆಗಿನ ಹೆಜ್ಜೆಯ ಖುಷಿಯಲ್ಲಿ ಮುತ್ತಿಕೊಂಡಿದ್ದಾರೆ.
ಮುಂಬೈನಲ್ಲಿ ನೆಲೆಸಿರುವ ಸೈಬಿರೀಯಾ ಮೂಲದ ನಟಿ ಮತ್ತು ಡ್ಯಾನ್ಸರ್ ಆಗಿರುವ ನಟಶಾ ೨೦೧೩ರಲ್ಲಿ ಪ್ರಕಾಶ್ ಝಾ ನಿರ್ದೇಶನದ ಸತ್ಯಾಗ್ರಹ ಸಿನಿಮಾ ಮೂಲಕ ಹಿಂದಿ ಸಿನಿ ಲೋಕಕ್ಕೆ ಪ್ರವೇಶಿಸಿದರು.
ಶಾರುಖ್ ಖಾನ್ ಅಭಿನಯದ ಝೀರೋದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಈಕೆ ಇಮ್ರಾನ್ ಹಶ್ಮಿ ನಟನೆ ದಿ ಬಾಡಿ ಸಿನಿಮಾ ಝಲಕ್ ದಿಕ್ಲಾ ಜಾ ರೀಲೋಡೆಡ್ ಹೆಸರಿನ ಹಾಡಿನಲ್ಲಿ ಕುಣಿದಿದ್ದಾಳೆ.
೨೦೧೪ರಲ್ಲಿ ಹಿಂದಿ ಬಿಗ್ಬಾಸ್ನಲ್ಲೂ ಮತ್ತು ೨೦೧೯ರಲ್ಲಿ ನಾಚ್ ಬಲಿಯೇ-೯ ಸೀಸನ್ನಲ್ಲೂ ಕಾಣಿಸಿಕೊಂಡಿದ್ದಾಳೆ.
೨೦೧೪ರಲ್ಲಿ ಬಿಡುಗಡೆಯಾದ ಸೂಪರ್ ಹಿಟ್ ಡಿಜೆ ವಾಲೇ ಬಾಬು ಮ್ಯೂಸಿಕ್ ಆಲ್ಬಂನಲ್ಲೂ ಈಕೆ ಕುಣಿದಿದ್ದಾಳೆ.
ಇನ್ನು ಬೆನ್ನು ನೋವಿನ ಹಿನ್ನೆಲೆಯಲ್ಲಿ ಲಂಡನ್ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ಗುಣಮುಖರಾಗುತ್ತಿರುವ ಹಾರ್ದಿಕ್ ಪಾಂಡ್ಯಗೆ ಬಾಂಗ್ಲಾ ದೇಶ ಮತ್ತು ವೆಸ್ಟ್ಇಂಡೀಸ್ ವಿರುದ್ಧದ ಏಕದಿನ ಮತ್ತು ಟ್ವಿ-ಟ್ವೆಂಟಿ ಸರಣಿಯಿಂದ ವಿಶ್ರಾಂತಿ ನೀಡಲಾಗಿತ್ತು. ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ಹಾಗೂ ನ್ಯೂಜಿಲೆಂಡ್ ವಿರುದ್ಧದ ಸರಣಿಯಿಂದಲೂ ಹೊರಗುಳಿದಿದ್ದಾರೆ. ಹಾರ್ದಿಕ್ ಪಾಂಡ್ಯಾ ಆಡಿರುವ ಕಡೆಯ ಪಂದ್ಯ ಎಂದರೆ ೨೦೧೯ರ ಸೆಪ್ಟೆಂಬರ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟ್ವಿ-ಟ್ವೆಂಟಿ ಪಂದ್ಯ.