ಕೋವಿಡ್-19 ಶಂಕಿತನನ್ನು ಗುಂಡಿಟ್ಟು ಕೊಂದ ಸರ್ಕಾರ..!

ಕೊರೋನಾ ಆಲಿಯಾಸ್ ಕೋವಿಡ್-19 ಅಂದ್ರೆನೇ ಭಯ ಆಗುತ್ತೆ. ಕೋವಿಡ್-19 ವೈರಸ್ ಸೋಕಿದ ಶಂಕೆ ಮೇರೆಗೆ ವ್ಯಕ್ತಿಯೊಬ್ಬನನ್ನು ಸೈನಿಕರು ಗುಂಡಿಟ್ಟು ಕೊಂದ ಘಟನೆ ಉತ್ತರ ಕೋರಿಯಾದಲ್ಲಿ ನಡೆದಿದೆ.

ಉತ್ತರ ಕೋರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಹೇಳಿಕೇಳಿ ಹುಚ್ಚು ನಿರ್ಧಾರಗಳಿಗೆ ಹೆಸರುವಾಸಿ. ಕೋವಿಡ್-19 ವೈರಸ್ ಉತ್ತರ ಕೋರಿಯಾಗೆ ಎಂಟ್ರಿ ಕೊಡಬಾರದು ಎನ್ನುವ ಉದ್ದೇಶಕ್ಕೆ ಕಠಿಣ ನಿಯಮಗಳನ್ನು ಜಾರಿ ಮಾಡಿದ್ದಾರೆ.

ಇತ್ತೀಚಿಗೆ ಉತ್ತರ ಕೋಇಯಾದ ಅಧಿಕಾರಿಯೊಬ್ಬರು ಚೀನಾ ಪ್ರವಾಸ ಕೈಗೊಂಡು ಹಿಂತಿರುಗಿದ್ದರು. ಆ ಅಧಿಕಾರಿಗೆ ಕೋವಿಡ್-19 ಸೋಂಕು ತಗುಲಿದೆ ಎಂಬ ಅನುಮಾನದ ಹಿನ್ನೆಲೆಯಲ್ಲಿ ಉತ್ತರ ಕೋರಿಯಾ ಸರ್ಕಾರ ತೀವ್ರ ನಿಗಾ ಇರಿಸಿತ್ತು. ಮನೆಯಿಂದ ಹೊರಗೆ ಬಾರದಂತೆ ಆತನಿಗೆ ಸೂಚಿಸಲಾಗಿತ್ತು.

ಆದರೆ, ಈ ಎಚ್ಚರಿಕೆ ಉಲ್ಲಂಘಿಸಿ ಆ ಅಧಿಕಾರಿ ಸಾರ್ವಜನಿಕ ಶೌಚಾಲಯದ ಮುಂದೆ ತೂರಾಡುತ್ತಾ ಕಾಣಿಸಿಕೊಂಡಿದ್ದಾರೆ. ಇದನ್ನು ಗಮನಿಸಿದ ಉತ್ತರ ಕೋರಿಯಾ ಸೇನೆ ಕೂಡಲೇ ಆ ಅನಾರೋಗ್ಯಪೀಡಿತ ಅಧಿಕಾರಿಯನ್ನು ಬಂಧಿಸಿ, ಗುಂಡಿಟ್ಟು ಕೊಂದಿದ್ದಾರೆ.

ಕೋವಿಡ್-19 ವೈರಸ್ ಇತರರಿಗೆ ಹರಡಬಾರದು ಎನ್ನುವ ಉದ್ದೇಶದಿಂದ ಈ ನಿರ್ಣಯ ಕೈಗೊಂಡಿದ್ದಾಗಿ ಉತ್ತರ ಕೋರಿಯಾ ಹೇಳಿಕೊಂಡಿದೆ. ಜೊತೆಗೆ ನಮ್ಮ ದೇಶದಲ್ಲಿ ಕೊರೋಬಾ ಸೋಂಕಿತರು ಇಲ್ಲ ಎಂದು ಸ್ಪಷ್ಟಪಡಿಸಿದೆ.

LEAVE A REPLY

Please enter your comment!
Please enter your name here