ಕೋವಿಡ್ ಸೋಂಕಿಗೆ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಪುತ್ರ ಶ್ರೀರಾಮು ಕಣಗಾಲ್ ಬಲಿ ಆಗಿದ್ದಾರೆ. ಇವರು ಇವತ್ತು ಬೆಳಗ್ಗೆ 5 ಗಂಟೆಗೆ ಇಹಲೋಕ ತ್ಯಜಿಸಿದ್ದಾರೆ. ನೃತ್ಯಗಾರರಾಗಿದ್ದ ಶ್ರೀರಾಮು ಅವರು ಕಣಗಾಲ್ ನೃತ್ಯಾಲಯವನ್ನು ನಡೆಸುತ್ತಿದ್ದರು.
ಸೋಮವಾರವಷ್ಟೇ ಕೋವಿಡ್ ಸೋಂಕಿಗೆ ಕನ್ನಡದ ಖ್ಯಾತ ನಿರ್ಮಾಪಕ ಮತ್ತು ನಟಿ ಮಾಲಾಶ್ರೀ ಅವರ ಪತಿ ಕೋಟಿ ರಾಮು ಅವರು ಮೃತಪಟ್ಟಿದ್ದರು.