ಕೋವಿಡ್ ಲಕ್ಷಣಗಳಿರುವವರು ಆತಂಕ ಪಡಬೇಡಿ, ಆಪ್ತಮಿತ್ರ ಸಹಾಯವಾಣಿ 14410ಗೆ ಕರೆಮಾಡಿ!

ಕೋವಿಡ್ ಲಕ್ಷಣಗಳಿರುವವರು ಮನೆಯಿಂದ ಹೊರಬರಬೇಡಿ, ಆತಂಕ ಪಡಬೇಡಿ, ಆಪ್ತಮಿತ್ರ ಸಹಾಯವಾಣಿ 14410ಗೆ ಕರೆಮಾಡಿ! ಹೌದು, ಕರ್ನಾಟಕದಲ್ಲಿ ಕೊರೋನಾ ವಿರುದ್ಧದ ಕಠಿಣ ಹೋರಾಟದಲ್ಲಿ ರಾಜ್ಯದ ಜನರನ್ನು ಒಗ್ಗೂಡಿಸಲು ರಾಜ್ಯ ಸರ್ಕಾರ ” ಆಪ್ತಮಿತ್ರ” ಸಹಾಯವಾಣಿ, ಮೊಬೈಲ್ ಆ್ಯಪ್ ಆರಂಭಿಸಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ  ಎಪ್ರಿಲ್‌ 22 ರ ಬುಧವಾರದಂದು ಗೃಹ ಕಚೇರಿ ಕೃಷ್ಣಾದಲ್ಲಿ 14410 ಸಂಖ್ಯೆಯ ಆಪ್ತಮಿತ್ರ ಸಹಾಯವಾಣಿ ಹಾಗೂ ಆಪ್ತಮಿತ್ರ ಮೊಬೈಲ್ ಆ್ಯಪ್‌ ಅನ್ನು ಲೋಕಾರ್ಪಣೆ ಮಾಡಿದ್ದಾರೆ.

ಜ್ವರ, ಒಣ ಕೆಮ್ಮು, ಉಸಿರಾಟದ ತೊಂದರೆ, ಇನ್‌ಫ್ಯುಯೆನ್ಜಾ ಮಾದರಿಯ ರೋಗ ಲಕ್ಷಣಗಳಿದ್ದಲ್ಲಿ ಆಪ್ತಮಿತ್ರ ಸಹಾಯವಾಣಿ 14410 ಕರೆ ಮಾಡಿ ಸಲಹೆ, ಮಾರ್ಗದರ್ಶನ ಪಡೆಯಬಹುದಾಗಿದೆ.

ಸೋಂಕಿನ ಲಕ್ಷಣಗಳಿರುವವರು ಆಪ್ತಮಿತ್ರಕ್ಕೆ ಕರೆ ಮಾಡಬೇಕು, ಗಂಭೀರ ಸಮಸ್ಯೆಯುಳ್ಳವರಿದ್ದರೆ ಸಂಚಾರಿ ಘಟಕದಿಂದ ಪರೀಕ್ಷೆ ಮಾಡಬೇಕು, ಅಗತ್ಯವುಳ್ಳವರನ್ನಷ್ಟೇ ವಿಶೇಷ ಆಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಒಯ್ಯಬೇಕು.

ಈ ಮೂಲಕ ಕೋವಿಡ್‌ 19 ಲಕ್ಷಣ ಇರುವ ವ್ಯಕ್ತಿಗಳಿಗೆ ಸಹಾಯವಾಣಿ ಮೂಲಕ ಸಲಹೆ ಹಾಗೂ ಮಾರ್ಗದರ್ಶನ ನೀಡಿ ಅವರಿಗೆ ಸೂಕ್ತ ಚಿಕಿತ್ಸೆಗೆ ನೆರವಾಗುವುದು ಇದರ ಮುಖ್ಯ ಉದ್ದೇಶವಾಗಿದೆ. ಕೋವಿಡ್ 19 ರೋಗಿಗಳು ಆಸ್ಪತ್ರೆಗೆ ಭೇಟಿ ನೀಡುವುದನ್ನು ತಪ್ಪಿಸುವ ಮೂಲಕ ರೋಗ ಹರಡುವ ಸಾಧ್ಯತೆಗಳನ್ನು ಕೂಡ ಕಡಿಮೆ ಮಾಡಬಹುದಾಗಿದೆ.

ಶೇ 85-90ರಷ್ಟು ಸೋಂಕಿತರು ಐದಾರು ದಿನಗಳಲ್ಲಿ ಮನೆಯಲ್ಲೇ ಇದ್ದು, ಔಷಧಗಳೂ ಬೇಕಿಲ್ಲದೆ ಗುಣಮುಖರಾಗುತ್ತಾರೆ!

LEAVE A REPLY

Please enter your comment!
Please enter your name here