ಕೋರೋನಾ ಸಂತ್ರಸ್ತರ ನೆರವಿಗೆ ನಿಂತ ಗೆಳೆಯರ ಬಳಗ

ಕೊರೋನಾ ವೈರಸ್ ನಿಂದಾಗಿ ದೇಶವೇ ಲಾಕ್‌ಡೌನ್‌ ಆಗಿದೆ. ಇದರಿಂದ ಆಹಾರ ಸಿಗದೆ ಬಡವರು, ಕೂಲಿಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಈ ಸಾಂಕ್ರಾಮಿಕ ರೋಗದ ಪರಿಣಾಮ 21 ದಿನಗಳ ಲಾಕ್ ಡೌನ್ ನಿಂದ ಇಡೀ ದೇಶ ಸ್ಥಬ್ದವಾಗಿದೆ.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮೂಡಾರು, ನಲ್ಲೂರು, ಬಜಗೋಳಿ, ಪರಿಸರದಲ್ಲಿ ನೂರಾರು ಕುಟುಂಬಗಳು ಒಪ್ಪೊತ್ತಿನ್ನ ಊಟಕ್ಕಾಗಿ ಪರದಾಡುವ ಪರಿಸ್ಥಿತಿ ಇರುವುದರಿಂದ ಸರಕಾರ ಕೊಡುವ ಸವಲತ್ತುಗಳನ್ನು ಗಮನದಲ್ಲಿರಿಸಿ, ನಿಜವಾಗಿ ಅಗತ್ಯ ಸಾಮಾಗ್ರಿಗಳ ಅವಶ್ಯಕತೆಯಿರುವ ಕಾರ್ಮಿಕ ಹಾಗೂ ಅವರ ಕುಟುಂಬಗಳಿಗೆ ಉಳಿದ ದಿನಬಳಕೆಯ ಸಾಮಗ್ರಿಗಳಾದ ಕುಚುಲಕ್ಕಿ, ಒಣಮೆಣಸು,ಉಪ್ಪು,ಹುಣಸೆಹುಳಿ, ಟೀಪುಡಿ, ಸಕ್ಕರೆ,ಸೋಪು,ಬೇಳೆ,ತೆಂಗಿನಕಾಯಿ,ಎಣ್ಣೆ ಮುಂತಾದ ಅಗತ್ಯ ವಸ್ತುಗಳನ್ನು ಸಂಕಷ್ಟದಲ್ಲಿರುವವರೆಗೆ ಪ್ರತ್ಯೇಕವಾದ ವಾಹನದಲ್ಲಿ ಹುಡುಕಿ ಕೊಡುತ್ತಿದ್ದಾರೆ.

ದಿನಬಳಕೆಯ ಸಾಮಗ್ರಿಗಳನ್ನು ಪ್ರತ್ಯೇಕ ವಾಹನದಲ್ಲಿ ಸಾಗಿಸಲು ಸಿದ್ದತೆ

ವ್ಯವಸ್ಥಿತವಾಗಿ ಸುಮಾರು 200 ಕುಟುಂಬಗಳಿಗೆ ತಲುಪಿಸುವ ಸಂಕಲ್ಪವನ್ನು ಸುನೀಲ್ ಕುಮಾರ್ ಬಜಗೊಳಿ (ನಿರ್ದೇಶಕರು ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್) ಸುಧಾಕರ್ ಶೆಟ್ಟಿ (ತಾಲೂಕು ಪಂಚಾಯತ್ ಸದಸ್ಯರು) ಪೃಥ್ವಿರಾಜ್ ಜೈನ್ ( ಮಾಜಿ ಪಂಚಾಯತ್ ಸದಸ್ಯರು) ಇವರುಗಳ ನೇತೃತ್ವದಲ್ಲಿ ಗೆಳೆಯರ ಬಳಗದ ಸಹಕಾರದೊಂದಿಗೆ ಮಾಡಿರುತ್ತಾರೆ.

LEAVE A REPLY

Please enter your comment!
Please enter your name here