ದೆಹಲಿ ಚುನಾವಣಾ ಪ್ರಚಾರದ ವೇಳೆ ಕೋಮು ಪ್ರಚೋದನಕಾರಿ ಭಾಷಣ ಮಾಡಿದ್ದ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಮತ್ತು ದೆಹಲಿ ಬಿಜೆಪಿ ಸಂಸದ ಪರ್ವೆಶ್ ವರ್ಮಾಗೆ ಚುನಾವಣಾ ಆಯೋಗ ಪ್ರಚಾರ ನಿಷೇಧ ಹೇರಿದೆ.
ಪ್ರಚಾರ ಮಾಡದಂತೆ ಅನುರಾಗ್ಗೆ ಮೂರು ದಿನಗಳ ನಿಷೇಧ ಹೇರಿದ್ದರೆ, ಪರ್ವೆಶ್ಗೆ ನಾಲ್ಕು ದಿನಗಳ ನಿಷೇಧ ಹೇರಿದೆ.
ಪ್ರಚಾರದ ವೇಳೆ ಅನುರಾಗ್ ಠಾಕೂರ್ ದೇಶದ್ರೋಹಿಗಳಿಗೆ ಗುಂಡಿಕ್ಕಿ ಎಂಬ ಘೋಷಣೆ ಮೊಳಗಿಸಿದ್ದರು.
ವಿಚಿತ್ರ ಅಂದ್ರೆ ಚುನಾವಣಾ ಆಯೋಗದ ಎಚ್ಚರಿಕೆಯ ಹೊರತಾಗಿಯೂ ಪರ್ವೆಶ್ ಮತ್ತೊಂದು ವಿವಾದ ಹೇಳಿಕೆ ನೀಡಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ರನ್ನು ಭಯೋತ್ಪಾದಕ ಎಂದು ಕರೆದಿದ್ದಾರೆ.
ಈ ಹಿನ್ನೆಲೆಯಲ್ಲಿ ಆಯೋಗ ಮತ್ತೊಂದು ನೋಟಿಸ್ ನೀಡಿದ್ದು ಫೆಬ್ರವರಿ ಆರರವರೆಗೆ ಅಂದರೆ ದೆಹಲಿಯಲ್ಲಿ ಬಹಿರಂಗ ಪ್ರಚಾರ ಕೊನೆಗೊಳ್ಳುವವರೆಗೂ ಪ್ರಚಾರದಿಂದ ನಿರ್ಬಂಧ ಹೇರುವ ನಿರೀಕ್ಷೆ ಇದೆ.