ಕೊಲ್ಲೂರು ಮೂಕಾಂಬಿಕಾ ದರ್ಶನ ಸಮಯ ಪ್ರಕಟ

ಕಳೆದ 70 ದಿನಗಳಿಗೂ ಹೆಚ್ಚು ಕಾಲ ಮುಚ್ಚಲಾಗಿದ್ದ ದೇವಾಲಯಗಳು ಮತ್ತು ಪ್ರಾರ್ಥನಾ ಮಂದಿರಗಳ ಬಾಗಿಲುಗಳು ಸೋಮವಾರ ತೆಗೆಯಲಾಗುತ್ತಿದ್ದು. ದಕ್ಷಿಣ ಭಾರತದ ಪ್ರಸಿದ್ಧ ದೇವಿ ದೇವಸ್ಥಾನ ಆಗಿರುವ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ನಾಳೆ ತೆರೆಯಲಿದೆ.

ಈ ಹಿನ್ನಲೆಯಲ್ಲಿ ಉಡುಪಿ ಜಿಲ್ಲೆಯ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದ ದೇಗುಲದ ದರ್ಶನ ಸಮಯ ನಿಗದಿಯಾಗಿದೆ.

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಜಿಲ್ಲಾಡಳಿತ ಅಧಿಕಾರಿಗಳು,ಅರ್ಚಕರು ಭಾಗಿಯಾಗಿದ್ದ ಈ ಸಭೆಯಲ್ಲಿ ದರ್ಶನ ಸಮಯದ ತೀರ್ಮಾನ ಮಾಡಲಾಗಿದೆ. ಅದರಂತೆ  ಬೆಳಗ್ಗೆ 5.30- 7.30ರ ತನಕ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, ನಂತರ ಬೆಳಗ್ಗೆ 7.30 ರಿಂದ 10.30ರ ತನಕ ದೇಗುಲ ಮುಚ್ಚಿರುತ್ತದೆ.

ಪುನಃ ಬೆಳಿಗ್ಗೆ 10.30 ರಿಂದ  ಮಧ್ಯಾಹ್ನ 1.30 ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಇದ್ದು ಮಧ್ಯಾಹ್ನ 1.30 ರಿಂದ 3 ಗಂಟೆವರೆಗೆ ದೇಗುಲ ಮುಚ್ಚಿರುತ್ತದೆ.

ಅದೇ ರೀತಿ ಮಧ್ಯಾಹ್ನ 3ರಿಂದ ಸಂಜೆ 6 ಗಂಟೆಯವರೆಗೆ ದೇಗುಲ ತೆರೆದಿರುತ್ತದೆ, ಹಾಗೂ ಸಂಜೆ 6 ರಿಂದ 8.30 ಮೂಕಾಂಬಿಕೆಗೆ ಮಹಾಪೂಜೆ ನಡೆಯುತ್ತದೆ. ಆದರೆ ಈ ಮಹಾಪೂಜೆ ಸಂದರ್ಭ ಭಕ್ತರಿಗೆ ಅವಕಾಶ ಇರುವುದಿಲ್ಲ ಎಂದು ಆಡಳಿತ ಮಂದಿ ಪ್ರಕಟಿಸಿದೆ.

LEAVE A REPLY

Please enter your comment!
Please enter your name here