ಕೊರೋನಾ ಹೊಡೆತ – ಪ್ರಧಾನಿ ಮೋದಿ ಸರ್ಕಾರದಿಂದ ಮಾರುಕಟ್ಟೆ ಸಾಲ ಎತ್ತುವಳಿ 12 ಲಕ್ಷ ಕೋಟಿ ರೂಪಾಯಿಗೆ ಹೆಚ್ಚಳ

ಲಾಕ್‌ಡೌನ್‌ ಹಿನ್ನೆಯಲ್ಲಿ ಆರ್ಥಿಕ ಸ್ಥಗಿತಗೊಂಡಿರುವ ಬೆನ್ನಲೇ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮಾರುಕಟ್ಟೆ ಸಾಲ ಎತ್ತುವಳಿ ಅಂದಾಜನ್ನು ಸುಮಾರು ೪.೨ ಲಕ್ಷ ಕೋಟಿ ರೂಪಾಯಿಯಷ್ಟು ಹೆಚ್ಚಳಗೊಳಿಸಿದೆ.

ಈ ಆರ್ಥಿಕ ವರ್ಷದಲ್ಲಿ ಮಾರುಕಟ್ಟೆ ಸಾಲ ಎತ್ತುವಳಿ ಅಂದಾಜನ್ನು ಬಜೆಟ್‌ನಲ್ಲಿ ತೋರಿಸಲಾಗಿರುವ 7.8 ಲಕ್ಷ ಕೋಟಿ ರೂಪಾಯಿಯಿಂದ 12 ಲಕ್ಷ ಕೋಟಿ ರೂಪಾಯಿಗೆ ಹೆಚ್ಚಿಸಲಾಗಿದೆ.

ಆರ್‌ಬಿಐ ಸಲಹೆಯ ಜೊತೆಗೆ ಕೊರೋನಾದಿಂದ ಉಂಟಾಗಿರುವ ಆರ್ಥಿಕ ಚಟುವಟಿಕೆ ಸ್ಥಗಿತದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸರ್ಕಾರ ಹೇಳಿದೆ.

ಕಳೆದ ಆರ್ಥಿಕ ವರ್ಷದಲ್ಲಿ ಸರ್ಕಾರ 5.71 ಲಕ್ಷ ಕೋಟಿ ರೂಪಾಯಿ ಮೊತ್ತದ ಮಾರುಕಟ್ಟೆ ಸಾಲ ಎತ್ತುವಳಿ ಮಾಡಿತ್ತು. ಈ ಆರ್ಥಿಕ ವರ್ಷದಲ್ಲಿ ಮಾರುಕಟ್ಟೆ ಎತ್ತುವಳಿಯ ಅಂದಾಜನ್ನು ಶೇಕಡಾ  24ರಷ್ಟು ಹೆಚ್ಚಳ ಮಾಡಲಾಗಿತ್ತು.

ಕೇಂದ್ರ ಸರ್ಕಾರಕ್ಕೆ ಆದಾಯದ ಕೊರತೆ ಉಂಟಾದಾಗ ಆರ್‌ಬಿಐ ಮೂಲಕ ಹೊರಡಿಸಲಾಗುವ ಸೆಕ್ಯೂರಿಟಿ ಬಾಂಡ್‌ಗಳ ಸರ್ಕಾರ ಮಾರುಕಟ್ಟೆ ಸಾಲ ಎತ್ತುವಳಿಯನ್ನು ಮಾಡುತ್ತದೆ.

LEAVE A REPLY

Please enter your comment!
Please enter your name here