ಕೊರೋನಾ ವೈರಸ್‌ ಲಾಕ್‌ ಡೌನ್‌ ನಲ್ಲಿ ನಾವು ಕಲಿಯಬೇಕಾದ ಪಾಠ

ಕೊರೋನಾ ವೈರಸ್‌ ಲಾಕ್‌ ಡೌನ್‌ ನಮ್ಮ ಜೀವನದಲ್ಲಿ ಇಲ್ಲಿಯ ತನಕ ನಾವು ಮಾಡಿದ ತಪ್ಪುಗಳನ್ನು ಇನ್ನಾದರೂ ತಿದ್ದಿಕೊಳ್ಳುವ ಅವಕಾಶವನ್ನು ನೀಡಿದಂತಿದೆ.

ಹೌದು! ತುಂಬಾ ಜನರ 2020 ರ ನ್ಯೂ ಇಯರ್‌ ರೆಸೊಲ್ಯೂಶನ್‌ ಏನಪ್ಪಾ ಅಂತ ಕೇಳಿದರೆ, ಇಲ್ಲಿಯವರೆಗೆ ಬಹಳಷ್ಟು ವಿಚಾರಗಳಲ್ಲಿ ದುಂದುವೆಚ್ಚ ಮಾಡಿದ್ದೇವೆ ಇನ್ನಾದರೂ ಈ ತಪ್ಪನ್ನು ಮಾಡದೇ, ಈ ವರ್ಷ ಮುಗಿಯುವುದರೊಳಗೆ ನಮ್ಮ ಖಾತೆಯಲ್ಲಿ ಕಡಿಮೆಯೆಂದರೂ ಒಂದೈದು ಲಕ್ಷವಾದರೂ ಉಳಿತಾಯ ಮಾಡಿರಬೇಕು ಅಂದುಕೊಂಡಿದ್ದರು.

ಹೀಗೆ ಅಂದುಕೊಂಡವರು ಬಹಳಷ್ಟು ಮಂದಿ ಆದರೆ ತಮ್ಮ ಅದೃಷ್ಟ ಪರೀಕ್ಷೆಯನ್ನು ಈ ಬಾರಿ ಮಾಡಿಕೊಳ್ಳುವ ಸಮಯವಲ್ಲವೆಂದು ಖಚಿತವಾಗಿದೆ. ಯಾಕೆಂದರೆ ಈ ಕೋವಿಡ್-‌19 ರ ಲಾಕ್ ಡೌನ್‌ ನಮ್ಮ ಈ ಅದೃಷ್ಟ ಪರೀಕ್ಷೆಗೆ ಸವಾಲಾಗಿದೆ.

ಈ ಸಂದರ್ಭದಲ್ಲಿ ನಾವು ದುಂದು ವೆಚ್ಚಗಳಿಗೆ ಖರ್ಚು ಮಾಡುವುದಕ್ಕೆ ಕಡಿವಾಣ ಹಾಕಬೇಕಾದ್ದು ಅನಿವಾರ್ಯ. ಮುಖ್ಯವಾಗಿ ಈ ಸಂದರ್ಭದಲ್ಲಿ ನಾವು ಹಣಕಾಸಿನ ಯೋಜನೆಗಳನ್ನು ಹಾಕಿಕೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಕಠಿಣ ಪರಿಸ್ಥಿತಿಯನ್ನು ಎದುರಿಸಬೇಕಾದೀತು.

ಹಣಕಾಸಿನ ಯೋಜನೆಗಳನ್ನು ರೂಪಿಸುವುದು ತುಂಬಾ ಸುಲಭ ಈ ರೀತಿ ನಾವು ಅನುಸರಿಸಿದರೆ ಮುಂದೆ ಪಶ್ಚಾತಾಪ ಪಡಬೇಕಾಗಿಲ್ಲ!

ಹೊಸ ವರ್ಷದ ಆಚರಣೆಯ ಸಂತಸದಲ್ಲಿ ಜನವರಿ ಮುಗಿದದ್ದೇ ಗೊತ್ತಾಗಲಿಲ್ಲ! ಇನ್ನು ಫೆಬ್ರವರಿ ತಿಂಗಳಂತೂ ಇಯರ್‌ ಎಂಡ್‌ ಟಾರ್ಗೆಟ್‌ ಮುಗಿಸುವುದರಲ್ಲೇ ಕಳೆದು ಹೋಯ್ತು. ಇನ್ನು ಮಾರ್ಚ್‌ನಲ್ಲಿ ಉಳಿತಾಯದ ಪ್ಲಾನ್‌ ಶುರು ಮಾಡಬೇಕೆಂದು ಅಂದುಕೊಂಡವರಿಗೆಲ್ಲಾ ಶಾಕ್‌ ಕೊಡ್ತು ನೋಡಿ ಈ ಕೋವಿಡ್-‌19 ರ ಲಾಕ್ ಡೌನ್‌.

ಕೆಲಸ ಇರುತ್ತೋ ಇಲ್ಲವೋ ಎನ್ನುವ ಭಯ ಆವರಿಸಿಕೊಂಡಿರುವ ನಮ್ಮಲ್ಲಿ ಇನ್ನು ಉಳಿತಾಯದ ಮಾತೆಲ್ಲಿಂದ ಬಂತು? ಲಾಕ್‌ ಡೌನ್‌ ಶುರುವಾದ ನಂತರ ಬಹಳಷ್ಟು ಜನ ಮನೆಯಿಂದ ಕೆಲಸ ಮಾಡುತ್ತಿದ್ದಾರೆ, ಇನ್ನು ಮನೆಯಲ್ಲಿ ಕುಳಿತು ಕೆಲಸ ಮಾಡಿದರೂ ಮನಸ್ಸಿಗೆ ಸಮಾಧಾನವಿಲ್ಲ.

ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಕಂಪೆನಿಯು ನಷ್ಟದಲ್ಲಿದೆ ಎಂಬ ಗುಸು ಗುಸು ಮಾತುಗಳು ಕೇಳಿಬರುತ್ತಿವೆ, ಎಷ್ಟೋ ಕಂಪೆನಿಗಳು ಕೆಲಸವಿಲ್ಲದೇ ನಷ್ಟವನ್ನು ಅನುಭವಿಸಿ ತಮ್ಮ ನೌಕರರಿಗೆ ಸಂಬಳ ಕೊಡಲಾಗದೇ ಅವರನ್ನೆಲ್ಲಾ ಕೆಲಸದಿಂದ ಕೈಬಿಡಲಾಗುತ್ತಿದೆ. ಇನ್ನೂ ಕೆಲವು ಕಂಪೆನಿಗಳು ಅರ್ಧ ಸಂಬಳವನ್ನಷ್ಟೇ ನೀಡುತ್ತಿವೆ. ಹೀಗಿರುವಾಗ ಉದ್ಯೋಗದ ಅಭದ್ರತೆ ಪ್ರತಿಯೊಬ್ಬರಲ್ಲೂ ಕಾಣುತ್ತಿದೆ.

ಹೀಗೇ ಲಾಕ್‌ ಡೌನ್‌ ಪ್ರಾರಂಭವಾಗಿ ವಾರಗಳೇ ಆಯ್ತು, ಈಗ ಪ್ರತಿಯೊಬ್ಬರಿಗೂ ಅರಿವಾಗುತ್ತಿರುವ ವಿಷಯವೇನೆಂದರೆ ತಮ್ಮ ಅನಗತ್ಯ ದುಂದುವೆಚ್ಚಗಳ ಬಗ್ಗೆ. ಹೌದು ತಾವೆಷ್ಟು ಖರ್ಚು ಮಾಡುತ್ತಿದ್ದೆವು, ಯಾವುದು ಅಗತ್ಯ ಖರ್ಚು ಮತ್ತು ಯಾವುದು ಅನಗತ್ಯ ಖರ್ಚುಗಳೆಂದು ಈಗ ಒಂದು ಸ್ಪಷ್ಟ ಚಿತ್ರಣ ಸಿಕ್ಕಿದೆ.

1.ಅಗತ್ಯ ಮತ್ತು ಅವಶ್ಯಕತೆಗಳ ವ್ಯತ್ಯಾಸ ತಿಳಿದುಕೊಳ್ಳಿ

ಶಾಪಿಂಗ್‌ ಹೋದ ಸಂದರ್ಭದಲ್ಲಿ ನೋಡಿದ್ದೆಲ್ಲವೂ ಖರೀದಿಸಬೇಕೆಂದೇನಿಲ್ಲ, ನಿಮಗೆ ಯಾವಾಗ ಅಗತ್ಯವಿದೆಯೋ ಆಗ ಮಾತ್ರ ವಸ್ತುಗಳನ್ನು ಖರೀದಿಸಿ.ನಾವು ನಮ್ಮ ಬಯಕೆ ಮತ್ತು ಅಗತ್ಯತೆಗಳ ವ್ಯತ್ಯಾಸವನ್ನು ತಿಳಿದುಕೊಂಡರೆ ಸಾಕು ಉಳಿದದ್ದೆಲ್ಲಾ ತಂತಾನೆ ಸರಿಯಾಗುತ್ತಾ ಹೋಗುತ್ತದೆ. ಮುಂಚೆ ಶಾಪಿಂಗ್ ಗೆ ಹೋದ ಸಂದರ್ಭದಲ್ಲಿ ನೋಡಿದ್ದೆಲ್ಲವನ್ನೂ….ಉಪಯೋಗಕ್ಕೆ ಬರುತ್ತದೆಯೋ ಇಲ್ಲವೋ ಯೋಚನೆಯೂ ಇಲ್ಲದೇ ನಾವು ಕೈಗೆ ಸಿಕ್ಕಿದ್ದು, ನೋಡಿದ್ದೆಲ್ಲಾ ತೆಗೆದುಕೊಳ್ಳುತ್ತಿದ್ದೆವು .

2.ಆನ್ ಲೈನ್‌ ಫುಡ್‌ ಆರ್ಡರ್‌ ಮಾಡದೇ ಹಣವನ್ನು ಉಳಿತಾಯ ಮಾಡಿ

ಮನೆಯಲ್ಲೇ ಇರುವುದರಿಂದ ಪೌಷ್ಟಿಕಾಂಶವುಳ್ಳ ಆಹಾರವನ್ನು ನಾವು ಸೇವಿಸುತ್ತಿದ್ದೇವೆ, ಇದು ಇನ್ನೊಂದು ರೀತಿಯ ಹಣಕಾಸಿನ ಉಳಿತಾಯಕ್ಕೆ ದಾರಿಮಾಡಿಕೊಟ್ಟಿದೆ. ಆನ್‌ ಲೈನ್‌ ಆಹಾರವನ್ನು ನಾವು ಆರ್ಡರ್‌ ಮಾಡುವ ಸಂದರ್ಭದಲ್ಲಿ ಅದಕ್ಕೆ ವೆಚ್ಚವಾಗುವ ಎಕ್ಸ್ಟ್ರಾ ಹಣದ (ಟ್ಯಾಕ್ಸ್‌,‌ ಡೆಲಿವರಿ ಚಾರ್ಜ್) ಬಗ್ಗೆ ಗಮನ ಕೊಡುತ್ತಿರಲಿಲ್ಲ. ಅಷ್ಟೇ ಅಲ್ಲದೇ ಯಾವಾಗಲೂ ಹೊರಗಿನ ಆಹಾರವನ್ನು ತಿಂದು ನಮ್ಮ ಆರೋಗ್ಯವನ್ನು ನಾವೇ ಅಪಾಯದ ಅಂಚಿಗೆ ತಂದಿಡುತ್ತಿದ್ದೆವು. ಲಾಕ್ ಡೌನ್‌ ನಮಗೆ ಮನೆಯಲ್ಲಿಯೇ ರುಚಿಕರ ವೈವಿಧ್ಯಮಯ ಹಾಗೂ ಅರೋಗ್ಯಕರ ಆಹಾರ ತಯಾರಿಸಿಕೊಳ್ಳುವ ಪಾಠವನ್ನು ಕಲಿಸಿಕೊಟ್ಟಿದೆ.

3. ನಾವು ಆಫೀಸಿಗೆ ಪ್ರಯಾಣಿಸಲು ಖರ್ಚು ಮಾಡುತ್ತಿದ್ದ ಹಣ :

ನಮ್ಮಲ್ಲಿ ಬಹಳಷ್ಟು ಮಂದಿಗೆ ಆಫೀಸ್‌ನಿಂದ ಕ್ಯಾಬ್‌ ಸವಲತ್ತು ಒದಗಿಸಿದ್ದಾರೆ, ಇನ್ನೂ ಕೆಲವರು ಬಸ್‌, ಆಟೋ,ಮೆಟ್ರೋ,ಓಲಾ ಊಬರ್‌ ಗಳನ್ನು ಅವಲಂಬಿಸಿದ್ದೇವೆ. ಈ ಲಾಕ್‌ ಡೌನ್‌ ನಿಂದಾಗಿ ನಾವು ಪ್ರಯಾಣ ಮಾಡುವ ಸನ್ನಿವೇಶಗಳು ಇಲ್ಲವಾಗಿವೆ. ಹೀಗಾಗಿ ಪರಿಸರ ಮಾಲಿನ್ಯ ಕಡಿಮೆಯಾಗುವುದರ ಜೊತೆಗೆ ನಾವು ಮೆಡಿಕಲ್‌ ವೆಚ್ಚವನ್ನು ಕಡಿಮೆ ಮಾಡಿದಂತಾಗುತ್ತದೆ. ನಾವೂ ಚೆನ್ನಾಗಿರುತ್ತೇವೆ ಹಾಗೂ ನಮ್ಮ ಪರಿಸರವೂ ಹಚ್ಚಹಸುರಿನಿಂದ ಕಂಗೊಳಿಸುತ್ತವೆ.

LEAVE A REPLY

Please enter your comment!
Please enter your name here